‘ಲಕ್ಷ್ಮೀ ಬಾರಮ್ಮ’ ಲಚ್ಚಿಗೆ ಸಿಂಪಲ್​ ಸೀಮಂತ ಶಾಸ್ತ್ರ: ವಿಡಿಯೋ ಶೇರ್​ ಮಾಡಿದ ನಟಿ

Published : Jul 27, 2025, 05:20 PM ISTUpdated : Jul 27, 2025, 05:21 PM IST

ಲಕ್ಷ್ಮೀ ಬಾರಮ್ಮ’ ಸೀರಿಯಲ್​ನಲ್ಲಿ ಲಚ್ಚಿ ಪಾತ್ರದ ಮೂಲಕ ಮನೆಮಾತಾಗಿರೋ ನಟಿ ರಶ್ಮಿ ಪ್ರಭಾಕರ್​ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಸಿಂಪಲ್​ ಆಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಅದರ ವಿಡಿಯೋ ಇಲ್ಲಿದೆ... 

PREV
18
ಲಕ್ಷ್ಮೀ ಬಾರಮ್ಮ ಲಚ್ಚಿ ರಶ್ಮಿ ಪ್ರಭಾಕರ್​ಗೆ ಸೀಮಂತ ಶಾಸ್ತ್ರ

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಾಯಕಿ ಲಚ್ಚಿ ಪಾತ್ರದಲ್ಲಿ ಕಾಣಿಸಿಕೊಂಡವರು ನಟಿ ರಶ್ಮಿ ಪ್ರಭಾಕರ್. ʼಜೀವನ ಚೈತ್ರʼ ‘ಶುಭ ವಿವಾಹ’, ‘ಮನಸ್ಸೆಲ್ಲಾ ನೀನೇ’ ಮುಂತಾದ ಸೀರಿಯಲ್​ಗಳಲ್ಲಿ ನಟಿಸಿ ಲಕ್ಷ್ಮೀ ಬಾರಮ್ಮಾ ಸೀರಿಯಲ್​ ಮೂಲಕ ಬಹುದೊಡ್ಡ ಮಟ್ಟಿನ ಯಶಸ್ಸನ್ನು ಗಳಿಸಿರೋ ನಟಿ ರಶ್ಮಿ ಇದೀಗ ಅಮ್ಮನಾಗುವ ಖುಷಿಯಲ್ಲಿದ್ದು, ಸಿಂಪಲ್​ ಆಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ. ಅದರ ವಿಡಿಯೋ ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

28
ಲಕ್ಷ್ಮೀ ಬಾರಮ್ಮ ಲಚ್ಚಿಗೆ ಸೀಮಂತ ಶಾಸ್ತ್ರ

ಒಂದು ಪಾತ್ರವನ್ನು ಕೆಲ ವರ್ಷ ಮಾಡಿದ ನಟಿಯೊಬ್ಬರು ಸೀರಿಯಲ್​ನಿಂದ ಹೊರಕ್ಕೆ ಹೋದಾಗ, ಆ ಪಾತ್ರಕ್ಕೆ ಮತ್ತೊಬ್ಬ ಪಾತ್ರಧಾರಿ ಬರುವುದನ್ನು ವೀಕ್ಷಕರು ಎಂದಿಗೂ ಸಹಿಸುವುದಿಲ್ಲ. ಆಗ ಹೊಸ ಕಲಾವಿದರು ಬಹಳಷ್ಟು ಚಾಲೆಂಜ್​ ಎದುರಿಸಬೇಕಾಗುತ್ತದೆ. ವೀಕ್ಷಕರ ಮನಸ್ಸಿನಲ್ಲಿ ತಮ್ಮ ಸ್ಥಾನವನ್ನು ತುಂಬಲು ಸಾಕಷ್ಟು ಶ್ರಮ ಪಡಬೇಕು. ಅದೇ ರೀತಿ ರಶ್ಮಿ ಪ್ರಭಾಕರ್‌ ಅವರ ಸ್ಥಿತಿಯಾಗಿತ್ತು.

38
ಸೀಮಂತ ಶಾಸ್ತ್ರದಲ್ಲಿ ಲಕ್ಷ್ಮೀ ಬಾರಮ್ಮ ಲಚ್ಚಿ

ಕವಿತಾ ಗೌಡ ಅವರು ಈ ಸೀರಿಯಲ್​ನಲ್ಲಿ ಚಿನ್ನು ಪಾತ್ರದಲ್ಲಿ ನಟಿಸುತ್ತಿದ್ದರು. ಅವರು ಧಾರಾವಾಹಿಯಿಂದ ಹೊರಗಡೆ ಬಂದಾಗ ಆ ಜಾಗಕ್ಕೆ ರಶ್ಮಿ ಪ್ರಭಾಕರ್‌ ಎಂಟ್ರಿ ಆಯ್ತು. ಆರಂಭದಲ್ಲಿ ಸಾಮಾನ್ಯ ಎಂಬಂತೆ ವೀಕ್ಷಕರಿಗೆ ಹೊಸ ಕಲಾವಿದೆಯನ್ನು ಅಕ್ಸೆಪ್ಟ್​ ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ ರಶ್ಮಿ ಅ ಅವರು ಅತ್ಯಂತ ಅಲ್ಪ ಕಾಲದಲ್ಲಿಯೇ ವೀಕ್ಷಕರ ಮನಸ್ಸನ್ನು ಗೆದ್ದರು. ಈ ಧಾರಾವಾಹಿ ಮುಗಿಯುವವರೆಗೂ ರಶ್ಮಿ ನಟಿಸಿದ್ದರು. ‌ಈ ಪಾತ್ರಕ್ಕೆ ಜೀವ ತುಂಬಿದರು.

48
ನಿಖಿಲ್ ಭಾರ್ಗವ್ ಜೊತೆ ಮದುವೆ

ಬಳಿಕ ರಶ್ಮಿ ಪ್ರಭಾಕರ್ ಅವರು ನಿಖಿಲ್ ಭಾರ್ಗವ್ ಅವರ ಜೊತೆ ಮದುವೆಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಏಪ್ರಿಲ್ 25, 2022 ರಂದು ರಶ್ಮಿ ಪ್ರಭಾಕರ್ - ನಿಖಿಲ್ ಭಾರ್ಗವ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮೂರು ವರ್ಷಗಳ ಬಳಿಕ ದಂಪತಿ ಪುಟಾಣಿ ಮಗುವಿನ ಆಗಮನಕ್ಕಾಗಿ ಅವರು ಕಾಯುತ್ತಿದ್ದಾರೆ. ನಿನ್ನೆ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಅದರ ವಿಡಿಯೋ ಶೇರ್​ ಮಾಡಿದ್ದಾರೆ.

58
ʼಶುಭವಿವಾಹʼ ಧಾರಾವಾಹಿ ಮೂಲಕ ನಟನೆ ಆರಂಭ

ಇನ್ನು ನಟಿಯ ಕುರಿತು ಹೇಳುವುದಾದರೆ, ಬೆಂಗಳೂರಿನ ರಶ್ಮಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ʼಶುಭವಿವಾಹʼ ಧಾರಾವಾಹಿ ಮೂಲಕ ನಟನೆ ಆರಂಭಿಸಿದರು. ಅಲ್ಲಿ ಅವರು ಹೀರೋ ತಂಗಿ ಪಾತ್ರ ಮಾಡಿದ್ದರು. ಆ ಧಾರಾವಾಹಿ ದೊಡ್ಡ ಹಿಟ್‌ ಆಗಿತ್ತು. ಆಬಳಿಕ ಅವರು ಮಹಾಭಾರತ ಎನ್ನುವ ಪೌರಾಣಿಕ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿ ಅವರಿಗೆ ದುರ್ಯೋಧನನ ತಂಗಿ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತು.

68
ವಿವಿಧ ಭಾಷೆಗಳಲ್ಲಿ ರಶ್ಮಿ ಪ್ರಭಾಕರ್‌ ನಟನೆ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ʼಜೀವನ ಚೈತ್ರʼ ಧಾರಾವಾಹಿಯಲ್ಲಿ ರಶ್ಮಿ ಪ್ರಭಾಕರ್‌ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಇಷ್ಟೇ ಅಲ್ಲದೇ, ಬೇರೆ ಬೇರೆ ಭಾಷೆಗಳಲ್ಲಿಯೂ ಇವರು ನಟಿಸಿದ್ದಾರೆ.

78
ವಿವಿಧ ಭಾಷೆಗಳಲ್ಲಿ ರಶ್ಮಿ ಪ್ರಭಾಕರ್‌ ನಟನೆ

ರಶ್ಮಿ ಅವರು ಕೊನೆಯದಾಗಿ ತಮಿಳು ಭಾಷೆಯ ʼಕನ್ನೈ ಕಲೈಮಾಲೆʼ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು. ಇನ್ನು ʼಬಿ5ʼ, ʼಮಹಾಕಾವ್ಯʼ ಎನ್ನುವ ಚಿತ್ರಗಳಲ್ಲಿಯೂ ಇವರು ನಟಿಸಿದ್ದರು. ಅಷ್ಟೇ ಅಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ʼಸೂಪರ್ ಕ್ವೀನ್ʼ ರಿಯಾಲಿಟಿ ಶೋನಲ್ಲಿ ರಶ್ಮಿ ಭಾಗವಹಿಸಿದ್ದಲ್ಲದೆ, ಈ ಪಟ್ಟವನ್ನು ಕೂಡ ಪಡೆದುಕೊಂಡಿದ್ದರು.

88
ರಶ್ಮಿ ಪ್ರಭಾಕರ್‌ ಭರತನಾಟ್ಯ ಕಲಾವಿದೆ ಕೂಡ

ರಶ್ಮಿ ಪ್ರಭಾಕರ್‌ ಅವರು ಡ್ಯಾನ್ಸರ್‌ ಕೂಡ ಹೌದು. ಭರತನಾಟ್ಯ ಕಲಾವಿದೆಯಾಗಿರುವ ಅವರು ಮಕ್ಕಳಿಗಾಗಿ ಭರತನಾಟ್ಯ ಕ್ಲಾಸ್‌ ನಡೆಸುತ್ತಾರೆ. ಸದ್ಯ ಬಣ್ಣದ ಲೋಕದಿಂದ ತುಸು ದೂರನೇ ಸರಿದಿರುವ ನಟಿ, ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು, ಮಗುವಿನ ಆರೈಕೆಯಲ್ಲಿ ತೊಡಗಲಿದ್ದಾರೆ. ಶೀಘ್ರದಲ್ಲಿ ಅವರು ಪರದೆಯ ಮೇಲೆ ನೋಡುವ ಹಂಬಲ ವೀಕ್ಷಕರದ್ದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories