Most Expensive Divorce: ವಿಶ್ವದಲ್ಲಿಯೇ ಅತ್ಯಂತ ದುಬಾರಿ 10 ವಿಚ್ಛೇದನಗಳು!

Published : Jan 02, 2026, 07:42 PM IST

ಬಿಲ್ ಗೇಟ್ಸ್, ಜೆಫ್ ಬೆಜೋಸ್ ಸೇರಿದಂತೆ ವಿಶ್ವದ ಪ್ರಮುಖ ಉದ್ಯಮಿಗಳ ದುಬಾರಿ ವಿಚ್ಛೇದನಗಳ ಪಟ್ಟಿ ಇಲ್ಲಿದೆ. ಈ ವಿಚ್ಛೇದನಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಲಾಗಿದ್ದು, ಇದು ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಡೈವೋರ್ಸ್‌ಗಳೆಂದು ದಾಖಲಾಗಿವೆ.

PREV
111
ಬಿಲ್‌ ಗೇಟ್ಸ್‌-ಮೆಲಿಂಡಾ ಫ್ರೆಂಚ್ ಗೇಟ್ಸ್

2021ರಲ್ಲಿ ಇವರ ವಿವಾಹ ವಿಚ್ಛೇದನ ನಡೆದಿತ್ತು. ಇದು ವಿಶ್ವದಲ್ಲಿಯೇ ಅತ್ಯಂತ ದುಬಾರಿ ವಿಚ್ಛೇದನ. ಡೈವೋರ್ಸ್‌ನ ಭಾಗವಾಗಿ ಮೆಲಿಂಡಾ ಗೇಟ್ಸ್‌ ಬರೋಬ್ಬರಿ 76 ಬಿಲಿಯನ್‌ ಯುಎಸ್‌ ಡಾಲರ್‌ ಮೊತ್ತವನ್ನು ಪಡೆದುಕೊಂಡರು. ಭಾರತೀಯ ರೂಪಾಯಿಯಲ್ಲಿ ಇದರ ಮೊತ್ತ 6.84 ಲಕ್ಷ ಕೋಟಿ ರೂಪಾಯಿ.

211
ಜೆಫ್‌ ಬೆಜೋಸ್‌-ಮೆಕೆಂಜಿ ಸ್ಕಾಟ್

2019ರಲ್ಲಿ ನಡೆದ ಅಮೆಜಾನ್‌ ಮಾಲೀಕ ಜೆಫ್‌ ಬೆಜೋಸ್‌ ಹಾಗೂ ಪತ್ನಿ ಮೆಕೆಂಜಿ ಸ್ಕಾಟ್‌ ವಿಚ್ಛೇದನ ಕೂಡ ಭಾರೀ ಪ್ರಮಾಣದಲ್ಲಿ ಸುದ್ದಿಯಾಗಿತ್ತು. ವಿಚ್ಛೇದನದ ಪರಿಹಾರವಾಗಿ ಮೆಕೆಂಜಿ ಸ್ಕಾಟ್‌ 38 ಬಿಲಿಯನ್‌ ಯುಎಸ್‌ ಡಾಲರ್‌ ಅಂದರೆ 3.42 ಲಕ್ಷ ಕೋಟಿ ಹಣ ಪಡೆದುಕೊಂಡರು.

311
ಅಲೆಕ್ ವೈಲ್ಡೆನ್‌ಸ್ಟೈನ್-ಜೋಸ್ಲಿನ್ ವೈಲ್ಡೆನ್‌ಸ್ಟೈನ್

ಅಮೆರಿಕ ಹಾಗೂ ಫ್ರೆಂಚ್‌ ನಾಗರೀಕರಾಗಿರುವ ಅಲೆಕ್ ವೈಲ್ಡೆನ್‌ಸ್ಟೈನ್ ಮತ್ತು ಜೋಸ್ಲಿನ್ ವೈಲ್ಡೆನ್‌ಸ್ಟೈನ್ ಅವರ ವಿವಾಹ ವಿಚ್ಛೇದನ 1999ರಲ್ಲಿ ನಡೆಯಿತು. ಫ್ರೆಂಟ್‌ ಆರ್ಟ್‌ ಡೀಲರ್‌ ಆಗಿರುವ ಅಲೆಕ್ ವೈಲ್ಡೆನ್‌ಸ್ಟೈನ್ ವಿಚ್ಛೇದನ ಪರಿಹಾರವಾಗಿ ಪತ್ನಿಗೆ 3.8 ಬಿಲಿಯನ್ ಯುಎಸ್‌ ಡಾಲರ್‌ ಅಂದರೆ 34,200 ಕೋಟಿ ಪರಿಹಾರ ಪಡೆದರು.

411
ರುಪರ್ಟ್‌ ಮುರ್ಡೋಕ್‌-ಅನ್ನಾ ಮುರ್ಡೋಕ್‌ ಮಾನ್‌

1999ರಲ್ಲಿಯೇ ನಡೆದ ಮಮಾಧ್ಯಮ ದಿಗ್ಗಜ ರುಪರ್ಟ್‌ ಮುರ್ಡೋಕ್‌ ಹಾಗೂ ಅನ್ನಾ ಮುರ್ಡೋಕ್‌ ಮಾನ್‌ ವಿಚ್ಚೇದನ ಭಾರೀ ಮೊತ್ತದ ಕಾರಣಕ್ಕೆ ಸುದ್ದಿಯಾಗಿತ್ತು. ಅನ್ನಾ ಮುರ್ಡೋಕ್‌ ಮಾನ್‌ 1.7 ಬಿಲಿಯನ್‌ ಯುಎಸ್‌ ಡಾಲರ್‌ ಮೊತ್ತವನ್ನು ಪರಿಹಾರವಾಗಿ ಪಡೆದರು. ಭಾರತೀಯ ರೂಪಾಯಿಯಲ್ಲಿ ಇದು 15,300 ಕೋಟಿ ರೂಪಾಯಿ.

511
ಬಿಲ್‌ ಗ್ರಾಸ್‌-ಸ್ಯೂ ಗ್ರಾಸ್‌

ಅಮೆರಿಕದ ಹೂಡಿಕೆದಾರ ಬಿಲ್‌ಗ್ರಾಸ್‌ 2017ರಲ್ಲಿ ತಮ್ಮ ಪತ್ನಿ ಸ್ಯೂ ಗ್ರಾಸ್‌ಗೆ ವಿಚ್ಚೇದನ ನೀಡಿದರು. ಸಮಾಜ ಸೇವಕಿಯಾಗಿದ್ದ ಸ್ಯೂ ಗ್ರಾಸ್‌ ಪರಿಹಾರವಾಗಿ 1.3 ಬಿಲಿಯನ್‌ ಯುಎಸ್‌ ಡಾಲರ್‌ (₹ 11,700 ಕೋಟಿ) ಪಡೆದರು.

611
ಬರ್ನೀ ಎಕ್ಲೆಸ್ಟೋನ್- ಸ್ಲಾವಿಕಾ ಎಕ್ಲೆಸ್ಟೋನ್

ಎಫ್‌1 ಸುಪ್ರೀಮೋ ಎಂದೇ ಗುರುತಿಸಿಕೊಂಡಿರುವ ಬ್ರಿಟಿಷ್‌ ಉದ್ಯಮಿ ಬರ್ನೀ ಎಕ್ಲೆಸ್ಟೋನ್ 2009ರಲ್ಲಿ ತಮ್ಮ ಪತ್ನಿ ಸ್ಲಾವಿಕಾ ಎಕ್ಲೆಸ್ಟೋನ್‌ಗೆ ವಿಚ್ಛೇದನ ನೀಡಿದ್ದರು. ಪರಿಹಾರವಾಗಿ ಅವರು 1.2 ಬಿಲಿಯನ್‌ ಯುಎಸ್‌ ಡಾಲರ್‌ ಅಂದರೆ 10,800 ಕೋಟಿ ಪರಿಹಾರ ನೀಡಿದರು.

711
ಸ್ಟೀವ್ ವಿನ್ ಮತ್ತು ಎಲೈನ್ ವಿನ್

ಸ್ಟೀವ್ ವಿನ್ ಮತ್ತು ಎಲೈನ್ ವಿನ್, ದಿ ಮಿರಾಜ್, ಬೆಲ್ಲಾಜಿಯೊ ಮತ್ತು ವಿನ್ ರೆಸಾರ್ಟ್ಸ್ ಸೇರಿದಂತೆ ಲಾಸ್ ವೇಗಾಸ್ ಕ್ಯಾಸಿನೊ ಸಾಮ್ರಾಜ್ಯವನ್ನು ಸಹ-ಸ್ಥಾಪಿಸಿದ ದಂಪತಿಗಳು 2010ರಲ್ಲಿ ವಿಚ್ಛೇದನವಾದಾಗ ಸ್ಟೀವ್‌ ವಿನ್‌ 1 ಬಿಲಿಯನ್‌ ಯುಎಸ್‌ ಡಾಲರ್‌ (₹ 9,000 ಕೋಟಿ) ಪರಿಹಾರ ನೀಡಿದರು.

811
ಚೇ ಟೇ-ವೊನ್ & ರೋಹ್ ಸೋ-ಯೊಂಗ್

ಎಸ್‌ಕೆ ಗ್ರೂಪ್‌ ಚೇರ್ಮನ್‌ ಚೇ ಟೇ-ವೊನ್ ಹಾಗೂ ಆರ್ಟ್‌ ಸೆಂಟರ್‌ ನಬಿ ನಿರ್ದೇಶಕಿ ಮತ್ತು ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಡ್‌ ಟೇ ವೂ ಅವರ ಪುತ್ರಿ ರೋಹ್ ಸೋ-ಯೊಂಗ್ ನಡುವೆ 2024ರಲ್ಲಿ ವಿಚ್ಛೇದನ ನಡೆದಿದೆ. ಇದಕ್ಕಾಗಿ 9 ಸಾವಿರ ಕೋಟಿ ಪರಿಹಾರ ನೀಡಲಾಗಿದೆ.

911
ಹೆರಾಲ್ಡ್ ಹ್ಯಾಮ್ & ಸ್ಯೂ ಆನ್ ಅರ್ನಾಲ್

ಅಮೆರಿಕದ ಉದ್ಯಮಿ ಹೆರಾಲ್ಡ್ ಹ್ಯಾಮ್ 2015ರಲ್ಲಿ ಪತ್ನಿ ಸ್ಯೂ ಆನ್‌ ಅರ್ನಾಲ್‌ಗೆ ವಿಚ್ಛೇದನ ನೀಡುವ ವೇಳೆ 974.8 ಮಿಲಿಯನ್‌ ಯುಎಸ್‌ ಡಾಲರ್‌ ಮೊತ್ತವನ್ನು ಪರಿಹಾರವಾಗಿ ನೀಡಿದರು. ಭಾರತದ ರೂಪಾಯಿಯಲ್ಲಿ ₹ 8,773 ಕೋಟಿ.

1011
ಅದ್ನಾನ್ ಖಶೋಗಿ ಮತ್ತು ಸೊರಯಾ ಖಶೋಗಿ

ಸೌದಿ ಅರೇಬಿಯಾದ ಪ್ರಮುಖ ಉದ್ಯಮಿ ಅದ್ನಾನ್ ಖಶೋಗಿ 1980ರಲ್ಲೇ ತಮ್ಮ ಪತ್ನಿ ಸೊರಯಾ ಖಶೋಗಿಗೆ ವಿಚ್ಛೇದನ ನೀಡಿದರು. ವಿಚ್ಛೇದನಕ್ಕಾಗಿ ಅವರು 874 ಮಿಲಿಯನ್‌ ಯುಎಸ್‌ ಡಾಲರ್‌ ಅಂದರೆ, ₹ 7,866 ಕೋಟಿ ಹಣ ಪರಿಹಾರವಾಗಿ ನೀಡಿದರು.

1111
ಮಾಹಿತಿ ಮೂಲ

ಇದು ವಿಕಿಪಿಡಿಯಾ ಮಾಹಿತಿ. ಪ್ರೈವೇಟ್‌ ಸೆಟ್ಲ್‌ಮೆಂಟ್‌ನಿಂದ ಇದನ್ನು ಅಂದಾಜಿಸಲಾಗಿದ್ದು, ಇದು ನಿಖರವಾಗಿಲ್ಲದೆಯೂ ಇರಬಹುದು. 2025ರಲ್ಲಿ ನಡೆದಿರುವ ಯಾವುದೇ ವಿಚ್ಛೇದನ ಇದಾಗಲೇ ಆಗಿರುವ ವಿಚ್ಛೇದನದ ದಾಖಲೆಗಳನ್ನು ಮೀರಿಲ್ಲ. ಅಂಕಿಅಂಶಗಳು ಮೂಲಗಳನ್ನು ಅವಲಂಬಿಸಿ ಬದಲಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories