ಅಮೃತಧಾರೆ ಸೀರಿಯಲ್ಗೆ ಈಗ ಸಕತ್ ಟ್ವಿಸ್ಟ್ ಸಿಕ್ಕಿದೆ. ಅತ್ತ ಭೂಮಿಕಾ ಮತ್ತು ಗೌತಮ್ ಮಗುವಿನ ಟೆನ್ಷನ್ ಅಂತೂ ಇದ್ದೇ ಇದೆ. ಮಗುವಿಗೆ ಆಕಾಶ್ ಎಂದು ಹೆಸರು ಇಟ್ಟಾಗಿದೆ. ಭೂಮಿಯ ಮಗ ಆಕಾಶ್ ಎನ್ನುವ ಅರ್ಥದಲ್ಲಿ ಈ ಹೆಸರು ಇಡಲಾಗಿದೆ. ಆದರೆ ಇನ್ನೊಂದು ಮಗುವಿಗಾಗಿ ಶೋಧ ಕಾರ್ಯವನ್ನು ಗೌತಮ್ ಮತ್ತು ಆನಂದ್ ಮುಂದುವರೆಸಿದ್ದಾರೆ. ಆದರೆ ಶಕುಂತಲಾ ಮಾತ್ರ ಇರುವ ಮಗುವನ್ನೂ ಮುಗಿಸುವ ಪ್ಲ್ಯಾನ್ ಹಾಕುತ್ತಿದ್ದಾಳೆ. ತಾವೇ ಮಗುವನ್ನು ಕಿಡ್ನ್ಯಾಪ್ ಮಾಡಿರುವ ವಿಷಯವನ್ನು ಭಾಗ್ಯಮ್ಮನ ಬಳಿ ಶಕುಂತಲಾ ಬಾಯಿಬಿಟ್ಟಿದ್ದಾಳೆ. ಇದರಿಂದ ಭಾಗ್ಯಮ್ಮನಿಗೆ ಭೂಮಿಯೇ ಕುಸಿದ ಅನುಭವವಾಗಿದೆ.
28
ಮಲ್ಲಿ ಹೊಟ್ಟೆ ಉರಿಸೋಕೆ ರೆಡಿಯಾದ ಜೈದೇವ್-ದಿಯಾ
ಆದರೆ ಅದೇ ಇನ್ನೊಂದೆಡೆ ಮಲ್ಲಿಯ ಸ್ಟೋರಿ ಸಕತ್ ಇಂಟರೆಸ್ಟಿಂಗ್ ಆಗಿದೆ. ಭೂಮಿಕಾ ಮಗುವಿನ ನಾಮಕರಣದ ದಿನ ಮನೆಗೆ ಬಂದ ಮಹಿಳೆಯರು, ಮಲ್ಲಿಯ ಬಗ್ಗೆ ಚುಚ್ಚು ಮಾತುಗಳನ್ನಾಡಿದ್ದಾರೆ. ಅಸಲಿಗೆ ಇದು ಶಕುಂತಲಾ ಪ್ಲ್ಯಾನೇ ಆಗಿತ್ತು. ಮಲ್ಲಿಗೆ ನೋವಾದರೆ, ಭೂಮಿಕಾ ಮತ್ತು ಗೌತಮ್ಗೂ ನೋವಾಗುತ್ತದೆ ಎನ್ನುವುದು ಒಂದಾದರೆ, ಮಲ್ಲಿ ಈಗ ಕೋಟ್ಯಧೀಶ್ವರೆ ಆಗಿರುವ ಕಾರಣ, ಆಕೆಯ ಆಸ್ತಿಯನ್ನೂ ಕಬಳಿಸಲು ಜೈದೇವನನ್ನು ಮತ್ತೆ ಮಲ್ಲಿಯ ಜೊತೆ ಸೇರಿಸುವ ಹುನ್ನಾರ ಅವಳದ್ದು.
38
ಭೂಮಿಕಾ-ಮಲ್ಲಿ ಸಕತ್ ಪ್ಲ್ಯಾನ್
ಅದೇ ಕಾರಣಕ್ಕೆ ಅಕ್ಕ-ಪಕ್ಕದ ಮಹಿಳೆಯರನ್ನು ಕರೆಸಿದ್ದಳು. ಅದರಂತೆ ಅವರು ಕೂಡ ಮಲ್ಲಿಗೆ ಚುಚ್ಚು ಮಾತು ಆಡಿದ್ದರು. ಆದರೆ ಭೂಮಿ ಟೀಚರ್ ಸುಮ್ನೆ ಇರ್ತಾಳಾ? ಆಡುವವರ ಬಾಯಿಗೆ ಹೇಗೆ ಬೀಗ ಹಾಕಬೇಕು ಎನ್ನುವುದು ಅವಳಿಗೆ ಚೆನ್ನಾಗಿ ಗೊತ್ತು. ಮೂದಲಿಸಿದವರನ್ನು ತರಾಟೆಗೆ ತೆಗೆದುಕೊಂಡ ಭೂಮಿಕಾ, ಅವರನ್ನು ಮನೆಯಿಂದ ಹೊರಕ್ಕೆ ಕಳಿಸಿದಳು. ಏನೋ ಪ್ಲ್ಯಾನ್ ಮಾಡಿಕೊಂಡಿದ್ದ ಶಕುಂತಲಾಗೂ ಮುಖಭಂಗ ಆದಂತಾಗಿತ್ತು.
ಇನ್ನು ಭೂಮಿಕಾ ಈ ವಿಷಯದಿಂದ ವಿಚಲಿತಳಾಗಿ, ಮಲ್ಲಿಯ ಲೈಫ್ ಸೆಟಲ್ ಮಾಡುವ ಯೋಚನೆಯಲ್ಲಿದ್ದಾಳೆ. ಗೌತಮ್ ಜೊತೆ ಈ ವಿಷಯವಾಗಿ ಮಾತನಾಡಿದ್ದಾಳೆ. ಮಲ್ಲಿಯ ಬದುಕನ್ನು ಸರಿ ಮಾಡುವುದಾಗಿ ಇಬ್ಬರೂ ಮಾತನಾಡಿದ್ದಾರೆ.
58
ಮಲ್ಲಿ ಹೊಟ್ಟೆ ಉರಿಸೋಕೆ ಹೋಗಿ ಎಡವಟ್ಟು ಆಯ್ತು!
ಮತ್ತೊಂದೆಡೆ ಮಲ್ಲಿಯ ಹೊಟ್ಟೆ ಉರಿಸುವ ಸಲುವಾಗಿ ಜೈದೇವ ಮತ್ತು ದಿಯಾ ಅವಳು ಇದ್ದಲ್ಲಿಗೆ ಬಂದು ಲವ್ ಶುರುಹಚ್ಚಿಕೊಂಡಿದ್ದಾರೆ. ಇದನ್ನು ನೋಡಿ ಮಲ್ಲಿ ಭೂಮಿಕಾಗೆ ಮೆಸೇಜ್ ಮಾಡಿದ್ದಾಳೆ. ಆಗ ಭೂಮಿಕಾ ಮ್ಯಾರೇಜ್ ಬ್ರೋಕರ್ ರೀತಿ ಕಾಲ್ ಮಾಡಿದ್ದಾಳೆ. ನಿಮ್ಮ ಪ್ರೊಫೈಲ್ ನೋಡಿ ಸಿಕ್ಕಾಪಟ್ಟೆ ಪ್ರಪೋಸಲ್ ಬರ್ತಿವೆ ಎಂದಿದ್ದಾಳೆ.
68
ಇಂಗು ತಿಂದ ಮಂಗನಂತಾದ ಜೈದೇವ-ದಿಯಾ
ನಂತರ ಮಲ್ಲಿ ಒಹೊ ನನ್ನ ಪ್ರೊಫೈಲ್ ನೋಡಿದ್ರಾ? ಮದುವೆಗೆ ರೆಡಿನಾ ಕೇಳಿದ್ದಾಳೆ. ಕೊನೆಗೆ ಡಿವೋರ್ಸ್ ಇನ್ನೂ ಆಗಿಲ್ಲ. ನೀವು ಹೂಂ ಅಂದ್ರೆ ಈಗ್ಲೇ ಕೊಡ್ತೇನೆ ಎನ್ನುವ ಮೂಲಕ ಜೈದೇವ್ ಮತ್ತು ದಿಯಾಳಿಗೆ ದಂಗು ಬಡಿಸಿದ್ದಾಳೆ.
78
ಇಂಗು ತಿಂದ ಮಂಗನಂತಾದ ಜೈದೇವ-ದಿಯಾ
ಅವರಿಬ್ಬರ ಮುಖ ಇಂಗು ತಿಂದ ಮಂಗನಂತಾಗಿದೆ. ಇವಿಷ್ಟು ನಾಟಕ ಆದರೂ, ಮಲ್ಲಿ ಲೈಫ್ನಲ್ಲಿ ಹೊಸ ಎಂಟ್ರಿ ಆಗುವುದು ಪಕ್ಕಾ ಆಗಿದೆ. ಇದೀಗ ಹೊಸ ಎಂಟ್ರಿ ಯಾರು ಎನ್ನುವ ಕುತೂಹಲ ವೀಕ್ಷಕರದ್ದು. ಮತ್ತೊಂದು ರೋಲ್ಗೆ ಯಾವ ನಟ ಬರುತ್ತಾನೆ ಎಂದು ಕಾಯುತ್ತಿದ್ದಾರೆ ವೀಕ್ಷಕರು.
88
ಇಂಗು ತಿಂದ ಮಂಗನಂತಾದ ಜೈದೇವ-ದಿಯಾ
ಮಲ್ಲಿಗೆ ಇನ್ನೊಂದು ಮದುವೆ ಮಾಡಬೇಕು, ಜೈದೇವ ಮತ್ತು ಶಕುಂತಲಾ ಅದನ್ನು ನೋಡಿ ಹೊಟ್ಟೆ ಉರಿದುಕೊಂಡು ಸಾಯಬೇಕು. ದಿಯಾಳ ಹಿಂದೆ ಹೋದ ಜೈದೇವ ಬೀದಿ ಪಾಲಾಗಬೇಕು ಎನ್ನುವುದು ವೀಕ್ಷಕರ ಮಹದಾಸೆ. ಆದರೆ ಸೀರಿಯಲ್ ಯಾವ ಟರ್ನ್ ತೆಗೆದುಕೊಳ್ಳುತ್ತದೆ ನೋಡಬೇಕಿದೆ.