ನಾವು ದೇಶಕ್ಕಾಗಿ ಹೋರಾಡಿದೆವು ಆದರೆ ದೇಶ ನಮ್ಮ ಕೈ ಬಿಟ್ಟಿತು: ಬಲೂಚ್‌ ಹೋರಾಟಗಾರರ ಕೈಗೆ ಸಿಕ್ಕಿದ ಪಾಕ್ ಯೋಧರ ಅಳಲು

Published : Feb 20, 2026, 06:42 PM IST

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನದ ಏಳು ಸೈನಿಕರನ್ನು ಸೆರೆಹಿಡಿದು ವೀಡಿಯೋ ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ, ಯೋಧರು ತಮ್ಮನ್ನು ರಕ್ಷಿಸುವಂತೆ ಪಾಕ್ ಸರ್ಕಾರವನ್ನು ಕೋರುತ್ತಿದ್ದರೆ, ಪಾಕಿಸ್ತಾನ ಸರ್ಕಾರ ಮಾತ್ರ ಆ ಸೈನಿಕರು ನಮ್ಮವರಲ್ಲ ಎಂದು ಹೇಳಿ ಕೈತೊಳೆದುಕೊಂಡಿದೆ. 

PREV
17
ಬಲೂಚ್ ಸೆರೆ ಹಿಡಿದ ಯೋಧರನ್ನು ನಮ್ಮವರಲ್ಲ ಎಂದ ಪಾಕಿಸ್ತಾನ

ದೇಶದ ರಾಜಕಾರಣದಲ್ಲಿ ಅರಾಜಕತೆ ಅಸ್ಥಿರತೆ ತುಂಬಿದ್ದರೆ ದೇಶದ ಜನ ಸಾಮಾನ್ಯರು ಮಾತ್ರವಲ್ಲದೆ ದೇಶದ ಸೈನಿಕರಿಗೆ ಎಂಥಾ ಸ್ಥಿತಿ ಬರುತ್ತದೆ ಎಂಬುದಕ್ಕೆ ಪಾಕಿಸ್ತಾನದ ಯೋಧರು ಸಾಕ್ಷಿಯಾಗಿದ್ದಾರೆ. ಪಾಕಿಸ್ತಾನ ಹಾಗೂ ಪಾಕಿಸ್ತಾನದಿಂದ ಪ್ರತ್ಯೇಕತೆಗಾಗಿ ಹೋರಾಡುತ್ತಿರುವ ಬಲೂಚಿಸ್ತಾನದ ಹೋರಾಟಗಾರರ ಮಧ್ಯೆ ನಿರಂತರ ಕಾದಾಟ ನಡೆಯುತ್ತಿದ್ದು, ಬಲೂಚ್ ಲಿಬರೇಷನ್ ಆರ್ಮಿಯೂ ಈಗ 7 ಪಾಕಿಸ್ತಾನಿ ಸೈನಿಕರನ್ನು ತನ್ನ ವಶದಲ್ಲಿ ಇರಿಸಿಕೊಂಡಿರುವ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ. ಆದರೆ ಇತ್ತ ಪಾಕಿಸ್ತಾನ ಮಾತ್ರ ಆ ಯೋಧರು ನಮ್ಮವರಲ್ಲ ಎಂದು ಹೇಳುವ ಮೂಲಕ ದೇಶಕ್ಕಾಗಿ ಹೋರಾಡಿದ ಯೋಧರನ್ನು ನಡುನೀರಿನಲ್ಲಿ ಕೈ ಬಿಟ್ಟಿದೆ.

27
ಯೋಧರ ನಡು ನೀರಲ್ಲಿ ಕೈ ಬಿಟ್ಟ ಪಾಕಿಸ್ತಾನ

ಹೌದು ಪಾಕಿಸ್ತಾನದ ವಿರುದ್ಧ ಸಮರ ಸಾರಿರುವ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಮತ್ತೊಂದು ವೀಡಿಯೊವನ್ನು ಬಿಡುಗಡೆ ಮಾಡಿದೆ, ಅದರಲ್ಲಿ ಪಾಕಿಸ್ತಾನಿ ಸೇನೆಯ ಏಳು ಸೈನಿಕರು ಪಾಕ್ ಸರ್ಕಾರವನ್ನು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ, ಸೈನಿಕನೋರ್ವ ತನ್ನ ಗುರುತಿನ ಚೀಟಿಯನ್ನು ತೋರಿಸುತ್ತಾ, ತಾನು ಪಾಕಿಸ್ತಾನಕ್ಕಾಗಿ ಹೋರಾಡಿದೆ ಆದರೆ ಇಂದು ಪಾಕಿಸ್ತಾನ ಸೈನ್ಯ ಹಾಗೂ ಸರ್ಕಾರ ನಮ್ಮನ್ನು ತಮ್ಮವರೆಂದು ಸ್ವೀಕರಿಸುತ್ತಿಲ್ಲ ಎಂದು ಆ ಯೋಧ ಕಣ್ಣೀರಿಡುತ್ತಿರುವ ವೀಡಿಯೋ ವೈರಲ್ ಆಗಿದೆ.

37
ಗುರುತಿನ ಚೀಟಿ ತೋರಿಸಿ ಕಣ್ಣೀರಿಡುತ್ತಿರುವ ಪಾಕ್ ಯೋಧರು

ಇತ್ತ ಪಾಕಿಸ್ತಾನ ಸೇನೆಯ ತನ್ನ ಯಾವುದೇ ಸೈನಿಕರು ಕಾಣೆಯಾಗಿಲ್ಲ ಅಥವಾ ಯಾವುದೇ ಉಗ್ರಗಾಮಿ ಸಂಘಟನೆಯ ವಶದಲ್ಲಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿತ್ತು. ಪಾಕಿಸ್ತಾನದ ಈ ಹೇಳಿಕೆಗೆ ಈ ವೀಡಿಯೋ ಸವಾಲು ಹಾಕಿದೆ. ಬಲೂಚ್ ಲಿಬರೇಶನ್ ಆರ್ಮಿಯೂ ಫೆಬ್ರವರಿ 14 ರಂದು ಈ ಸೈನಿಕರನ್ನು ಸೆರೆಹಿಡಿದಿತ್ತು. ಅವರ ಬಿಡುಗಡೆಗೆ ಪ್ರತಿಯಾಗಿ, ಬಿಎಲ್‌ಎ ಬಲೂಚ್ ಹೋರಾಟಗಾರರ ಬಿಡುಗಡೆ ಮಾಡಬೇಕು ಎಂದು ಪಾಕಿಸ್ತಾನವನ್ನು ಒತ್ತಾಯಿಸಿದೆ. ಇದಕ್ಕಾಗಿ ಪಾಕಿಸ್ತಾನ ಸರ್ಕಾರಕ್ಕೆ ಫೆಬ್ರವರಿ 22 ರವರೆಗೆ ಸಮಯ ನೀಡಲಾಗಿದೆ.

47
ಬಿಎಲ್‌ಎಯ ಅಧಿಕೃತ ಚಾನೆಲ್ 'ಹಕ್ಕಾಲ್' ನಲ್ಲಿ ವೀಡಿಯೋ ಬಿಡುಗಡೆ

ಬಿಎಲ್‌ಎಯ ಅಧಿಕೃತ ಚಾನೆಲ್ 'ಹಕ್ಕಾಲ್' ನಲ್ಲಿ ಈ ವೀಡಿಯೋ ಬಿಡುಗಡೆ ಬಿಡುಗಡೆ ಮಾಡಲಾಗಿದೆ. ವಿಡಿಯೋದಲ್ಲಿ ಬಿಎಲ್‌ಎ ಹೋರಾಟಗಾರರು ಸೆರೆಹಿಡಿಯಲಾದ ಸೈನಿಕರನ್ನು ಬಿಡುಗಡೆ ಮಾಡಿಕೊಳ್ಳಲು ಪಾಕಿಸ್ತಾನ ಸರ್ಕಾರಕ್ಕೆ 7 ದಿನಗಳ ಅಂತಿಮ ಗಡುವು ನೀಡಿದ್ದರು. ಆದರೆ ಅವರು ನಿಮ್ಮನ್ನು ತಮ್ಮವರೆಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ. ನೀವು ಪಾಕಿಸ್ತಾನಿ ಸೈನಿಕರು ಎಂದು ಹೇಗೆ ಸಾಬೀತುಪಡಿಸುತ್ತೀರಿ? ಎಂದು ಸೆರೆಯಾದ ಪಾಕ್ ಯೋಧರಿಗೆ ಪ್ರಶ್ನಿಸುವುದನ್ನು ಕಾಣಬಹುದು. ಇದಕ್ಕೆ ಪ್ರತಿಯಾಗಿ ಸೈನಿಕರು ನಾವು ಅವರ ಸೈನಿಕರಲ್ಲ ಎಂದು ನಮ್ಮ ಸೈನ್ಯವೂ ಹೇಗೆ ಹೇಳುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ.

57
ನಮ್ಮ ಜನರಲ್ಲ ಎಂದು ನೀವು ಹೇಗೆ ಹೇಳುತ್ತೀರಿ?

ಕ್ಯಾಮೆರಾ ಮುಂದೆ ತಮ್ಮ ಅಧಿಕೃತ ಸೇವಾ ಕಾರ್ಡ್‌ಗಳು ಮತ್ತು ಗುರುತಿನ ಚೀಟಿಗಳನ್ನು ತೋರಿಸುತ್ತಾ ಆ ಯೋಧರು, ಇದು ಸೈನ್ಯದಿಂದ ಬಂದದ್ದು, ಅಲ್ಲವೇ? ಇದನ್ನೆಲ್ಲಾ ನಮಗೆ ಕೊಟ್ಟವರು ಅವರೇ. ನಾವು ಇದನ್ನು ನಾವೇ ತಯಾರಿಸಲಿಲ್ಲ. ಅವರು ನಮ್ಮ ಜನರಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಎಂದು ಕೇಳುತ್ತಾ ಭಾವುಕರಾಗಿದ್ದಾರೆ.

ಒಬ್ಬ ಸೈನಿಕನು, ನಮ್ಮನ್ನು ನೇಮಕ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಲಾಯಿತು ಮತ್ತು ನಮ್ಮನ್ನು ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಯಿತು. ಇಂತಹ ಪರಿಸ್ಥಿತಿಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಈಗ ನಾವು ಅವರ ಸೈನಿಕರೆಂದು ಪರಿಗಣಿಸಲು ಏಕೆ ನಿರಾಕರಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚೆನ್ನೈ ಶಿವ ದೇಗುಲಕ್ಕೆ ಭೇಟಿ ನೀಡಿ ನಿರರ್ಗಳವಾಗಿ ಶಿವ ತಾಂಡವ ಪಠಿಸಿದ ಪಾಪ್ ಗಾಯಕ

67
ನಮ್ಮ ಯಾವುದೇ ಸೈನಿಕರು ಕಾಣೆಯಾಗಿಲ್ಲ ಎಂದ ಪಾಕಿಸ್ತಾನ

ಹೀಗಿರುವಾಗ ಪಾಕಿಸ್ತಾನ ನಮ್ಮ ಯಾವುದೇ ಸೈನಿಕರು ಕಾಣೆಯಾಗಿಲ್ಲಎಂದು ಹೇಳಿದೆ. ಈ ಹಿಂದೆ ಪಾಕ್‌ನ 7 ಸೈನಿಕರನ್ನು ಸೆರೆಹಿಡಿಯಲಾಗಿದೆ ಎಂದು ವರದಿಗಳಿದ್ದವು, ಆದರೆ ಈ ವೀಡಿಯೊದಲ್ಲಿ 8 ಜನರು ಕಾಣಿಸ್ತಿದ್ದಾರೆ. ಈ ವೀಡಿಯೊದಲ್ಲಿ, ಕೆಲವು ಜನರು ಒರಟಾದ ಪ್ರದೇಶದಲ್ಲಿ ನೆಲದ ಮೇಲೆ ಮಂಡಿಯೂರಿ ಕುಳಿತಿರುವುದು ಕಾಣುತ್ತಿದ್ದು. ಅವರ ಬಳಿ ಶಸ್ತ್ರಸಜ್ಜಿತ ಜನರು ನಿಂತಿದ್ದಾರೆ. ಫೆಬ್ರವರಿ 22 ರೊಳಗೆ ಪಾಕಿಸ್ತಾನ ಸರ್ಕಾರ ಸೈನಿಕರ ವಿನಿಮಯದ ಕುರಿತು ಮಾತುಕತೆ ಪ್ರಾರಂಭಿಸದಿದ್ದರೆ, ಬಂಧಿತರನ್ನು ಗಲ್ಲಿಗೇರಿಸಲಾಗುತ್ತದೆ ಎಂದು ಬಿಎಲ್‌ಎ ಎಚ್ಚರಿಸಿದೆ.

ಇದನ್ನೂ ಓದಿ: ಬದುಕಿದ್ದು ಕೆಲವೇ ವರ್ಷ ನಟಿಸಿದ್ದ 3 ಸಿನಿಮಾವೂ ಸೂಪರ್ ಹಿಟ್: 25ಕ್ಕೆ ಬದುಕು ಅಂತ್ಯಗೊಳಿಸಿದ ಜಿಯಾ ಖಾನ್

77
ನೈಸರ್ಗಿಕ ಸಂಪನ್ಮೂಲಗಳಿದ್ದರೂ ಪಾಕಿಸ್ತಾನದ ಅತ್ಯಂತ ಬಡ ಪ್ರಾಂತ್ಯ ಎನಿಸಿರುವ ಬಲೂಚಿಸ್ತಾನ

ಬಲೂಚಿಸ್ತಾನವು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದರೂ, ಪಾಕಿಸ್ತಾನದ ಅತ್ಯಂತ ಬಡ ಪ್ರಾಂತ್ಯವೆಂದು ಪರಿಗಣಿಸಲಾಗಿದೆ. ಶಿಕ್ಷಣ, ಉದ್ಯೋಗ, ಮೂಲಸೌಕರ್ಯ ಮತ್ತು ಒಟ್ಟಾರೆ ಆರ್ಥಿಕ ಅಭಿವೃದ್ಧಿಯಲ್ಲಿ ಈ ಪ್ರಾಂತ್ಯವು ದೇಶದ ಉಳಿದ ಭಾಗಗಳಿಗಿಂತ ಹಿಂದುಳಿದಿದೆ. ಖನಿಜ ಸಮೃದ್ಧವಾಗಿರುವ ಈ ನೈಋತ್ಯ ಪ್ರಾಂತ್ಯವು ಅಫ್ಘಾನಿಸ್ತಾನ ಮತ್ತು ಇರಾನ್‌ನ ಗಡಿಯನ್ನು ಹೊಂದಿದೆ. ದಶಕಗಳಿಂದ, ಈ ಪ್ರದೇಶವು ದಂಗೆ ಮತ್ತು ಹಿಂಸಾಚಾರವನ್ನು ಎದುರಿಸುತ್ತಿದೆ. ಉಗ್ರಗಾಮಿಗಳು ಆಗಾಗ್ಗೆ ಸರ್ಕಾರಿ ಪಡೆಗಳು, ವಿದೇಶಿ ಪ್ರಜೆಗಳು ಮತ್ತು ಇತರ ಪ್ರಾಂತ್ಯಗಳಿಂದ ವಲಸೆ ಬಂದ ಕಾರ್ಮಿಕರನ್ನು ಗುರಿಯಾಗಿಸಿಕೊಳ್ಳುತ್ತಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories