ಮಟನ್ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪತಿಯನ್ನು ಪರಲೋಕಕ್ಕೆ ಕಳಿಸಲು ಪ್ಲಾನ್! ಆಮೇಲೆ ಸಿನಿಮಾ ಕಥೆ ಕಟ್ಟಿದ ಕಿಲಾಡಿ ಲೇಡಿ

Published : Feb 20, 2026, 02:39 PM IST

ತೆಲಂಗಾಣ: ಈಗ ಕೌಟುಂಬಿಕ ಕಲಹಗಳು ಹೆಚ್ಚೆಚ್ಚು ವರದಿಯಾಗುತ್ತಲೇ ಇವೆ. ಇವೆಲ್ಲದರ ನಡುವೆ ಇಲ್ಲೊಬ್ಬಳು ಪಾಪಿ ಪತ್ನಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಪತಿಯನ್ನು ಮಟನ್ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪರಲೋಕಕ್ಕೆ ಕಳಿಸಿದ್ದಾಳೆ. ಏನಿದು ಘಟನೆ ಯಾಕೆ ಹೀಗೆ ಮಾಡಿದ್ಲು ಅನ್ನೋದನ್ನು ನೋಡೋಣ ಬನ್ನಿ. 

PREV
16
ಪತಿಯ ಕಾಟ, ಚಟ್ಟ ಕಟ್ಟಿದ ಪತ್ನಿ

ಇತ್ತೀಚೆಗೆ ವಿವಾಹೇತರ ಅಕ್ರಮ ಸಂಬಂಧಕ್ಕೆ ಸುಂದರ ಕುಟುಂಬಗಳು ನಾಶವಾಗುವ ಸುದ್ದಿಗಳು ದೇಶಾದ್ಯಂತ ಹೆಚ್ಚು ಹೆಚ್ಚು ವರದಿಯಾಗುತ್ತಲೇ ಇವೆ. ಇದಕ್ಕಾಗಿ ಒಬ್ಬರನ್ನು ಸಾಯಿಸಿಯಾದರೂ ಮತ್ತೊಬ್ಬರ ಜತೆ ಸೇರಲು ತಯಾರಾಗಿರುತ್ತಾರೆ. ಆದರೆ ಅಪರಾಧಿಗಳು ಎಷ್ಟೇ ಚಾಲಾಕಿಗಳಾದರೂ ಪೊಲೀಸರು ಕೊ*ಲೆಗಾರರನ್ನು ಪತ್ತೆ ಹಚ್ಚದೇ ಬಿಡುವುದಿಲ್ಲ.

26
ಪತಿಯ ಕಿರಿಕಿರಿ ತಾಳಲಾರದೇ ಕೊ*ಲೆ

ಇದೀಗ ತೆಲಂಗಾಣ ರಾಜ್ಯದ ಕರೀಂ ನಗರದಲ್ಲಿ ಒಂದು ಇಂಟ್ರೆಸ್ಟಿಂಗ್ ಕೊ*ಲೆ ಬೆಳಕಿಗೆ ಬಂದಿದೆ. ಮೌನಿಕ ಎನ್ನುವ ಪತ್ನಿಯು ತನ್ನ ಗಂಡನ ಕಿರಿಕಿರಿ ತಾಳಲಾರದೇ ಮಟನ್ ಗ್ರೇವಿಯಲ್ಲಿ ಬರೋಬ್ಬರಿ 15 ವಯಾಗ್ರಾ ಮಾತ್ರೆಗಳನ್ನು ಬೆರೆಸಿ ಪತಿ ಸುರೇಶ್ ಅವರನ್ನು ಕೊ*ಲೆ ಮಾಡಲು ಪ್ರಯತ್ನಿಸಿದ್ದಾಳೆ. ಅದು ವಿಫಲವಾದಾಗ ಮತ್ತೊಂದು ಪ್ಲಾನ್ ಮಾಡಿದ್ದಾಳೆ.

36
ಮದ್ಯ ವ್ಯಸನಿಯಾಗಿ ಬದಲಾದ ಸುರೇಶ

ಮೌನಿಕ ಹಾಗೂ ಸುರೇಶ್ ಸುಂದರ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಸಹವಾಸ ದೋಷದಿಂದ ಸುರೇಶ್ ಮದ್ಯ ವ್ಯಸನಿಯಾಗಿಬಿಟ್ಟರು. ಕುಡಿತದ ಬಳಿಕ ಹೆಂಡತಿ ಮೌನಿಕಗೆ ಇನ್ನಿಲ್ಲದಂತೆ ನಿಂದಿಸುವುದು ಹಾಗೂ ಪತ್ನಿಯ ಹಣವನ್ನೂ ಕಸಿದುಕೊಂಡು ಹೋಗಿ ಎಣ್ಣೆ ಹೊಡೆಯಲಾರಂಭಿಸಿದ್ದ.

46
ಪತಿಯನ್ನು ಪರಲೋಕಕ್ಕೆ ಕಳಿಸಲು ಮಾಸ್ಟರ್ ಪ್ಲಾನ್

ಇದನ್ನೆಲ್ಲ ನೋಡಿ ರೋಸಿ ಹೋದ ಮೌನಿಕ, ಕೊನೆಗೆ ಯಾರಿಗೂ ಅನುಮಾನ ಬಾರದಂತೆ ಸುರೇಶನನ್ನು ಪರಲೋಕಕ್ಕೆ ಕಳಿಸಲು ಮಾಸ್ಟರ್ ಪ್ಲಾನ್ ಮಾಡಿದಳು. ಇದಕ್ಕೆ ಆಕೆಯ ಗೆಳೆಯ ಸಾಥ್ ಕೊಟ್ಟ. ಮೆಡಿಕಲ್ ಮಾಲೀಕ ಮಟನ್‌ನಲ್ಲಿ 15 ವಯಾಗ್ರಾ ಮಾತ್ರೆ ಸೇರಿಸಿ ಊಟ ಹಾಕುವಂತೆ ಐಡಿಯಾ ಕೊಟ್ಟ. ಆದರೆ ಸುರೇಶ ಮಟನ್ ವಾಸನೆ ಬದಲಾಗಿದ್ದನ್ನು ಕಂಡು ಹಿಡಿದ. ಹೀಗಾಗಿ ಈ ಪ್ಲಾನ್ ಫೇಲ್ ಆಯ್ತು.

56
ಸಿನಿಮಾ ಕಥೆ ಕಟ್ಟಿದ್ದ ಮೌನಿಕ

ಇದಾದ ಬಳಿಕ ಕಳೆದ ಸೆಪ್ಟೆಂಬರ್ 17, 2025ರಂದು ಮೌನಿಕ ತನ್ನ ಗೆಳೆಯನ ಜತೆಗೂಡಿ ಸುರೇಶನಿಗೆ ಮದ್ಯದಲ್ಲಿ ಬಿಪಿ, ನಿದ್ರೆ ಮಾತ್ರೆ ಹಾಕಿ ಪ್ರಜ್ಞೆ ತಪ್ಪುವಂತೆ ಮಾಡಿದರು. ಆ ಬಳಿಕ ಮೌನಿಕಳ ಗೆಳೆಯ ಹಾಗೂ ಮತ್ತವರ ಸಹಚರರು ಕತ್ತುಹಿಸುಕಿ ಕೊ*ಲೆ ಮಾಡಿದ್ದರು. ಆ ಮೇಲೆ ಪೊಲೀಸರಿಗೆ ಲೈಂ*ಗಿಕ ಕ್ರಿಯೆ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಕಥೆ ಕಟ್ಟಿದ್ದಳು.

66
ಸಿಕ್ಕಿಬಿದ್ದಿದ್ದು ಹೇಗೆ?

ಮೊದಲಿಗೆ ಇದನ್ನು ಸಹಜ ಸಾವು ಎಂದೇ ಭಾವಿಸಲಾಗಿತ್ತು. ಆದರೆ ಆಕೆಯ ಕುಟುಂಬಸ್ಥರು ಸುರೇಶನಿಗೆ ಮಾಡಿಸಲಾಗಿದ್ದ ಇನ್‌ಶ್ಯೂರೆನ್ಸ್ ಕ್ಲೈಮ್ ಮಾಡಲು ಪೊಲೀಸ್ ಠಾಣೆಗೆ ದೂರು ದಾಖಲಿಸುವಂತೆ ಮೌನಿಕ ಮೇಲೆ ಒತ್ತಡ ಹೇರಿದರು. ಆಗ ಮರಣೋತ್ತರ ಪರೀಕ್ಷೆಯಲ್ಲಿ ಸುರೇಶನ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿರುವುದು ಕಂಡು ಬಂದಿತ್ತು. ಆಗ ಹೆಚ್ಚಿನ ರೀತಿಯಲ್ಲಿ ತನಿಖೆ ಮಾಡಿದಾಗ ಮೌನಿಕ, ತಾವು ಗಂಡನನ್ನು ಸಾಯಿಸಿರುವುದು ಒಪ್ಪಿಕೊಂಡಿದ್ದಾಳೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories