Published : Jul 23, 2025, 02:47 PM ISTUpdated : Jul 23, 2025, 03:01 PM IST
ಭಾಗ್ಯಲಕ್ಷ್ಮಿಯಲ್ಲಿ ತನ್ವಿ ಪಾತ್ರಧಾರಿಯಾಗಿರೋ ನಟಿ ಅಮೃತಾ ಗೌಡ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲು ರೆಡಿ ಆಗ್ತಾ ಇದ್ದಾಳಾ? ಕ್ಯೂಟ್ ಫೋಟೋಶೂಟ್ ನೋಡಿ ಅಭಿಮಾನಿಗಳು ಹೇಳ್ತಿರೋದೇನು?
ಭಾಗ್ಯಲಕ್ಷ್ಮಿಯಲ್ಲಿ ತನ್ವಿ ಪಾತ್ರಧಾರಿಯಾಗಿರೋ ನಟಿ ಅಮೃತಾ ಗೌಡ ಈಚೆಗಷ್ಟೇ ದ್ವಿತೀಯ ಪಿಯುಸಿ ಮುಗಿಸಿದ್ದಾಳೆ. ಬಾಲಕಿಯಿಂದ ಯೌವನಾವಸ್ಥೆಗೆ ಕಾಲಿಟ್ಟಿದ್ದಾಳೆ ಅಮೃತಾ. ಇದಾಗಲೇ ಸಂದರ್ಶನದಲ್ಲಿ ತನಗೆ ನಟಿಯಾಗುವ ಕನಸು ಇದೆ ಎಂದು ಹೇಳಿಕೊಂಡಿದ್ದಳು. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರೋ ಅಮೃತಾ ಆಗಾಗ್ಗೆ ಫೋಟೋಶೂಟ್, ವಿಡಿಯೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾಳೆ. ನಟನೆಯಲ್ಲಿಯೂ ಈಕೆಯದ್ದು ಎತ್ತಿದ ಕೈ.
27
ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲು ರೆಡಿಯಾದ ತನ್ವಿ?
ಇದಾಗಲೇ ತನ್ನ ಅಮೋಘ ಅಭಿನಯದಿಂದ ಜನರ ಮನಸ್ಸನ್ನು ಗೆದ್ದಿದ್ದಾಳೆ. ಈಕೆ ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾಳೆ.
37
ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲು ರೆಡಿಯಾದ ತನ್ವಿ?
ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾಳೆ.
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈಕೆ ರೀಲ್ಸ್ ಮಾಡಿದಾಗಲೆಲ್ಲಾ ಮುಂದೊಂದು ದಿನ ನಾಯಕಿಯಾಗುತ್ತಾಳೆ ಎಂದೇ ಫ್ಯಾನ್ಸ್ ಹೇಳಿದ್ದು ಉಂಟು. ಅದೇ ರೀತಿ, ಈಗ ಮಾಡಿಸಿಕೊಂಡಿರುವ ಫೋಟೋಶೂಟ್ ನೋಡಿದರೆ ಸ್ಯಾಂಡಲ್ವುಡ್ಗೆ ಅಮೃತಾ ಎಂಟ್ರಿ ಕೊಡುವ ಛಾನ್ಸಸ್ ಇದೆ ಎಂದೇ ಹೇಳಲಾಗುತ್ತಿದೆ.
57
ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲು ರೆಡಿಯಾದ ತನ್ವಿ?
ಇನ್ನು ಎರಡು ತಿಂಗಳ ಹಿಂದೆ ತನ್ವಿ ಉರ್ಫ್ ಅಮೃತಾ ಸಕತ್ ಸುದ್ದಿಯಾಗಲು ಕಾರಣ, ಆಕೆ ಪಿಯುಸಿಯ ಕಾಮರ್ಸ್ ವಿಭಾಗದಲ್ಲಿ ಶೇಕಡಾ 91 ತೆಗೆದದ್ದರಿಂದ. ಈ ಮೂಲಕ ನಟನೆಯ ಜೊತೆಗೆ ಅಭ್ಯಾಸದಲ್ಲಿಯೂ ಜಾಣೆ ಎನ್ನುವುದನ್ನು ಸಾಬೀತು ಮಾಡಿದ್ದಾಳೆ. ಈಗಿನ ಬಹುತೇಕ ಮಕ್ಕಳು ಶೇಕಡಾ 90ರ ಮೇಲೆ ತೆಗೆಯುವುದು ಸಾಮಾನ್ಯವಾಗಿದೆ. ಆದರೆ ಒಂದೆಡೆ ಶೂಟಿಂಗ್ ಬಿಜಿಯ ನಡುವೆಯೇ, ಇಷ್ಟು ಅಂಕ ಗಳಿಸಿರುವ ಕಾರಣ ತನ್ವಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿತ್ತು.
67
ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲು ರೆಡಿಯಾದ ತನ್ವಿ?
ಅಷ್ಟಕ್ಕೂ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ತನ್ವಿ, ತನ್ನ ಸುಂದರ ಅಭಿನಯದಿಂದ ಒಂದು ಸಲ ಅಮ್ಮನ ಪರ, ಮತ್ತೊಮ್ಮೆ ಅಪ್ಪನ ಪರ, ಮಗದೊಮ್ಮೆ ಗೊಂದಲಗೂಡಾಗಿರುವ ಮನಸ್ಸು... ಹೀಗೆ ಎಲ್ಲಾ ರೀತಿಯ ಅಭಿನಯಕ್ಕೂ ಸೈ ಎನಿಸಿಕೊಂಡಿದ್ದಾಳೆ.
77
Tanvi
ಶಿಕ್ಷಣದ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈಕೆ ಅದೇ ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲೂ (social media) ಸಕತ್ ಆಕ್ಟೀವ್.