2013ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾವೊಂದು ಬಾಲಿವುಡ್‌ನ 100 ಕೋಟಿ ಬಜೆಟ್ ಚಿತ್ರಕ್ಕೆ ಭಾರಿ ಪೈಪೋಟಿ ನೀಡಿತ್ತು. ಇದು ನಿರ್ಮಾಪಕರಿಗೆ 4 ಪಟ್ಟು ಲಾಭ ತಂದುಕೊಟ್ಟಿತ್ತು. ಆ ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಯಾವುದು ಗೊತ್ತಾ?
ಬಾಲಿವುಡ್ ಚಿತ್ರರಂಗ ತಮ್ಮ ಚಿತ್ರ ಬಿಡುಗಡೆ ಮಾಡುವ ಮುನ್ನ ಕನ್ನಡದಲ್ಲಿ ಯಾವ ಸಿನಿಮಾ ಬರುತ್ತಿದೆ ಎಂಬುದನ್ನು ಚೆಕ್ ಮಾಡಿಕೊಳ್ಳುವ ಸಮಯ ಬಂದಿದೆ. ಈ ಹಿಂದೆ ಬಾಲಿವುಡ್ ಲೋಕ ಕನ್ನಡ ಸಿನಿಮಾಗಳಿಂದ ಥಿಯೇಟರ್ ಕಿತ್ತುಕೊಳ್ಳುತ್ತಿತ್ತು. 2013ರಲ್ಲಿ ಬಿಡುಗಡೆಯಾದ ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ, ಬಾಲಿವುಡ್‌ನ ಹೃತಿಕ್ ರೋಷನ್ ಅಭಿನಯದ ಕ್ರಿಶ್ ತೀವ್ರ ಸ್ಪರ್ಧೆಯನ್ನು ನೀಡಿತ್ತು.
25
ಎರಡು ಸಿನಿಮಾಗಳು ಏಕಕಾಲದಲ್ಲಿ ಬಿಡುಗಡೆ
3 ಕೋಟೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಕನ್ನಡ ಸಿನಿಮಾ 1ನೇ ನವೆಂಬರ್ 2013ರಂದು ಬಿಡುಗಡೆಯಾಗಿತ್ತು. ಅದೇ ಹೃತಿಕ್ ರೋಷನ್ ಅಭಿನಯದ 'ಕ್ರಿಶ್-3' ಸಿನಿಮಾ ಬರೋಬ್ಬರಿ 100 ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾಗಿ ನವೆಂಬರ್ 1ರಂದೇ ರಿಲೀಸ್ ಆಗಿತ್ತು. ಈ ಎರಡು ಸಿನಿಮಾಗಳು ಏಕಕಾಲದಲ್ಲಿ ಬಿಡುಗಡೆಯಾಗಿತ್ತು. ವರದಿಗಳ ಪ್ರಕಾರ, ಬೆಂಗಳೂರಿನ ಚಿತ್ರಮಂದಿರಗಳ ಕಲೆಕ್ಷನ್‌ನಲ್ಲಿ ಕ್ರಿಶ್ 3 ಸಿನಿಮಾವನ್ನು ಹಿಂದಿಕ್ಕಿತ್ತು. ಇದು ಬಾಲಿವುಡ್‌ಗೆ ದೊಡ್ಡ ಆಘಾತವನ್ನೇ ನೀಡಿತ್ತು.
35
ಯಾವುದು ಈ ಸಿನಿಮಾ?
ಕ್ರಿಶ್ ಸಿನಿಮಾ ಜೊತೆಯಲ್ಲಿ ಥಿಯೇಟರ್ ಅಂಗಳಕ್ಕೆ ಯಶ್ ಮತ್ತು ಮೇಘನಾ ರಾಜ್ ಅಭಿನಯದ 'ರಾಜಾ ಹುಲಿ' ಸಿನಿಮಾ ಬಿಡುಗಡೆಯಾಗಿತ್ತು. 3 ಕೋಟಿ ಬಜೆಟ್‌ನ ರಾಜಾ ಹುಲಿ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಬಂಡವಾಳ ಹಾಕಿದ ಕೆ.ಮಂಜು ಅವರಿಗೆ ರಾಜಾ ಹುಲಿ ಸಿನಿಮಾ 4 ಪಟ್ಟು ರಿಟರ್ನ್ ನೀಡಿತ್ತು. ನಟಿ ಮೇಘನಾ ರಾಜ್ ಅವರಿಗೆ ಇದು ಮೊದಲ ಸಿನಿಮಾ ಆಗಿತ್ತು.
ಈ ಸಮಯದಲ್ಲಿ ಯಶ್ ನಟನೆಯ ಚಿತ್ರಗಳು ಹಿಟ್ ಸಾಲಿಗೆ ಸೇರ್ಪಡೆಯಾಗುವ ಕಾಲ ಆರಂಭವಾಗಿತ್ತು. ಇದಾದ ಬಳಿಕ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಜೊತೆಯಲ್ಲಿ ಶಾರೂಖ್ ಖಾನ್ ಅಭಿನಯದ 'ಝೀರೋ' ರಿಲೀಸ್ ಆಗಿತ್ತು. ಕೆಜಿಎಫ್ ಅಬ್ಬರಕ್ಕೆ ಝೀರೋ ಸಿನಿಮಾ ಧೂಳಿಪಟ ಆಗಿತ್ತು. ಶಾರೂಖ್ ಖಾನ್ ಜೊತೆ ಸ್ಟಾರ್ ಕಲಾವಿದರು ನಟಿಸಿದ್ರೂ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಮುಗ್ಗರಿಸಿತ್ತು.
55
ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳು
2013ರಲ್ಲಿ ಗೂಗ್ಲಿ, ರಾಜಾ ಹುಲಿ ನಂತರ 2014ರಲ್ಲಿ ಗಜಕೇಸರಿ, Mr & Mrs ರಾಮಾಚಾರಿ, ಮಾಸ್ಟರ್ ಪೀಸ್, ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾಗಳು ಯಶ್ ಅವರಿಗೆ ದೊಡ್ಡ ಸಕ್ಸಸ್ ನೀಡಿದ್ದವು. ಇದಾದ ಬಳಿಕ ಬಂದ ಕೆಜಿಎಫ್ ಸಿನಿಮಾ ಯಶ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟವನ್ನು ನೀಡಿತ್ತು. ಸದ್ಯ ಬಿಡುಗಡೆಯಾದ ರಾಮಾಯಾಣ ಸಿನಿಮಾದಲ್ಲಿ ಯಶ್ ಅವರು ರಾವಣನಾಗಿ ಅಬ್ಬರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.