ಸೆಕ್ಸ್ ಜೀವನ ಆರಂಭಿಸುವ ಮುನ್ನ ಲೈಂಗಿಕತೆ, ಸಂಭೋಗದ ಬಗ್ಗೆ ಗೊತ್ತಿರಲಿ ವ್ಯತ್ಯಾಸ

First Published | Apr 9, 2024, 12:07 PM IST

ಲೈಂಗಿಕತೆ ಬಗ್ಗೆ ಯಾರಿಗೂ ಹೇಳಲಾಗುವುದಿಲ್ಲ ಅಥವಾ ಕಲಿಸಲಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಅರೆಬೆಂದ ಜ್ಞಾನದೊಂದಿಗೆ ಲೈಂಗಿಕ ಜೀವನದಲ್ಲಿ ಮುಂದುವರಿಯುತ್ತಾನೆ. ಆದರೆ ಸರಿಯಾದ ಮಾಹಿತಿ ಇಲ್ಲದೇ ಸೆಕ್ಸ್ ಮಾಡೋದು ಅನಾರೋಗ್ಯಕರ ಲೈಂಗಿಕ ಜೀವನದ ಅಪಾಯವನ್ನುಂಟುಮಾಡುತ್ತದೆ. 
 

ಲೈಂಗಿಕ ಜೀವನ (sex life) ಪ್ರತಿಯೊಬ್ಬರಿಗೂ ಅಗತ್ಯವಾಗಿರೋದು. ಸಂಸಾರ, ಮಕ್ಕಳು ಎಲ್ಲಾ ಆಗಬೇಕು ಅಂದಾದರೆ ಲೈಂಗಿಕ ಜೀವನದ ಬಗ್ಗೆ ತಿಳಿದಿರಲೇಬೇಕು. ಶಾಲೆಗಳು ಮತ್ತು ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ನೀಡೋದು ಕಡಿಮೆ. ಆದ್ದರಿಂದ, ಜನರು ಲೈಂಗಿಕ ಬಯಕೆ, ಇಂಟಿಮೆಸಿ ಮತ್ತು ಆರ್ಗಸಂ ಬಗ್ಗೆ ಸರಿಯಾಗಿ ತಿಳಿದೇ ಇಲ್ಲ ಅಥವಾ ಅರ್ಥಮಾಡಿಕೊಳ್ಳುವುದಿಲ್ಲ. ಆರೋಗ್ಯಕರ ಲೈಂಗಿಕ ಜೀವನದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳೋ ಬದಲು, ಅಂತರ್ಜಾಲದಿಂದ ಪಡೆದ ಅರ್ಧ ಬೇಯಿಸಿದ ಜ್ಞಾನವನ್ನು ತಿಳಿದುಕೊಂಡ್ರೆ, ಇದರಿಂದ ಆರೋಗ್ಯ ಸಮಸ್ಯೆ ಕಂಡು ಬರುತ್ತೆ.  ಆದ್ದರಿಂದ, ಲೈಂಗಿಕ ಜೀವನವನ್ನು ಪ್ರಾರಂಭಿಸುವ ಮೊದಲು ಪ್ರತಿಯೊಬ್ಬ ವಯಸ್ಕರು ಈ  ವಿಷಯಗಳನ್ನು ತಿಳಿದುಕೊಳ್ಳಬೇಕು.
 

ಲೈಂಗಿಕ ಜೀವನದ ಬಗ್ಗೆ ತಿಳಿದುಕೊಳ್ಳುವುದು ಏಕೆ ಮುಖ್ಯ 
ಜರ್ನಲ್ ಆಫ್ ಸೆಕ್ಸುಯಲ್ ಮೆಡಿಸಿನ್ ನಲ್ಲಿ ಪ್ರಕಟವಾದ ಸಂಶೋಧನಾ ಸಂಶೋಧನೆಗಳ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಲೈಂಗಿಕತೆ ನಿಜವಾಗಿಯೂ ಏನು ಎಂದು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯು ಲೈಂಗಿಕವಾಗಿ ಏನನ್ನು ಇಷ್ಟಪಡುತ್ತಾನೆ ಮತ್ತು ಯಾವುದನ್ನು ಇಷ್ಟಪಡುವುದಿಲ್ಲ? ಲೈಂಗಿಕ ಸಂಬಂಧದಲ್ಲಿ (physical relationship) ಬದುಕುವುದು ಹೇಗೆ? ಲೈಂಗಿಕ ಬಯಕೆ, ಕಾಮಾಸಕ್ತಿ, ಪರಾಕಾಷ್ಠೆ, ಸ್ಖಲನ, ಅಂಡೋತ್ಪತ್ತಿ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಆಗ ಮಾತ್ರ ವ್ಯಕ್ತಿಯು ಸಂಬಂಧ ಮತ್ತು ಲೈಂಗಿಕ ಜೀವನದಲ್ಲಿ ಮುಂದೆ ಸಾಗಬಹುದು. ಇದರೊಂದಿಗೆ, ಲೈಂಗಿಕವಾಗಿ ಹರಡುವ ರೋಗಗಳ ಅಪಾಯವನ್ನು ಅವನು ತಿಳಿದುಕೊಳ್ಳಬಹುದು. ಲೈಂಗಿಕ ಜೀವನದಲ್ಲಿ ಕಾಂಡೋಮ್ ಬಳಕೆ ಮತ್ತು ಸಂಯಮದ ಮಹತ್ವವನ್ನು ಸಹ ಅವನು ತಿಳಿದಿದ್ದರೆ ಉತ್ತಮ.

Tap to resize

ಲೈಂಗಿಕ ಸುರಕ್ಷತೆ (Safe Sex)
ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದರೆ, ಲೈಂಗಿಕವಾಗಿ ಹರಡುವ ರೋಗದ ಅಪಾಯವಿದೆ. ಆದ್ದರಿಂದ, ಕಾಂಡೋಮ್ ಬಳಕೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.  ಲೈಂಗಿಕ ಜೀವನದಲ್ಲಿ ಕಾಂಡೋಮ್ ಬಳಕೆ ಮತ್ತು ಸಂಯಮದ ಮಹತ್ವವನ್ನು ಸಹ ತಿಳಿದಿರಬಹುದು.

ಭವಿಷ್ಯಕ್ಕಾಗಿ ಬುದ್ಧಿವಂತಿಕೆಯಿಂದ ಯೋಜಿಸಿ
ಅಸುರಕ್ಷಿತ ಲೈಂಗಿಕತೆಯು (unsafe sex) ಅನಗತ್ಯ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದು ಅಕಾಲಿಕ ಮಗುವಿನ ಜನನಕ್ಕೆ ಕಾರಣವಾಗಬಹುದು. ಆದ್ದರಿಂದ, ಭವಿಷ್ಯಕ್ಕಾಗಿ ಬುದ್ಧಿವಂತಿಕೆಯಿಂದ ಯೋಜಿಸಬೇಕು.
 

ಲೈಂಗಿಕತೆ ಮತ್ತು ಸಂಭೋಗ ಒಂದೇ ಅಲ್ಲ  
ಜರ್ನಲ್ ಆಫ್ ಸೆಕ್ಸುಯಲ್ ಮೆಡಿಸಿನ್ ಪ್ರಕಾರ, ಲೈಂಗಿಕ ಶಿಕ್ಷಣದ (sex education) ಕೊರತೆಯಿಂದಾಗಿ, ಜನರು ಹೆಚ್ಚಾಗಿ ಲೈಂಗಿಕತೆ ಮತ್ತು ಸಂಭೋಗದ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಜನರು ಅವುಗಳನ್ನು ಒಂದೇ ಎಂದು ಭಾವಿಸುತ್ತಾರೆ, ಆದರೆ ಇವೆರಡೂ ಒಂದೇ ಅಲ್ಲ. ಸೆಕ್ಸ್ ಅನ್ನೋದು ಲೈಂಗಿಕ ಅಂಗಗಳು, ಬಾಯಿ, ಕೈಗಳು, ಬೆರಳುಗಳು, ಗುದದ್ವಾರ ಮತ್ತು ಇತರ ವಿಷಯಗಳ ಜೊತೆಗೆ ಅಂಗಗಳನ್ನು ಒಳಗೊಂಡಿರಬಹುದು. ಸಂಭೋಗ ಅಥವಾ ಇಂಟರ್ ಕೋರ್ಸ್ ಯೋನಿ, ಬಾಯಿ, ಗುದದ್ವಾರ, ಯಾವುದೇ ಆಗಿರಬಹುದು. ಸಂಭೋಗದಲ್ಲಿ, ಶಿಶ್ನವು ಯೋನಿಯೊಳಗೆ ಹೋಗುತ್ತದೆ.
 

ಪರಾಕಾಷ್ಠೆ ಕೇವಲ ಹುಡುಗರಿಗೆ ಮಾತ್ರವಲ್ಲ ಮುಖ್ಯವಲ್ಲ
ಮಾಹಿತಿಯ ಕೊರತೆಯಿಂದಾಗಿ, ಪರಾಕಾಷ್ಠೆಯನ್ನು ಹೆಚ್ಚಾಗಿ ಹುಡುಗರಿಗೆ ಮಾತ್ರ  ಮುಖ್ಯ ಅಥವಾ ಹುಡುಗರಿಗೆ ಮಾತ್ರ ಆಗುತ್ತೆ ಎಂದು ಪರಿಗಣಿಸಲಾಗುತ್ತದೆ.  ಮಹಿಳೆಯರಿಗೆ ಆದ್ಯತೆಯಲ್ಲಿ ಪರಾಕಾಷ್ಠೆ ಇರುತ್ತದೆ. ಶತಮಾನಗಳಿಂದ, ಸ್ಖಲದ ಬಳಿಕೆ ಸಂಭೋಗ ಕೊನೆಯಾಗುತ್ತೆ ಎಂದುಕೊಳ್ಳಲಾಗುತ್ತಿದೆ. ಬಯಕೆ ಮತ್ತು ಪ್ರಚೋದನೆ ಪ್ರಾರಂಭವಾದಾಗ ಲೈಂಗಿಕತೆ ಪ್ರಾರಂಭವಾಗುತ್ತದೆ. ಇಬ್ಬರೂ ಸಹ ತೃಪ್ತರಾದಾಗ ಅದು ಕೊನೆಗೊಳ್ಳುತ್ತದೆ. ಲೈಂಗಿಕ ತೃಪ್ತಿ (orgasm) ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರಿಗೂ ಇದರ ಅಗತ್ಯ ಇದೆ. ಅವರೂ ಸಹ ಪರಾಕಷ್ಠೆಗೆ ಹಂಬಲಿಸುತ್ತಾರೆ ಅನ್ನೋದು ನೆನಪಿರಲಿ. 

ಕ್ಲಿಟೋರಿಸ್ ಪ್ರಮುಖ ಭಾಗ
ಜರ್ನಲ್ ಆಫ್ ಸೆಕ್ಷುಯಲ್ ಮೆಡಿಸಿನ್ ಪ್ರಕಾರ, 70 ಪ್ರತಿಶತಕ್ಕೂ ಹೆಚ್ಚು ಮಹಿಳೆಯರು ಕ್ಲಿಟೋರಲ್ ಪ್ರಚೋದನೆಯ ಮೂಲಕ ಮಾತ್ರ ಪರಾಕಾಷ್ಠೆಯನ್ನು ಅನುಭವಿಸುತ್ತಾರೆ. ಅಂದರೆ ಯೋನಿಯನ್ನು (vagina) ಸ್ಪರ್ಶಿಸುವ ಮೂಲಕ ಪ್ರಚೋದನೆಗೆ ಒಳಗಾಗುತ್ತಾರೆ. ಕ್ಲಿಟೋರಿಸ್ ಅನ್ನು ಪರಾಕಾಷ್ಠೆಯ ಮಾಧ್ಯಮವನ್ನಾಗಿ ಮಾಡುವುದು ಮುಖ್ಯ.

ಲೈಂಗಿಕತೆಯ ಬಗ್ಗೆ ಮಾತನಾಡಿ
ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೆಕ್ಷುಯಲ್ ಹೆಲ್ತ್‌ನಲ್ಲಿ (International Journals of Sexual health) ಪ್ರಕಟವಾದ ಅಧ್ಯಯನಗಳು ಲೈಂಗಿಕತೆ ಬಗ್ಗೆ ಮಾತನಾಡುವುದನ್ನು ಯಾವತ್ತೂ ಮರೆಯಬಾರದು ಎಂದು ಸೂಚಿಸುತ್ತದೆ. ಸೆಕ್ಸ್ ಬಗ್ಗೆ ಸರಿಯಾದ ಮಾಹಿತಿ ತಿಳಿಯಬೇಕು ಅಂದ್ರೆ, ಅದರ ಬಗ್ಗೆ ತಿಳಿದಿರೋ ಹತ್ರ ಮಾತನಾಡೋದಕ್ಕೆ ಹಿಂಜರಿಯಬೇಡಿ. 

ಇಂಟಿಮೆಸಿಗೆ ಸಮಯ ನೀಡಿ
ಸಂಬಂಧದಲ್ಲಿ ಇಂಟಿಮೆಸಿ (intimacy) ಕಾಪಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಮುಖ್ಯ ಎಂದು ಅಧ್ಯಯನಗಳು ತಿಳಿಸಿವೆ. ಆರಂಭದಲ್ಲಿ ಕೆಲವು ತೊಂದರೆಗಳು ಕಾಣಬಹುದು. ಆದರೆ ನೀವು ಪ್ರಯತ್ನಿಸಿದರೆ ಇಬ್ಬರ ನಡುವೆ ಇಂಟಿಮೆಸಿ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ. 
 

Latest Videos

click me!