ಅಮೃತಧಾರೆ ಸೀರಿಯಲ್ ಪ್ರೇಮಿಗಳು ಕಾಯ್ತಿದ್ದ ದಿನ ಬಂದೇ ಬಿಟ್ಟಿದೆ. ಮಗುವಿಗೆ ಏನು ಹೆಸರು ಇಡಲಿದ್ದಾರೆ ಎಂದು ಕಾಯುತ್ತಿದ್ದವರಿಗೆ ಆ ಘಳಿಗೆ ಬಂದೇ ಬಿಟ್ಟದೆ. ಮಗುವಿಗೆ ನಾಮಕರಣ ಶಾಸ್ತ್ರ ಶುರುವಾಗಿದೆ.
ಅಮೃತಧಾರೆಯಲ್ಲಿ ಇದೀಗ ಮಗುವಿನ ನಾಮಕರಣದ ವಿಶೇಷ ಎಪಿಸೋಡ್ ನಡೆಯುತ್ತಿದೆ. ಎಲ್ಲರೂ ಮಗುವಿನ ನಾಮಕರಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಎಲ್ಲರೂ ಖುಷಿಯಾಗಿದ್ದಾರೆ. ಭೂಮಿಕಾ ಅಪ್ಪ-ಅಮ್ಮ ಎಲ್ಲರೂ ಮನೆಗೆ ಬಂದಿದ್ದು ಮನೆಯಲ್ಲಿ ಹಬ್ಬದ ವಾತಾವರಣ.
27
ಗೌತಮ್- ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ
ಶಕುಂತಲಾ ಒಬ್ಬಳನ್ನು ಬಿಟ್ಟರೆ ಎಲ್ಲರೂ ಖುಷಿಯಾಗಿದ್ದಾರೆ. ಮಗುವನ್ನು ಭಾಗ್ಯಮ್ಮಾ ಎತ್ತಿಕೊಂಡಿದ್ದಾಳೆ. ಅಷ್ಟಕ್ಕೂ ಆಕೆಯ ಆರೋಗ್ಯ ಸರಿಯಾಗಿದ್ದು, ಎಲ್ಲವೂ ನೆನಪಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ವಿಷಯವನ್ನು ಹೇಳಿಬಿಟ್ಟರೆ ಶಕುಂತಲಾ ಎಲ್ಲಿ ತನ್ನ ಮಗನ ಪ್ರಾಣಕ್ಕೆ ಕಂಟಕ ತಂದುಬಿಡುತ್ತಾಳೆಯೋ ಎನ್ನುವ ಆತಂಕ ಆಕೆಯದ್ದು. ಇದೇ ಕಾರಣಕ್ಕಾಗಿ ಸೈಲೆಂಟ್ ಆಗಿಯೇ ಇದ್ದಾಳೆ.
37
ಗೌತಮ್- ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ- ಶಕುಂತಲಾ ಗರಂ
ಇದೀಗ ಮಗುವಿಗೆ ಏನು ಹೆಸರು ಇಡಬೇಕು ಎನ್ನುವ ಬಗ್ಗೆ ಎಲ್ಲರೂ ಚರ್ಚಿಸಿಯಾಗಿದೆ. ಗೌತಮ್ ಮತ್ತು ಭೂಮಿಕಾ ತಮ್ಮ ತಮ್ಮ ಇಷ್ಟರ ಹೆಸರುಗಳನ್ನು ಚೀಟಿಯಲ್ಲಿ ಬರೆದು ಹಾಕಿದ್ದಾರೆ. ಅದನ್ನು ಮಗುವಿನ ಸಹೋದರಮಾವ ಜೀವಾ ಚೀಟಿ ಎತ್ತಿದ್ದಾನೆ.
ಆ ಚೀಟಿಯಲ್ಲಿ ಏನು ಹೆಸರು ಬಂದಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಭೂಮಿಕಾ ಅಥವಾ ಗೌತಮ್ ಇಬ್ಬರಲ್ಲಿ ಯಾರು ಆಯ್ಕೆ ಮಾಡಿರುವ ಹೆಸರು ಬಂದಿದೆ ಎಂದು ನೋಡಬೇಕಿದೆ. ಅಷ್ಟಕ್ಕೂ ಗೌತಮ್ ತನಗೆ ಹೆಣ್ಣುಮಗು ಬೇಕು ಎಂದಿದ್ದರೆ, ಭೂಮಿಕಾ ಗಂಡು ಎಂದಿದ್ದಳು.ಎರಡೂ ಮಕ್ಕಳು ಹುಟ್ಟಿವೆ. ಆದರೆ ಹೆಣ್ಣುಮಗುವನ್ನು ಅಪಹರಣ ಮಾಡಲಾಗಿದೆ.
57
ಗೌತಮ್- ಭೂಮಿಕಾ ಮಗುವಿಗೆ ಚೀಟಿಯಲ್ಲಿದೆ ಹೆಸರು
ಈ ರಹಸ್ಯವನ್ನು ಭೂಮಿಕಾಗೆ ಹೇಳಿ ಆಕೆಯ ಸ್ಥಿತಿಯನ್ನು ಶೋಚನೀಯ ಮಾಡುವ ಪ್ಲ್ಯಾನ್ ಮಾಡಿದ್ದಾಳೆ ಶಕುಂತಲಾ. ಭೂಮಿಕಾ ಮಗುವಿನ ವಿಷಯದಲ್ಲಿ ತುಂಬಾ ಸೆನ್ಸೆಟೆವ್ ಆಗಿರುವ ಕಾರಣ, ವಿಷಯವನ್ನು ಹೇಳಬೇಡಿ ಎಂದು ವೈದ್ಯರು ಹೇಳಿರೋದ್ರಿಂದ ಆಕೆಯಿಂದ ಗೌತಮ್ ಮತ್ತು ಆನಂದ್ ವಿಷಯ ಮುಚ್ಚಿಟ್ಟಿದ್ದಾರೆ.
67
ಗೌತಮ್- ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ
ಇದರ ನಡುವೆಯೇ ನಾಮಕರಣ ಶಾಸ್ತ್ರ ನಡೆಯುತ್ತಿದೆ. ಇಬ್ಬರೂ ಚೀಟಿ ಬರೆದು ಅಂತಿಮಗೊಳಿಸಿದ್ದಾರೆ. ಮಗುವಿಗೆ ಏನು ಹೆಸರು ಇಟ್ಟಿರಬಹುದು ಎನ್ನುವ ಕುತೂಹಲ ವೀಕ್ಷಕರದ್ದು.
77
ಮಗುವಿನ ಹೆಸರು ಜೀವಾ ಕೈಯಲ್ಲಿ
ಆದರೆ ವಿಷಯ ತಿಳಿಸಿ ಬಿರುಗಾಳಿ ಎಬ್ಬಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ ಶಕುಂತಲಾ ಮತ್ತು ಜೈದೇವ. ಸದ್ಯ ಮಗುವಿನ ನಾಮಕರಣದ ಸಮಯದಲ್ಲಿ ಆಕೆ ಏನೂ ಹಾನಿ ಮಾಡದೇ ಇರಲಿ ಎಂದು ಸೀರಿಯಲ್ ಪ್ರೇಮಿಗಳು ಹೇಳುತ್ತಿದ್ದಾರೆ.