ಲಾಕ್‌ಡೌನ್‌ ಸಂದರ್ಭದಲ್ಲಿ ಆದ 10 ಜ್ಞಾನೋದಯಗಳು!

First Published Apr 25, 2020, 9:50 AM IST

ಕೊರೋನಾದಿಂದಾದ ಲಾಕ್‌ಡೌನ್ ನಮಗೆಲ್ಲಾ ಒಂದೊಂದು ಪಾಠ ಕಲಿಸುತ್ತಿದೆ. ನಮ್ಮ ಸುತ್ತಮುತ್ತಲಿನವರ ಜೊತೆ, ಸ್ನೇಹಿತರ, ಬಂಧು ಬಾಂಧವರ ಬಗ್ಗೆ ಪ್ರೀತಿ ವಿಶ್ವಾಸ ಹೆಚ್ಚಾಗುತ್ತಿದೆ. ಕಳೆದು ಹೋಗಿದ್ದ ಆಪ್ಯಾಯಮಾನ ಮತ್ತೆ ಸಿಗುವಂತಾಗಿದೆ. ಮನೆಯಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಂತಾಗಿದೆ. ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವಂತೆ ಮಾಡಿದ್ದಂತೂ ಸುಳ್ಳಲ್ಲ!

ಪ್ರತಿಯೊಬ್ಬರೂ ನಮ್ಮನ್ನು ನಮ್ಮ ಹೆಸರಿನಿಂದಲೇ ಕರೆಯುತ್ತಾರೆ. ಆದರೆ ಕೆಲವರು ಕರೆದಾಗ ಮಾತ್ರ ನಮ್ಮ ಹೆಸರು ನಿಜಕ್ಕೂ ಸ್ಪೆಷಲ್‌ ಅನ್ನಿಸುತ್ತದೆ.
undefined
ನಾವು ಮೆಸೇಜ್‌ ಮಾಡಿದಾಗ ತಕ್ಷಣ ರಿಪ್ಲೈ ಮಾಡುವವರನ್ನು ಕಂಡರೆ ನಂಗೆ ಭಯಂಕರ ಇಷ್ಟವಾಗುತ್ತಿದೆ. ಅವರಿಗೆ ನಿಜಕ್ಕೂ ನನ್ನ ಜೊತೆ ಮಾತಾಡುವ ಆಸೆ ಇದೆ ಎಂದು ಫೀಲ್‌ ಆಗುತ್ತದೆ.
undefined
ನಾನು ನಿಜಕ್ಕೂ ದ್ವೇಷಿಸುವ ವ್ಯಕ್ತಿಯಲ್ಲಿರುವ ಕೆಲವು ಗುಣಗಳು ನನ್ನ ಬಳಿಯೂ ಇದೆ ಎಂದು ಗೊತ್ತಾದಾಗ ಆಗುವ ಅವಮಾನ ಎಲ್ಲಕ್ಕಿಂತ ದೊಡ್ಡದು.
undefined
ಕೆಲವೊಮ್ಮೆ ಎಂಥಾ ಕೆಟ್ಟಮೂಡ್‌ ಇರುತ್ತದೆ ಎಂದರೆ ಸಿಕ್ಕಿದವರನ್ನೆಲ್ಲಾ ಕೊಲ್ಲಬೇಕು ಅನ್ನಿಸುತ್ತದೆ, ವಿನಾಕಾರಣ. ಮನೆಯಲ್ಲೇ ಇದ್ದರೆ ಹಿಂಗೂ ಆಗುತ್ತದೆ ಅಂತ ಗೊತ್ತಾಯಿತು.
undefined
ಹಾರರ್‌ ಸಿನಿಮಾಗಳು ನೋಡುವಾಗ ಹೆದರಿಸುವುದಿಲ್ಲ. ಕತ್ತಲೆಯಲ್ಲಿ ಒಬ್ಬರೇ ರೂಮಲ್ಲಿ ಮಲಗಿರುವಾಗ ನಿಜವಾದ ಹಾರರ್‌ ಮೂವಿ ಎಫೆಕ್ಟುಗೊತ್ತಾಗುತ್ತದೆ.
undefined
ನಾನು ಹೇಳುವ ಶೇ.60 ಕತೆಗಳು ಅರ್ಧದಲ್ಲೇ ನಿಂತು ಹೋಗುತ್ತವೆ. ಯಾಕೆಂದರೆ ಒಂದೋ ಎದುರಿರುವವರು ಮತ್ತಿನ್ನೇನೋ ಹೇಳಿ ತುಂಡರಿಸುತ್ತಾರೆ. ಇಲ್ಲದಿದ್ದರೆ ನನ್ನ ಕತೆ ತಲುಪಬೇಕಾದಲ್ಲಿ ತಲುಪುತ್ತಿಲ್ಲ ಎಂಬುದು ನನಗೆ ಗೊತ್ತಾಗುತ್ತದೆ.
undefined
ಯಾವಾಗ ನಾವು ಕಷ್ಟಗಳನ್ನು ದೂರುವುದನ್ನು ನಿಲ್ಲಿಸಿ ಆ ಕಷ್ಟಗಳು ಬಂದಿದ್ದಕ್ಕೆ ನಾನು ಬುದ್ಧಿ ಕಲಿತೆ ಎಂದುಕೊಳ್ಳುತ್ತೇವೋ ಅವತ್ತಿನಿಂದ ನಾವು ಸಂತೋಷವಾಗಿರುತ್ತೇವೆ.
undefined
ನಮಗೆ ಅವರ ಬಳಿ ಮಾತನಾಡಲು ಇಷ್ಟವಿರುತ್ತದೆ. ಆದರೆ ಮೊದಲು ಮೆಸೇಜ್‌ ಮಾಡಲು ಮನಸ್ಸು ಹಿಂಜರಿಯುತ್ತದೆ. ಅದೊಂಥರ ವಿಚಿತ್ರ ಫೀಲಿಂಗು.
undefined
ನಾನು ಕಾರಣವಿಲ್ಲದೆಯೂ ಸ್ಯಾಡ್‌ ಸ್ಟೇಟಸ್‌ ಹಾಕಬಲ್ಲೆ, ದುಃಖದಿಂದ ಇರಬಲ್ಲೆ ಅನ್ನುವುದನ್ನು ಜನ ಅರ್ಥಮಾಡಿಕೊಳ್ಳುವುದಿಲ್ಲವಲ್ಲ. ಲವ್‌ ಬ್ರೇಕಪ್‌ ಇಲ್ಲದೆ ಬೇಜಾರಿನಲ್ಲಿ ಇರಬಾರದು ಅನ್ನುವ ಭಾವನೆ ಸರಿಯಿಲ್ಲ.
undefined
ಇದ್ದಕ್ಕಿದ್ದಂತೆ ಒಂದು ಬೆಳಿಗ್ಗೆ ಕೆಲವು ವರ್ಷಗಳ ಹಿಂದೆ ನಮ್ಮ ಬಾಯಲ್ಲೇ ಇದ್ದ ಹಾಡು ಕೇಳಿಸಿದಾಗ ಆಗುವ ಸಂತೋಷವನ್ನು ಅನುಭವಿಸುವ ಖುಷಿ ತುಂಬಾ ದೊಡ್ಡದು.
undefined
click me!