ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಮಕ್ಕಳನ್ನು ಬೆಳೆಸುವುದು ಒಂದು ಸವಾಲಾಗಿದೆ. ಕಾಲಮಾನಕ್ಕೆ ತಕ್ಕಂತೆ ಮಕ್ಕಳ ಬುದ್ಧಿವಂತಿಕೆ, ಕೌಶಲ್ಯ, ಜ್ಞಾನ ಮತ್ತು ಆಲೋಚನಾ ಶೈಲಿಗಳು ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಮಕ್ಕಳನ್ನು ಬೆಳೆಸಬೇಕು. ವಿಶೇಷವಾಗಿ, ಜೆನ್ ಝಡ್ ಮತ್ತು ಆಲ್ಫಾ ಪೀಳಿಗೆಯ ಮಕ್ಕಳನ್ನು ನಿಭಾಯಿಸುವುದು ಸುಲಭವಲ್ಲ. ಈ ಮಕ್ಕಳು ತಂತ್ರಜ್ಞಾನ ಮತ್ತು ಇಂಟರ್ನೆಟ್ ಜಗತ್ತಿನಲ್ಲಿ ಬೆಳೆಯುತ್ತಿದ್ದಾರೆ. ಈ ಮಕ್ಕಳನ್ನು ಬೆಳೆಸಲು ಪರದಾಡುವ ಪೋಷಕರು ಈ ಸೂತ್ರವನ್ನು ಅಳವಡಿಕೆ ಮಾಡಿಕೊಂಡು ಜೀವನದಲ್ಲಿ ನಿಮ್ಮ ಮಕ್ಕಳನ್ನು ಯಶಸ್ವಿ ಪ್ರಜೆಯಾಗಿ ನಿರ್ಮಿಸಬಹುದು.