Published : Jul 26, 2026, 10:45 AM ISTUpdated : Jul 26, 2026, 10:52 AM IST
How to get smell out of vehicle seats? ದೀರ್ಘ ಪ್ರಯಾಣದ ವೇಳೆ ಸಾರಿಗೆ ಬಸ್‌ಗಳ ಸೀಟುಗಳೇಕೆ ಕೆಟ್ಟ ವಾಸನೆ ಬರಲಾರಂಭಿಸುತ್ತದೆ? ಕಾರಣಗಳೇನು? ಇದರಿಂದ ಪ್ರಯಾಣಿಕರಿಗಾಗುವ ಅಲರ್ಜಿಗಳೇನು? ದುರ್ನಾತ ಹೇಗೆ ತಡೆಗಟ್ಟಬಹುದು?
ದೀರ್ಘ ಪ್ರಯಾಣ ಮಾಡುವಾಗ ಸಾರಿಗೆ ಬಸ್ಸಿನ ಸೀಟುಗಳೇಕೆ ಕೆಟ್ಟ ವಾಸನೆ?
ಪ್ರತಿದಿನ ವಿವಿಧ ಕೆಲಸ ಕಾರ್ಯಗಳಿಗಾಗಿ ಬೇರೊಂದು ಸ್ಥಳಕ್ಕೆ ಹೋಗಲು ಅಥವಾ ಪ್ರವಾಸಕ್ಕೆ ಹೋಗಲು ಲಕ್ಷಾಂತರ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲೇ ಪ್ರಯಾಣಿಸುತ್ತಾರೆ. ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಮಿಕರು ಮಹಾನಗರ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬರ್ತಾರೆ. ಬೆಂಗಳೂರಿಗೆ ಬಂದ ಬಳಿಕ ಮೆಜೆಸ್ಟಿಕ್‌ನಿಂದ ಕೆಲಸ ಮಾಡುವ ಏರಿಯಾಗಳಿಗೆ ತೆರಳಲು ಬಿಎಂಟಿಎಸ್ ಬಸ್ ಹತ್ತುತ್ತಾರೆ. ದಿನನಿತ್ಯ ಲಕ್ಷಾಂತರ ಸಂಚರಿಸುವ ಬಸ್ಸಿನ ಸೀಟುಗಳು ಯಾಕಿಷ್ಟು ದುರ್ನಾತ? ಇದಕ್ಕೆ ಕಾರಣಗಳೇನು?
24
How to get smell out of vehicle seats?
ಸಾರಿಗೆ ಬಸ್‌ಗಳಲ್ಲಿ ನೀವು ದೀರ್ಘ ಪ್ರಯಾಣ ಮಾಡಿದ್ದರೆ ನಿಮಗೆ ಇದು ಅನುಭವಕ್ಕೆ ಬಂದಿರುತ್ತದೆ. ನೀವು ಸ್ವಚ್ಛವಾಗಿಯೇ ಇರುತ್ತೀರಿ, ಶುಭ್ರ ಬಟ್ಟೆಯೇ ಧರಿಸಿರುತ್ತೀರಿ. ಆದರೆ ಕೆಎಸ್‌ಆರ್‌ಟಿಸಿ ಬಸ್ಸಿನ ಸೀಟಿನಲ್ಲಿ ದೀರ್ಘಕಾಲ ಕುಳಿತರೆ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಇದೊಂದು ರೀತಿ ಮುಜುಗರದ ಸನ್ನಿವೇಶ ಪ್ರತಿಯೊಬ್ಬರು ಎದುರಿಸಿರುತ್ತಾರೆ. ಈ ಕಾರಣಕ್ಕೆ ಕೆಲವರು ಸಾರಿಗೆ ಬಸ್ ಹತ್ತಲು ಹಿಂದೇಟು ಹಾಕುವುದುಂಟು.
ವಿಶೇಷವಾಗಿ ಕೆಎಸ್‌ಆರ್‌ಟಿಸಿ ಬಸ್, ಫ್ಯಾಬ್ರಿಕ್ ಸೀಟುಗಳಿರುವ ಬಸ್‌ಗಳಲ್ಲಿ ಈ ಸಮಸ್ಯೆ ವಿಪರೀತ. ದೀರ್ಘಕಾಲ ಕುಳಿತು ಮುಂದೆಲ್ಲ ವಿರಾಮಕ್ಕೆ ಇಳಿದಾಗ ದುರ್ನಾತ, ಅದು ಇತರರಿಗೆ ನಿಮ್ಮಿಂದಲೇ ಎಂಬುದು ಮುಜುಗರಕ್ಕೆ ಕಾರಣವಾಗುತ್ತದೆ. ದುರ್ನಾತ ಬರಲು ಕಾರಣವೆಂದರೆ ದೀರ್ಘ ಕಾಲ ಸೀಟಿನಲ್ಲಿ ಕುಳಿತುಕೊಳ್ಳುವುದರಿಂದ ಬೆವರು, ದೇಹದಿಂದ ಉದುರುವ ಚರ್ಮದ ಕಣಗಳು, ಧೂಳು, ತೇವಾಂಶ ಎಲ್ಲ ಒಟ್ಟು ಸೇರಿ ದುರ್ವಾಸನೆ ಬರಲಾರಂಭಿಸುತ್ತೆ. ಅದರಲ್ಲೂ ಕೆಎಸ್‌ಆರ್‌ಟಿಸಿ ಬಿಎಂಟಿಸಿ ಯಂಥ ಸಾರ್ವಜನಿಕ ಬಸ್ ಸೀಟುಗಳು ಸ್ವಚ್ಛಗೊಳಿಸುವುದೇ ಅಪರೂಪ. ಹೀಗಾಗಿ ದಿನನಿತ್ಯ ಲಕ್ಷಾಂತರ ಜನರು ಪ್ರಯಾಣಿಸುವ ಬಸ್‌ಗಳಲ್ಲಿ ತಾಸು ಕುಳಿತರೂ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಇದರಿಂದ ಅಲರ್ಜಿ ತುರಿಕೆ, ಚರ್ಮದ ಸಮಸ್ಯೆ ಉಂಟಾಗುತ್ತೆ ಎಂದು ಹಲವು ಅಧ್ಯಯನಗಳೇ ಬಹಿರಂಗ ಪಡಿಸಿವೆ.
34
ಬಸ್ಸಿನಲ್ಲೇ ಊಟ, ಮದ್ಯಪಾನ, ವಾಂತಿ..!
ದೂರ ಪ್ರಯಾಣಿಸುವ ನೂರಾರು ಜನ ಒಂದೇ ಸೀಟನ್ನು ಬಳಸುತ್ತಾರೆ. ಬೆವರು, ದೇಹದ ಎಣ್ಣೆ, ಧೂಳು ಮತ್ತು ತೇವಾಂಶ ಫ್ಯಾಬ್ರಿಕ್ ಸೀಟಿಗೆ ಅಂಟಿಕೊಂಡಿರುತ್ತದೆ. ಮೇಲ್ನೋಟಕ್ಕೆ ಸೀಟು ಸ್ವಚ್ಛವಾಗಿ ಕಂಡರೂ ಕುಳಿತ ಒಂದು ತಾಸಿನಲ್ಲೇ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಬೆಂಗಳೂರಿನಿಂದ ಉತ್ತರ ಕರ್ನಾಟಕದ ಭಾಗಕ್ಕೆ ಪ್ರಯಾಣಿಸುವ ಬಸ್‌ಗಳಲ್ಲಿ ಸಾಮಾನ್ಯವಾಗಿ ಪ್ರಯಾಣಿಕರು ಬಸ್‌ಗಳಲ್ಲೇ ಕುಳಿತು ಊಟ ಮಾಡ್ತಾರೆ, ಕುಡಿದು ಮಲಗುತ್ತಾರೆ. ದೀರ್ಘ ಪ್ರಯಾಣದ ಪರಿಣಾಮ ಕಿಟಕಿಯಲ್ಲಿ ವಾಂತಿ ಮಾಡಿಕೊಳ್ತಾರೆ. ಇದೆಲ್ಲ ಒಂದು ದಿನದ ಕತೆಯಲ್ಲ ದಿನನಿತ್ಯ ಲಕ್ಷಾಂತರ ಜನರು ಪ್ರಯಾಣಿಸುವಾಗ ಇವೆಲ್ಲ ನಡೆಯುತ್ತಲೇ ಇರುವುದರಿಂದ ಮತ್ತು ಬಸ್ ಸ್ವಚ್ಛಗೊಳಿಸದೇ ಇರುವುದರಿಂದ ಕೆಟ್ಟ ವಾಸನೆ ಬರಲಾರಂಭಿಸುತ್ತದೆ.
ತಜ್ಞರ ಪ್ರಕಾರ, ಫ್ಯಾಬ್ರಿಕ್ ಸೀಟುಗಳನ್ನು ಕೇವಲ ಒರೆಸುವುದಕ್ಕಿಂತ ನಿಯಮಿತವಾಗಿ ಡೀಪ್ ಕ್ಲೀನಿಂಗ್ ಮಾಡುವುದು.
ಬಿಸಿ ಹಬೆಯ (Steam) ಮೂಲಕ ಶುಚಿಗೊಳಿಸುವುದು,
ಧೂಳು ಹೀರಿಕೊಳ್ಳುವ ಮಷಿನ್ ಬಳಸಿ ಸ್ವಚ್ಛಗೊಳಿಸುವುದು,
ಸ್ವಚ್ಛತೆ ಕಾಪಾಡಲು ಕಟ್ಟುನಿಟ್ಟಿನ ನಿಯಮ ರೂಪಿಸುವುದು.
ಸಾರ್ವಜನಿಕ ಸಾರಿಗೆಗೆ ಇದೇಕೆ ಮುಖ್ಯ?
ಪ್ರತಿದಿನ ಲಕ್ಷಾಂತರ ಜನ ಬಳಸುವ ರಾಜ್ಯ ಸಾರಿಗೆ ಬಸ್‌ಗಳಲ್ಲಿ ನಿಯಮಿತವಾಗಿ ಡೀಪ್ ಕ್ಲೀನಿಂಗ್, ಫ್ಯಾಬ್ರಿಕ್ ಸೀಟುಗಳ ಸ್ವಚ್ಛತೆ, ದುರ್ವಾಸನೆ ನಿಯಂತ್ರಣಕ್ಕೆ ವಿಶೇಷ ಗಮನ ನೀಡಿದರೆ ಪ್ರಯಾಣಿಕರ ಅನುಭವ ಉತ್ತಮವಾಗುವುದರ ಜೊತೆಗೆ ಅಲರ್ಜಿ ಸಮಸ್ಯೆಗಳನ್ನೂ ಕಡಿಮೆ ಮಾಡಲು ನೆರವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.