ಕೈ ತುಂಬಾ ಉಂಗುರ ಧರಿಸೋರನ್ನು ನೀವು ನೋಡಿರ್ಬಹುದು. ಎಲ್ಲ ಬೆರಳಿಗೆ ಉಂಗುರ ಧರಿಸೋದ್ರ ಹಿಂದೆ ಬರೀ ದೊಡ್ಡಸ್ತಿಕೆ ಇದ್ಯಾ? ಇದಕ್ಕೆ ಕಾರಣ ಏನು ಎಂಬುದನ್ನು ಮನೋವೈಜ್ಞಾನಿಗಳು ಬಿಚ್ಚಿಟ್ಟಿದ್ದಾರೆ.
ಕೈನ ಎಲ್ಲ ಬೆರಳಿಗೂ ಉಂಗುರ ಹಾಕಿಕೊಂಡಿದ್ದಾರೆ ಅಂದ್ರೆ ಅವರ ಬಳಿ ಸಿಕ್ಕಾಪಟ್ಟೆ ಹಣ ಇದೆ ಎಂದರ್ಥವಲ್ಲ. ಅವರು ಧರಿಸಿರುವ ಒಂದೊಂದು ಉಂಗುರದ ಹಿಂದೆ ಒಂದೊಂದು ಕಥೆ ಇರ್ಬಹುದು. ಅವರ ಆ ಉಂಗುರ ಬರೀ ಆಭರಣ ಅಲ್ದೆ ಇರಬಹುದು. ಅಜ್ಜಿ ಕೊಟ್ಟ ಉಡುಗೊರೆ ಆಗಿರ್ಬಹುದು. ಮದುವೆ ಅಥವಾ ನಿಶ್ಚಿತಾರ್ಥದ ನೆನಪಾಗಿರ್ಬಹುದು. ಸ್ನೇಹಿತನ ಗಿಫ್ಟ್ ಆಗಿರ್ಬಹುದು. ಅಪ್ಪ ಅಮ್ಮನ ನೆನಪಾಗಿರಬಹುದು. ಅವರು ಉಂಗುರದ ಜೊತೆ ವಿಶೇಷ ಭಾವನೆ ಹೊಂದಿರ್ತಾರೆ. ಹಾಗಾಗಿ ಎಲ್ಲವನ್ನೂ ಧರಿಸ್ತಾರೆ.
24
ವ್ಯಕ್ತಿತ್ವದ ಒಂದು ಭಾಗ
ಕೆಲವರಿಗೆ ಬಟ್ಟೆ ಇಷ್ಟ. ಮತ್ತೆ ಕೆಲವರಿಗೆ ಆಭರಣ ಇಷ್ಟ. ಹಾಗೆ ಕೆಲವರಿಗೆ ಉಂಗುರಗಳು ಇಷ್ಟವಾಗುತ್ತವೆ. ಉಂಗುರಗಳ ಮೇಲೆ ಅವರು ವಿಶೇಷ ಆಸಕ್ತಿ ಹೊಂದಿರ್ತಾರೆ. ಎಲ್ಲಿಗೇ ಹೋದೂ ಹೊಸ ಉಂಗುರ ಖರೀದಿ ಮಾಡ್ತಾರೆ. ಅದನ್ನು ಧರಿಸಿಕೊಂಡು ತಮ್ಮ ಅಭಿರುಚಿ, ಜೀವನಶೈಲಿ ಅಥವಾ ವೈಯಕ್ತಿಕ ಗುರುತನ್ನು ತೋರಿಸುವ ಪ್ರಯತ್ನ ಮಾಡ್ತಾರೆ.
34
ಧಾರ್ಮಿಕ - ಸಾಂಸ್ಕೃತಿಕ ನಂಬಿಕೆಗಳು
ಎಲ್ಲ ಬೆರಳಿಗೆ ಉಂಗುರ ಧರಿಸುವ ಕೆಲ ಜನರು ಜ್ಯೋತಿಷ್ಯ, ಧಾರ್ಮಿಕ ನಂಬಿಕೆ ಅಥವಾ ಕುಟುಂಬದ ಸಂಪ್ರದಾಯವನ್ನು ಪಾಲಿಸ್ತಾರೆ. ಅದರಂತೆ ವಿವಿಧ ಬೆರಳುಗಳಿವೆ ವಿವಿಧ ರತ್ನಗಳ ಉಂಗುರಗಳನ್ನು ಧರಿಸುತ್ತಾರೆ.
ನೀವು ಎಲ್ಲರನ್ನೂ ಒಂದೇ ರೀತಿ ನೋಡೋದು ಉತ್ತಮವಲ್ಲ. ಎಲ್ಲ ಬೆರಳಿಗೆ ಉಂಗುರ ಧರಿಸಿದ ಎಲ್ಲರೂ ಫ್ಯಾಷನ್ ಪಾಲಿಸ್ತಾರೆ, ತೋರ್ಪಡಿಕೆಗೆ ಉಂಗುರು ಧರಿಸ್ತಿದ್ದಾರೆ, ಗಮನ ಸೆಳೆಯುವ ಪ್ರಯತ್ನ ನಡೆಸ್ತಿದ್ದಾರೆ ಅಂದ್ಕೊಳ್ಳೋದು ತಪ್ಪು. ಎಲ್ಲ ಬೆರಳಿಗೆ ಉಂಗುರ ಧರಿಸೋದ್ರ ಹಿಂದೆ ಫ್ಯಾಷನ್, ಭಾವನೆ, ಪ್ರೀತಿ, ಗುರುತು, ಸಂಪ್ರದಾಯ, ಧಾರ್ಮಿಕ ಕಾರಣ ಎಲ್ಲವೂ ಸೇರಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.