ಮರವು ನೈಸರ್ಗಿಕ ವಸ್ತು. ಹೀಗಾಗಿ ಮರದಿಂದ ಮಡಿದ ಬಾಗಿಲುಗಳು ಸಾಮಾನ್ಯವಾಗಿ ಗಾಳಿಯಲ್ಲಿನ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಮಳೆಗಾಲದಲ್ಲಿ , ವಾತಾವರಣದಲ್ಲಿನ ಆರ್ದ್ರತೆಯು ಹೆಚ್ಚಾಗುವುದರಿಂದ ಮರದ ಹಲಗೆಯ ಬಾಗಿಲು ಕೂಡ ಹಿಗ್ಗಲಾರಂಭಿಸುತ್ತದೆ. ಇದರ ಪರಿಣಾಮ ಬಾಗಿಲಿನ ಮೇಲ್ಭಾಗ ಅಥವಾ ಕೆಳಭಾಗದ ಹಂಚುಗಳು ಹೆಚ್ಚುಕಮ್ಮಿಯಾಗಿ ಮುಚ್ಚುವುದಿಲ್ಲ. ಮುಚ್ಚಿದರೆ ತೆರೆಯುವುದು ಕಷ್ಟವಾಗುತ್ತದೆ.
ಇದನ್ನೂ ಓದಿ: Double-leaf Door: ನಿಮಗಿದು ಗೊತ್ತೇ? ತಾತನ ಮನೆಗಳಿಗೇಕೆ ಎರಡು ಹಲಗೆಯ ಬಾಗಿಲು ಇರುತ್ತಿದ್ದವು?
ಮಳೆಗಾಲದಲ್ಲಿ ಹೆಚ್ಚು ಹೊರಭಾಗದಲ್ಲಿ ತೆರೆದುಕೊಂಡ ಬಾಗಿಲು
ಮನೆಯ ಒಳಗಿನ ಬಾಗಿಲುಗಳಿಗಿಂತ ಮನೆಯ ಹೆಬ್ಬಾಗಿಲು ಹೆಚ್ಚಾಗಿ ಹೊರಗಿನ ವಾತಾವರಣಕ್ಕೆ ತೆರೆದುಕೊಂಡಿರುತ್ತದೆ. ಮಳೆಗಾಲದ ರಭಸ ಮಳೆಗೆ ಶೀತ ಗಾಳಿ, ಮಳೆ ನೀರು ಬಾಗಿಲ ಮೇಲೆ ಸುರಿಯುತ್ತದೆ. ಹೀಗಾಗಿ ಹೆಚ್ಚು ಸಮಸ್ಯೆ ಇದೇ ಬಾಗಿಲಿಗೆ.
ಇನ್ನೊಂದು ನಿಮ್ಮ ಮನೆಯ ಬಾಗಿಲು ಹಳೆಯದಾಗಿದ್ದರೆ, ಅದಕ್ಕೆ ಕಾಲ ಕಾಲಕ್ಕೆ ವಾರ್ನಿಷ್(ಬಣ್ಣ ಬಳಿಯುವುದು) ಅಥವಾ ಬಾಗಿಲನ್ನು ಮಳೆಗಾಲದಲ್ಲಿ ಸೀಲ್ ಮಾಡಿಲ್ಲದಿದ್ದರೆ, ಅದು ತೇವಾಂಶವನ್ನು ಹೆಚ್ಚು ವೇಗವಾಗಿ ಹೀರಿಕೊಳ್ಳುತ್ತದೆ. ವಿಶೇಷವಾಗಿ ಬಾಗಿಲಿನ ಮೇಲೆ ಮತ್ತು ಕೆಳಭಾಗವನ್ನು ಮುಚ್ಚದೆ ಬಿಟ್ಟರೆ ಅದು ಮಳೆ ನೀರು, ತೇವಾಂಶವು ಅಲ್ಲಿ ಸುಲಭವಾಗಿ ಹೀರಿಕೊಂಡು ಉಬ್ಬಿಕೊಳ್ಳುತ್ತದೆ. ಇದಲ್ಲದೆ ಸಾಕಷ್ಟು ಗಾಳಿ ಇಲ್ಲದೆ ತೇವಾಂಶವಿರುವ ಮನೆಯ ಬಾತ್ ರೂಂ ಬಾಗಿಲುಗಳು ಸಹ ಉಬ್ಬಿಕೊಳ್ಳುತ್ತವೆ