ಯಾವಾಗಲೂ ಒಟ್ಟಿಗೆ ಇರುವ ಕಪಲ್ಸ್
ಈ ಗುಂಪಿಗೆ ಸೇರುವ ಕಪಲ್ಸ್ (couples) ಯಾವಾಗಲೂ ಒಟ್ಟಿಗೆ ಇರುತ್ತಾರೆ. ಅದು ಎಲ್ಲಿಗಾದರೂ ಹೋಗುತ್ತಿರಲಿ, ಏನನ್ನಾದರೂ ತಿನ್ನುತ್ತಿರಲಿ, ಎಲ್ಲಾ ಕೆಲಸವನ್ನು ಸಹ ಈ ಕಪಲ್ಸ್ ಜೊತೆ ಜೊತೆಯಾಗಿಯೇ ಮಾಡುತ್ತಾರೆ.
ಆನ್ & ಆಫ್ ಕಪಲ್ಸ್ (on and off couples)
ಈ ಜೋಡಿಗಳು ಹೇಗೆಂದರೆ ಅವರು ಒಂದು ಕ್ಷಣ ಜಗಳವಾಡುತ್ತಿದ್ದಾರೆ ಮತ್ತು ಮುಂದಿನ ಕ್ಷಣ ಅವರು ಪ್ರೀತಿಯಲ್ಲಿ ತೇಲುತ್ತಾರೆ. ಇದು ಈ ದಂಪತಿಗಳ ರಿಲೇಶನ್ ಶಿಪ್. ಅವರು ಏನೇ ಜಗಳವಾಡಿದರೂ, ಅವರ ಪ್ರೀತಿ ಪ್ರತಿ ಬಾರಿಯೂ ಗಾಢವಾಗುತ್ತದೆ.
ಪವರ್ ದಂಪತಿ
ಈ ದಂಪತಿ ಪ್ರೀತಿಯು (strong love) ನಿಜವಾದ ಪ್ರೀತಿಯಲ್ಲಿ ನಿಮ್ಮ ನಂಬಿಕೆಯನ್ನು ಬಲ ಪಡಿಸುತ್ತದೆ. ಅಷ್ಟೊಂದು ಸ್ಟ್ರಾಂಗ್ ಆಗಿರುತ್ತೆ. ಅವರನ್ನು ನೋಡಿದಾಗ, ನಿಮ್ಮ ಮನಸ್ಸು ವಾವ್ ಎಂತಹ ಜೋಡಿ ಎಂದು ಹೇಳುತ್ತೆ.
ಬಾಲ್ಯದ ಸಂಗಾತಿ (childhood friend)
ಬಾಲ್ಯದಿಂದಲೇ ಫ್ರೆಂಡ್ಸ್ ಆಗಿದ್ದು, ನಂತರ ಮದುವೆಯಾಗುವ ಜೋಡಿಗಳು ಎಂದಿಗೂ ಪರಸ್ಪರ ಬೇಸರಗೊಳ್ಳುವುದಿಲ್ಲ, ಮತ್ತು ಒಟ್ಟಿಗೆ ಬೆಳೆಯುತ್ತಾರೆ ಮತ್ತು ಅವರ ಸಂಬಂಧವನ್ನು ಇನ್ನಷ್ಟು ಸ್ಥಿರಗೊಳಿಸುತ್ತಾರೆ. ಕಾಲಾನಂತರದಲ್ಲಿ, ಅವರ ಪ್ರೀತಿ ಇನ್ನಷ್ಟು ಬಲಗೊಳ್ಳುತ್ತದೆ.
ಬೆಸ್ಟ್ ಫ್ರೆಂಡ್ಸ್
ಈ ದಂಪತಿ (couples) ಇಷ್ಟಗಳು, ಇಷ್ಟಪಡದಿರುವಿಕೆಗಳು, ಅಭ್ಯಾಸಗಳು ಮತ್ತು ಪರಸ್ಪರ ಇಬ್ಬರ ಗುಣ, ಅವಗುಣಗಳ ಬಗ್ಗೆ ಇಬ್ಬರಿಗೂ ಸರಿಯಾಗಿಯೇ ತಿಳಿದಿರುತ್ತೆ, ಹಾಗಾಗಿಯೇ ಇಬ್ಬರ ನಡುವೆ ವಿರೋಧ ಇರೋದಿಲ್ಲ. ಇಬ್ಬರ ನಡುವೆ ಜಗಳ ಆದರೂ ಸಹ ಅದರಲ್ಲಿ ಪ್ರೀತಿ ಹೆಚ್ಚಿರುತ್ತೆ.
ವಿಭಿನ್ನ ಗುಣದ ಕಪಲ್ಸ್
ಪರಸ್ಪರ ಸಂಪೂರ್ಣವಾಗಿ ವಿಭಿನ್ನ ಅಭ್ಯಾಸಗಳನ್ನು ಹೊಂದಿರುವ ದಂಪತಿಯನ್ನು ಗುರುತಿಸುವುದು ಸುಲಭ. ಒಬ್ಬರು ಹೆಚ್ಚು ಮಾತನಾಡುತ್ತಾರೆ, ಇನ್ನೊಬ್ಬರು ಕಡಿಮೆ ಮಾತನಾಡುತ್ತಾರೆ, ಒಬ್ಬರು ಸ್ವಚ್ಚತೆಯನ್ನು ಇಷ್ಟಪಡುತ್ತಾರೆ ಮತ್ತು ಇನ್ನೊಬ್ಬರು ಕೂಲ್ ಆಗಿರಲು ಇಷ್ಟಪಡುತ್ತಾರೆ, ಆದರೆ ಈ ವಿಭಿನ್ನತೆಯೇ ಅವರಿಬ್ಬರನ್ನೂ ಹತ್ತಿರ ತರುತ್ತೆ.
ಒಬ್ಬರನ್ನು ಬಿಟ್ಟು ಒಬ್ಬರು ಬದುಕಲು ಸಾಧ್ಯವೇ ಇಲ್ಲ
ಈ ದಂಪತಿಗೆ ಒಂದು ಕ್ಷಣವೂ ಪರಸ್ಪರರಿಲ್ಲದೆ ಬದುಕಲು ಸಾಧ್ಯವಿಲ್ಲ ಮತ್ತು ಅವರ ಭಾವನೆಗಳು (emotions) ಅವರನ್ನು ಹೊರತುಪಡಿಸಿ ಇಡೀ ಜಗತ್ತಿಗೆ ತಿಳಿದಿರುತ್ತೆ.
ಪಿಡಿಎ ಕಪಲ್ಸ್
ಈ ಜೋಡಿಗಳಿಗೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸುವುದರಲ್ಲಿ ಯಾವುದೇ ಸಮಸ್ಯೆ ಇರೋದಿಲ್ಲ. ಆದರೆ ಈ ದಂಪತಿಗಳು ಸ್ಥಳ, ಅವಕಾಶ ಮತ್ತು ಜನರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಎಲ್ಲವೂ ಒಂದೇ ಈ ಜೋಡಿಗಳಿಗೆ.
ಓಪನ್ ರಿಲೇಶನ್’ಶಿಪ್ ಕಪಲ್ಸ್
ಓಪನ್ ರಿಲೇಶನ್ ಶಿಪ್ (open relationship) ನಲ್ಲಿರೋ ಕಪಲ್ಸ್ ಸಂಪೂರ್ಣ ಪ್ರಾಮಾಣಿಕತೆ ಮತ್ತು ಇಂಡಿಪೆಂಡೆಂಟ್ ಆಗಿ ಪರಸ್ಪರ ವಾಸಿಸುತ್ತಾರೆ. ಈ ಜೋಡಿಗಳು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ ನಿಜ. ಆದರೆ ಸಂಗಾತಿ ಬೇರೆಯವರ ಜೊತೆ ಡೇಟಿಂಗ್ ಮಾಡ್ತಿದ್ರೆ, ಅದಕ್ಕೂ ಸಹ ಒಪ್ಪಿಗೆ ಇರುತ್ತೆ.