6 ವರ್ಷದ ಲವ್​ಗೆ ಮದ್ವೆಯ ಮುದ್ರೆ: ಹುಡುಗನ ಗುಟ್ಟು ರಿವೀಲ್​ ಮಾಡಿ ವಧುವಿನಂತೆ ಕಂಗೊಳಿಸಿದ Bigg Boss ಸ್ಪಂದನಾ

Published : Sep 24, 2026, 07:14 PM IST

ಬಿಗ್‌ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಪ್ಯಾರಿಸ್‌ನಲ್ಲಿ ಹುಡುಗನೊಬ್ಬನ ಕೈಹಿಡಿದಿರುವ ಫೋಟೋ ಹಂಚಿಕೊಂಡಿದ್ದು, ಆತ ಸೂರಜ್ ಸಿಂಗ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರು ವರ್ಷಗಳಿಂದ ಪ್ರೀತಿಯಲ್ಲಿರುವ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದು, ಭಾವಿ ಪತಿಯ ವಿವರ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

PREV
16
ಪ್ಯಾರೀಸ್​​ನಲ್ಲಿ ಭಾವಿ ಪತಿ ಜೊತೆ ನಟಿ

ಬಿಗ್​ಬಾಸ್​​ ಮೂಲಕ ಖ್ಯಾತಿ ಪಡೆದವರು ನಟಿ ಸ್ಪಂದನಾ ಸೋಮಣ್ಣ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇವರು, ಇತ್ತೀಚೆಗೆ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪ್ಯಾರೀಸ್ ನ ಐಫೆಲ್ ಟವರ್ ಹಿನ್ನೆಲೆಯಲ್ಲಿ, ಹುಡುಗನೊಬ್ಬನ ಕೈಹಿಡಿದು ಸಂತೋಷದಿಂದ ನಡೆಯುತ್ತಿರುವ ಫೋಟೊ ಶೇರ್ ಮಾಡಿದ್ದು, ಅದರ ಜೊತೆಗೆ Plot Twist : Paris was not the Main Character! ಎಂದು ಬರೆದುಕೊಂಡಿದ್ದರು.

26
ಸೂರಜ್​ ಸಿಂಗ್​ ಹೆಸರು

ಆ ಫೋಟೋ ನೋಡಿದವರು ಇವರು ಬಿಗ್​ಬಾಸ್​ ಸೂರಜ್​ ಸಿಂಗ್​ ಎಂದೇ ಹೇಳಿದ್ದರು. ಏಕೆಂದರೆ ಹಿಂದಿನಿಂದ ಅವರು ಹಾಗೆಯೇ ಕಾಣಿಸುತ್ತಿದ್ದರು. ಇದೀಗ ಸ್ಪಂದನಾ ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆ ಎದುರಾಗುತ್ತಿದೆ. ಅದಕ್ಕೆ ಮೊನ್ನೆಯಷ್ಟೇ ಸ್ಪಷ್ಟನೆ ನೀಡಿರುವ ಸ್ಪಂದನಾ ಸೋಮಣ್ಣ (Spandana Somanna) ಆ ಹುಡುಗ ಸೂರಜ್​ ಸಿಂಗ್​ ಅಲ್ಲ ಕಣ್ರೀ... ಪಾಪ ಸೂರಜ್​ ಅವರನ್ನು ಎಳೆತಂದು ಏನೇನೋ ಹೇಳ್ತಿದ್ದಾರೆ. ಯಾರ್ಯಾರನ್ನೋ ಟ್ಯಾಗ್​ ಮಾಡ್ತಿದ್ದಾರೆ. ಅವರ ಪಾಡಿಗೆ ಅವರು ಇದ್ದಾರೆ, ಆ ಫೋಟೋದಲ್ಲಿ ಇರೋರು ಸೂರಜ್​ ಅಲ್ಲ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟಪಡಿಸಿದ್ದರು.

36
ಆರು ವರ್ಷಗಳ ಲವ್​

ಇದೀಗ ನಟಿ ಮದುಮಗಳಂತೆ ಕಂಗೊಳಿಸುತ್ತಾ ಫೋಟೋಶೂಟ್​ ಮಾಡಿಕೊಂಡಿದ್ದಾರೆ. ನಾನು ಪ್ಯಾರೀಸ್​ ಫೋಟೋ ಹಾಕಿದಾಗಿನಿಂದಲೂ ಸಕತ್​ ರೆಸ್​ಪಾನ್ಸ್​ ಬರುತ್ತಿದೆ. ಆರು ವರ್ಷಗಳ ಹಿಂದೆಯೇ ಈ ಫೋಟೋ ಹಾಕುವವಳು ಇದ್ದೆ. ಆದರೆ ಆಗ ಯಾಕೋ ಬೇಡ ಎನ್ನಿಸಿ ಈಗ ಹಾಕಿದ್ದೇನೆ ಎಂದಿದ್ದಾರೆ.

46
ನಟಿಯ ಮನವಿ

ನಾನು ಸದ್ಯ ಮದುಮಗಳಾಗಲು ರೆಡಿಯಾಗಿದ್ದೇನೆ. ಯಾವಾಗ ಮದುವೆ, ಹುಡುಗ ಯಾರು ಎನ್ನೋದನ್ನೆಲ್ಲಾ ಶೀಘ್ರದಲ್ಲಿಯೇ ಹೇಳುತ್ತೇನೆ. ಮದುವೆ ಶೀಘ್ರದಲ್ಲಿಯೇ ಆಗುತ್ತದೆ. ಅದಕ್ಕೂ ಮೊದಲೇ ಎಲ್ಲರಿಗೂ ಡಿಟೇಲ್ಸ್​ ಕೊಡುತ್ತೇನೆ. ಅಲ್ಲಿಯವರೆಗೆ ನೀವು ಯಾರದ್ಯಾರದ್ದೋ ಹೆಸರು ಹೇಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ನಟಿ.

56
ನಟಿಯ ನಾಚಿಕೆ

ಅಷ್ಟಕ್ಕೂ ಸೂರಜ್ ಸಿಂಗ್​ ಹೆಸರು ಬಂದಿದ್ದು, ಪ್ಯಾರೀಸ್​ ಟೂರ್​ನಲ್ಲಿ ಭಾವಿ ಪತಿಯ ಫೋಟೋ ಹಿಂಬದಿಯಿಂದ ಸ್ಪಂದನಾ ಶೇರ್​ ಮಾಡಿದ್ದಕ್ಕೆ. ಈಗ ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.. ಪ್ಯಾರೀಸ್​​ ಟೂರ್​ ಬಗ್ಗೆ ಈ ಹಿಂದೆ ಪ್ರಶ್ನಿಸಿದಾಗ ಸ್ಪಂದನಾ, ನಾಚಿ ನೀರಾಗಿದ್ದರು. ಟೂರ್​ ತುಂಬಾ ಚೆನ್ನಾಗಿತ್ತು.

66
ಫೋಟೋ ಕುರಿತು

ಜನರು ನಮಗೆ ಇಷ್ಟೊಂದು ಪ್ರೀತಿ ಕೊಡುವಾಗ ಪರ್ಸನಲ್​ ಲೈಫ್​ ಬಗ್ಗೆಯೂ ಗೊತ್ತಿರಲಿ ಎಂದು ಫೋಟೋ ಹಾಕಿದ್ದೆ. ಆದರೆ ಅವರು ಸೂರಜ್​ ಸಿಂಗ್​ ಅಲ್ಲ. ಅವರ ಬಗ್ಗೆ ಶೀಘ್ರದಲ್ಲಿ ಹೇಳುವೆ ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories