Home Earthing: ಮನೆಯಲ್ಲಿ ಇದೊಂದು ವ್ಯವಸ್ಥೆ ಸರಿ ಇಲ್ಲ ಅಂದ್ರೆ ಪ್ರಾಣ ಹೋಗ್ಬಹುದು ! ಈಗ್ಲೇ ಚೆಕ್ ಮಾಡಿ

Published : Jul 13, 2026, 12:40 PM IST

ಮನೆಯ ಕರೆಂಟ್ ಕನೆಕ್ಷನ್ ವಿಷ್ಯ ಬಂದಾಗ ವೈರಿಂಗ್, ಸ್ವಿಚ್, ಫ್ಯಾನ್, ಲೈಟ್ ಬಗ್ಗೆ ನಾವು ಗಮನ ನೀಡ್ತೇವೆ. ಬಹುತೇಕರು ಈ ಎಲ್ಲದರ ಮಧ್ಯೆ ಅರ್ಥಿಂಗ್ ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಎಲ್ಲಕ್ಕಿಂತ ಮುಖ್ಯವಾದದ್ದು ಅರ್ಥಿಂಗ್. ಅದನ್ನು ಯಾಕೆ ಮನೆಗೆ ಹಾಕ್ಬೇಕು, ಖರ್ಚು ಎಷ್ಟು ಎಂಬ ಮಾಹಿತಿ ಇಲ್ಲಿದೆ.

PREV
16
ಅರ್ಥಿಂಗ್ ಎಂದರೇನು?

ಸರಳವಾಗಿ ಹೇಳುವುದಾದರೆ, ಅರ್ಥಿಂಗ್ ಎಂದರೆ ಹೆಚ್ಚುವರಿ ಅಥವಾ ಸೋರಿಕೆಯಾಗುವ ವಿದ್ಯುತ್ನ್ನು ಸುರಕ್ಷಿತವಾಗಿ ನೆಲಕ್ಕೆ ಕಳುಹಿಸುವ ವ್ಯವಸ್ಥೆ. ಲೋಹದ ರಾಡ್ ಅಥವಾ ಪ್ಲೇಟ್ ಮೂಲಕ ನೆಲಕ್ಕೆ ಸಂಪರ್ಕಿಸುತ್ತದೆ. ಇದರಿಂದ ವಿದ್ಯುತ್ ಶಾಕ್ ಆಗುವ ಅಪಾಯ ಕಡಿಮೆಯಾಗುತ್ತದೆ ಮತ್ತು ಮನೆ ಹಾಗೂ ವಿದ್ಯುತ್ ಉಪಕರಣಗಳು ಸುರಕ್ಷಿತವಾಗಿರುತ್ತವೆ.

26
ಮನೆಗೆ ಅರ್ಥಿಂಗ್ ಏಕೆ ಅಗತ್ಯ?

ಅರ್ಥಿಂಗ್ನ ದೊಡ್ಡ ಪ್ರಯೋಜನವೆಂದರೆ ಸುರಕ್ಷತೆ. ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಗೀಸರ್, ಏರ್ ಕಂಡಿಷನರ್ ಅಥವಾ ವಾಟರ್ ಮೋಟಾರ್ ನಿಂದ ವಿದ್ಯುತ್ ಸೋರಿಕೆಯಾದರೆ, ಅದನ್ನು ಗ್ರೌಂಡಿಂಗ್ ಇಲ್ಲದೆ ಸ್ಪರ್ಶಿಸಿದ್ರೆ ಶಾಕ್ ಹೊಡೆಯುತ್ತದೆ. ಅದೇ ಅರ್ಥಿಂಗ್ ಸರಿಯಾಗಿದ್ದರೆ ಸೋರಿಕೆಯಾದ ಕರೆಂಟ್ ನೆಲಕ್ಕೆ ಬಿಡುಗಡೆಯಾಗುತ್ತದೆ. ಅನೇಕ ಸಂದರ್ಭಗಳಲ್ಲಿ, MCB ಅಥವಾ ELCB/RCCB ನಂತಹ ಸುರಕ್ಷತಾ ಸಾಧನಗಳು ತಕ್ಷಣವೇ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತವೆ. ಇದು ಅಪಘಾತದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

36
ದುಬಾರಿ ಎಲೆಕ್ಟ್ರಾನಿಕ್ ಸಾಧನ ಸುರಕ್ಷಿತ

ಬಹುತೇಕ ಪ್ರತಿಯೊಬ್ಬರ ಮನೆಯಲ್ಲಿ ಟಿವಿ, ರೆಫ್ರಿಜರೇಟರ್, ಎಸಿ, ಕಂಪ್ಯೂಟರ್ಗಳು, ಇನ್ವರ್ಟರ್ಗಳು ಮತ್ತು ಸ್ಮಾರ್ಟ್ ಹೋಮ್ ಇದ್ದೇ ಇರುತ್ತೆ. ವಿದ್ಯುತ್ ವೋಲ್ಟೇಜ್ನಲ್ಲಿ ಹಠಾತ್ ಏರಿಕೆ ಅಥವಾ ಮಿಂಚಿನ ಹೊಡೆತವಾದ್ರೆ ಈ ಸಾಧನಗಳು ಹಾನಿಗೊಳಗಾಗಬಹುದು. ಮನೆಯನ್ನು ಸರಿಯಾಗಿ ಅರ್ಥ್ ಮಾಡಿದ್ದರೆ, ಹೆಚ್ಚುವರಿ ಕರೆಂಟ್ ನೆಲಕ್ಕೆ ಹೋಗುತ್ತದೆ. ಇದು ಎಲೆಕ್ಟ್ರಾನಿಕ್ ಸಾಧನಗಳ ರಕ್ಷಿಸುತ್ತದೆ.

46
ಪ್ರತಿ ಮನೆಗೆ ಅರ್ಥಿಂಗ್

ಹೊಸ ಮನೆಯಾಗಿರಲಿ ಅಥವಾ ಹಳೆಯದಾಗಿರಲಿ, ಫ್ಲಾಟ್ ಆಗಿರಲಿ ಅಥವಾ ಮನೆಯಾಗಿರಲಿ, ಸರಿಯಾದ ಅರ್ಥಿಂಗ್ ಅತ್ಯಂತ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಎಸಿಗಳು, ಗೀಸರ್ಗಳು, ಮೋಟಾರ್ಗಳು, ಇನ್ವರ್ಟರ್ಗಳು ಮತ್ತು ಇತರ ಭಾರೀ ವಿದ್ಯುತ್ ಉಪಕರಣಗಳನ್ನು ಬಳಸುವ ಮನೆಗಳಲ್ಲಿ ಅರ್ಥಿಂಗ್ ಅತ್ಯಗತ್ಯ. ಹೊಸ ಮನೆ ನಿರ್ಮಿಸುತ್ತಿದ್ದರೆ, ಆರಂಭದಲ್ಲಿಯೇ ಉತ್ತಮ ಗುಣಮಟ್ಟದ ಅರ್ಥಿಂಗ್ ವ್ಯವಸ್ಥೆ ಮಾಡ್ಕೊಳ್ಳಿ.

56
ಅರ್ಥಿಂಗ್ ವೆಚ್ಚ ಎಷ್ಟು?

ಅರ್ಥಿಂಗ್ ವೆಚ್ಚವು ಅರ್ಥಿಂಗ್ ಪ್ರಕಾರ, ಮಣ್ಣಿನ ಸ್ಥಿತಿ ಮತ್ತು ಬಳಸಿದ ವಸ್ತುಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಒಂದು ಸಾಮಾನ್ಯ ಮನೆಯಲ್ಲಿ GI ಪೈಪ್ ಅರ್ಥಿಂಗ್ ವೆಚ್ಚ3,000 ಸಾವಿರದಿಂದ 8,000 ರೂಪಾಯಿವರೆಗೆ ಬರುತ್ತದೆ. ತಾಮ್ರ ಅರ್ಥಿಂಗ್ ಮಾಡಿದರೆ, ಅದಕ್ಕೆ ಸುಮಾರು 8,000 ರಿಂದ 20,000 ಅಥವಾ ಅದಕ್ಕಿಂತ ಹೆಚ್ಚು ವೆಚ್ಚವಾಗಬಹುದು. ದೊಡ್ಡ ಮನೆಗಳು, ಕಾರ್ಖಾನೆಗಳು ಅಥವಾ ವಾಣಿಜ್ಯ ಕಟ್ಟಡಗಳಲ್ಲಿ ಈ ವೆಚ್ಚವು ಮತ್ತಷ್ಟು ಹೆಚ್ಚಾಗಬಹುದು.

66
ಅರ್ಥಿಂಗ್ ಸರಿಯಾಗಿದೆಯೇ ಎಂದು ತಿಳಿಯುವುದು ಹೇಗೆ?

ಮನೆಯಲ್ಲಿ MCB ಆಗಾಗ್ಗೆ ಟ್ರಿಪ್ ಆಗುತ್ತಿದ್ದರೆ, ವಿದ್ಯುತ್ ಉಪಕರಣಗಳನ್ನು ಮುಟ್ಟುವಾಗ ಸ್ವಲ್ಪ ವಿದ್ಯುತ್ ಶಾಕ್ ಅನುಭವವಾದ್ರೆ ಅಥವಾ ಎಲೆಕ್ಟ್ರಾನಿಕ್ ಸಾಧನಗಳು ಪದೇ ಪದೇ ಹಾಳಾದ್ರೆ ಇದು ಕಳಪೆ ಅರ್ಥಿಂಗ್ನ ಸಂಕೇತವಾಗಿರಬಹುದು. ಈ ಚಿಹ್ನೆಗಳನ್ನು ಮಾತ್ರ ಆಧರಿಸಿ ನಿರ್ಧಾರ ತೆಗೆದುಕೊಳ್ಳಬಾರದು. ಅರ್ಹ ಎಲೆಕ್ಟ್ರಿಷಿಯನ್, ಅರ್ಥಿಂಗ್ ಪರೀಕ್ಷಕವನ್ನು ಬಳಸಿಕೊಂಡು ಪರೀಕ್ಷೆ ಮಾಡಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories