ಮುಖೇಶ್ ಅಂಬಾನಿ ಫ್ಯಾಮಿಲಿಯ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಎಲ್ಲೇ ಹೋದ್ರೂ ಸುದ್ದಿಯಲ್ಲಿರ್ತಾರೆ. ಅವರ ಸ್ವಭಾವ, ಫ್ಯಾಷನ್ ಸೆನ್ಸ್ ಎಲ್ಲರ ಗಮನ ಸೆಳೆಯುತ್ತೆ. ಸ್ನೇಹಿತೆ ಸೃಷ್ಟಿ ಪಾಂಚಾಲ್ ಮದುವೆಯಲ್ಲಿ ಪಾಲ್ಗೊಂಡಿದ್ದ ರಾಧಿಕಾ ಮರ್ಚೆಂಟ್, ತಮ್ಮ ಫ್ಯಾಷನ್, ಎಮೋಷನ್ ನಿಂದ ಗಮನ ಸೆಳೆದಿದ್ದಾರೆ.
ರಾಧಿಕಾ ಮತ್ತು ಅನಂತ್ ತಮ್ಮ ಸ್ನೇಹಿತರ ಮದುವೆಯಲ್ಲಿ ಕೇವಲ ಅತಿಥಿಗಳಾಗಿರಲಿಲ್ಲ. ಬದಲಿಗೆ ಪ್ರತಿಯೊಂದು ಆಚರಣೆಯಲ್ಲೂ ಪಾಲ್ಗೊಂಡಿದ್ದರು. ಮದುವೆಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸ್ನೇಹಿತೆಯನ್ನು ತಬ್ಬಿಕೊಂಡು ರಾಧಿಕಾ ಭಾವುಕರಾದ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಮದುವೆ ಸಮಾರಂಭದಲ್ಲಿ ರಾಧಿಕಾ ಖುಷಿಯಿಂದ ಡಾನ್ಸ್ ಕೂಡ ಮಾಡಿದ್ದಾರೆ. ವಧುವಿನ ಹೂವಿನ ಚಾದರ್ ಹಿಡಿದಿರೋದನ್ನು ನೀವು ಕಾಣ್ಬಹುದು. ರಾಧಿಕಾ ಮಾತ್ರವಲ್ಲ ಅನಂತ್ ಅಂಬಾನಿ, ನೀತಾ ಅಂಬಾನಿ ಕೂಡ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
25
ಗಮನ ಸೆಳೆದ ಲೆಹಂಗಾ
ಮದುವೆಯಲ್ಲಿ ರಾಧಿಕಾ ಎಮೋಷನ್ ಮಾತ್ರವಲ್ಲ ಅವರು ಧರಿಸಿದ್ದ ಲೆಹೆಂಗಾ ಕೂಡ ಸುದ್ದಿಯಲ್ಲಿದೆ. ಮದುವೆ ಸಮಾರಂಭ ಅದ್ರಲ್ಲೂ ಸ್ನೇಹಿತರ ಮದುವೆ ಫಂಕ್ಷನ್ ಅಂದ್ಮೇಲೆ ಮಿಡಲ್ ಕ್ಲಾಸ್ ಹುಡುಗಿಯರೂ ದುಬಾರಿ ಬೆಲೆ ಕೊಟ್ಟ ಹೊಸ ಡ್ರೆಸ್ ಖರೀದಿ ಮಾಡ್ತಾರೆ. ಆದ್ರೆ ಈ ವಿಷ್ಯದಲ್ಲಿ ರಾಧಿಕಾ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮಲ್ಲಿದ್ದ ಹಳೆ ಲೆಹಂಗಾ ಧರಿಸಿ ಗಮನ ಸೆಳೆದಿದ್ದಾರೆ. ತಮ್ಮ ಮದುವೆ ಸಂಭ್ರಮದ ವೇಳೆ ಧರಿಸಿದ್ದ ಸುಮಾರು ಎರಡು ವರ್ಷದ ಹಳೆಯ ಲೆಹೆಂಗಾವನ್ನೇ ಅವರು ಈಗ ಧರಿಸಿದ್ದರು.
35
ಲೆಹಂಗಾ ಡಿಸೈನ್
ಈ ಸುಂದರ ಲೆಹೆಂಗಾವನ್ನು ಖ್ಯಾತ ಡಿಸೈನರ್ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದರು. ಕೆಂಪು ಮತ್ತು ಗುಲಾಬಿ ಬಣ್ಣಗಳ ಈ ಲೆಹೆಂಗಾದ ಮೇಲೆ ಆಕರ್ಷಕ ಹೂವಿನ ಕಸೂತಿ ಮಾಡಲಾಗಿತ್ತು. ರಾಧಿಕಾ ದುಪಟ್ಟಾವನ್ನು ಒಂದು ಭುಜದ ಮೇಲೆ ಸರಳವಾಗಿ ಹಾಕಿಕೊಂಡು ಡ್ರೆಸ್ ಗೆ ಮತ್ತಷ್ಟು ಮೆರಗು ನೀಡಿದ್ರು. ಅತಿಯಾದ ಅಲಂಕಾರಕ್ಕಿಂತ ಸರಳವಾದ ಡ್ರೇಪಿಂಗ್ ಅವರ ಲುಕ್ ಅನ್ನು ಇನ್ನಷ್ಟು ಎಲಿಗಂಟ್ ಆಗಿ ಮಾಡಿತ್ತು.
ಆಭರಣಗಳ ವಿಷಯದಲ್ಲೂ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರು. ಪ್ಲಾವರ್ ಡಿಸೈನ್ ಡೈಮಂಡ್ ಕಿವಿಯೋಲೆಗಳು, ಲೇಯರ್ಡ್ ನೆಕ್ಪೀಸ್, ಉಂಗುರಗಳು ಹಾಗೂ ಕ್ಲಾಸಿಕ್ ಸ್ಲೀಕ್ ಬನ್ ಹೇರ್ಸ್ಟೈಲ್ ಅವರ ನೋಟವನ್ನು ಮತ್ತಷ್ಟು ಮೆರಗುಗೊಳಿಸಿತು. ಮಿನಿಮಲ್ ಮೇಕಪ್ ಅವರ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಿತು.
55
ರಾಧಿಕಾ ಸಂದೇಶ
ಭಾರತದ ಅತ್ಯಂತ ಶ್ರೀಮಂತರ ಮನೆ ಸೊಸೆ ರಾಧಿಕಾ, ಸುಂದರವಾಗಿ ಕಾಣಲು ಹೊಸ ಡ್ರೆಸ್ಸೇ ಬೇಕಿಲ್ಲ ಎಂಬುದನ್ನು ತಮ್ಮ ಲುಕ್ ಮೂಲಕ ತೋರಿಸಿದ್ದಾರೆ. ದುಬಾರಿ ಅಥವಾ ಹೊಸ ಉಡುಪಿಗಿಂತ ಅದನ್ನು ಆತ್ಮವಿಶ್ವಾಸದಿಂದ ಧರಿಸುವ ಶೈಲಿಯೇ ನಿಜವಾದ ಫ್ಯಾಷನ್. ಹಳೆಯ ಲೆಹೆಂಗಾವನ್ನೇ ಹೊಸದಾಗಿ ಧರಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.