ಕಾಗೆಗಳು ಮತ್ತು ಇತರ ಪಕ್ಷಿಗಳು ಅಸ್ವಸ್ಥವಾದಾಗ ಇರುವೆಗಳನ್ನು ಬಳಸಿ ಸ್ವಯಂ-ಚಿಕಿತ್ಸೆ ಮಾಡಿಕೊಳ್ಳುತ್ತವೆ. ಇರುವೆಗೂಡನ್ನು ಕೆಣಕಿ, ಸಿಟ್ಟಾದ ಇರುವೆಗಳು ತಮ್ಮ ದೇಹದ ಮೇಲೆ ಹರಿದಾಡುವಂತೆ ಮಾಡಿ, ಅವು ಸಿಂಪಡಿಸುವ ಫಾರ್ಮಿಕ್ ಆಮ್ಲದಿಂದ ಗರಿಗಳಲ್ಲಿನ ಬ್ಯಾಕ್ಟೀರಿಯಾ ನಾಶಪಡಿಸಿಕೊಳ್ಳುತ್ತವೆ.
ಮನುಷ್ಯ ತಾನು ಎಷ್ಟೇ ಬುದ್ಧಿವಂತ, ಇಡೀ ಪ್ರಪಂಚ ನನ್ನ ಕೈಯಲ್ಲಿದೆ, ನಾನು ಏನು ಬೇಕಾದರೂ ಸಾಧಿಸಬಲ್ಲೆ, ಏನನ್ನಾದರೂ ಕಂಡುಹಿಡಿಯುವ ಬುದ್ಧಿವಂತಿಕೆ ನನ್ನಲ್ಲಿ ಇದೆ ಎಂದು ಎಷ್ಟೇ ಹೇಳಿದರೂ ಪ್ರಕೃತಿಯ ಮುಂದೆ ಅವನ ಜಾಣ್ಮೆಯೆಲ್ಲವೂ ಶೂನ್ಯ. ಇಂಥದ್ದೇ ದಿನ ಇದೇ ರೀತಿ ಸಂಭವಿಸುತ್ತದೆ ಎಂದು ಜ್ಯೋತಿಷಿಗಳು, ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ವಿಜ್ಞಾನಿಗಳು ಮುನ್ಸೂಚನೆ ಕೊಟ್ಟರೂ ಎಷ್ಟೋ ಬಾರಿ ಎಲ್ಲವೂ ಉಲ್ಟಾ ಪಲ್ಟಾ ಆಗುವುದು ಇದೆ. ಅದಕ್ಕೇ ಪ್ರಕೃತಿ ಎನ್ನುವುದು.
26
ಪ್ರಾಣಿ, ಪಕ್ಷಿ ಪ್ರಪಂಚ ಅರಿತಷ್ಟೂ ಕಮ್ಮಿ
ಅದರಲ್ಲಿಯೂ ಪಕ್ಷಿ, ಪ್ರಾಣಿ, ಕೀಟ ಪ್ರಪಂಚಗಳ ಬಗ್ಗೆ ಅರಿತಷ್ಟೂ ಕಡಿಮೆಯೇ. ಇದರ ಆಳಕ್ಕೆ ಹೋದಷ್ಟೂ ಚಿತ್ರ-ವಿಚಿತ್ರಗಳೇ ತುಂಬಿಕೊಂಡಿರುತ್ತವೆ. ಒಂದೊಂದು ಪ್ರಾಣಿ, ಒಂದೊಂದು ಪಕ್ಷಿ, ಒಂದೊಂದು ಕೀಟದಲ್ಲಿಯೂ ರೋಮಾಂಚಕಾರಿಯಾಗಿರುವ ಜೀವನ ಕ್ರಿಯೆ ಇರುತ್ತದೆ. ಅದರಲ್ಲಿ ಒಂದು ಕಾಗೆ. ಕಾಗೆಯನ್ನು ದಿನನಿತ್ಯ ನೋಡುವ ನಮಗೆ ಅದರ ಕೆಲವೊಂದು ವಿಷಯಗಳನ್ನು ಅರಿತರೆ ನಿಜಕ್ಕೂ ರೋಮಾಂಚಕವಾಗುವುದು ಇದೆ.
36
ಕಾಗೆ ಅಥವಾ ಪಕ್ಷಿಗಳು ಅಸ್ವಸ್ಥವಾದಾಗ
ಕಾಗೆಗಳು ಅಸ್ವಸ್ಥವಾದಾಗ ಅಥವಾ ಅದರ ಗರಿಗಳು ಪರಾವಲಂಬಿಗಳಿಂದ ತೊಂದರೆಗೊಳಗಾದಾಗ, ಅವು ಇರುವೆಗಳನ್ನು ಮೈಮೇಲೆ ಬಿಟ್ಟುಕೊಳ್ಳುತ್ತವೆಯಂತೆ! ಅಂದಹಾಗೆ ಇದು ಕಾಗೆಯೊಂದೇ ಅಲ್ಲ, ಇತರ ಹಲವು ಪಕ್ಷಿಗಳೂ ಹೀಗೆಯೇ ಮಾಡುತ್ತವೆ. ಅನಾರೋಗ್ಯಪೀಡಿತವಾಗಿ ಈ ಪಕ್ಷಿಗಳು ಮೊದಲಿಗೆ ಇರುವೆಗಳು ಎಲ್ಲಿ ಇವೆ ಎನ್ನುವುದನ್ನು ಹುಡುಕಿ ಹೋಗುತ್ತವೆ. ಇರುವೆ ಗೂಡು ಕಂಡಾಗ ಅದರಲ್ಲಿ ಇರುವೆಗಳು ಇವೆ ಎನ್ನುವುದನ್ನು ಖಚಿತಪಡಿಸಿಕೊಂಡು ಗೂಡನ್ನು ಕೊಕ್ಕಿನಿಂದ ಕುಕ್ಕುತ್ತವೆ.
ಈ ಸಂದರ್ಭದಲ್ಲಿ ಇರುವೆಗಳು ಸಿಟ್ಟಿನಿಂದ ಕಾಗೆಗಳ ಮೈಮೇಲೆಲ್ಲಾ ಹರಡುತ್ತವೆ. ಇದೇ ಇರುವೆಗಳಿಂದ ಕಾಗೆಗಳು ಹಾಗೂ ಆ ಪಕ್ಷಿಗಳಿಗೆ ಆಗುವ ಚಿಕಿತ್ಸಕ ಸ್ನಾನ. ಆ ಸಂದರ್ಭದಲ್ಲಿ ಕಾಗೆ ತನ್ನ ರೆಕ್ಕೆಗಳನ್ನು ಅಗಲವಾಗಿ ಹರಡುತ್ತದೆ, ಸಂಪೂರ್ಣವಾಗಿ ಸ್ಥಿರವಾಗಿ ಕುಳಿತುಕೊಳ್ಳುತ್ತದೆ ಮತ್ತು ಉದ್ರೇಕಗೊಂಡ ಇರುವೆಗಳು ತನ್ನ ದೇಹದಾದ್ಯಂತ ಮತ್ತು ಅದರ ಗರಿಗಳೊಳಗೆ ತೆವಳಲು ಅನುವು ಮಾಡಿಕೊಡುತ್ತದೆ.
56
ಗುಣಪಡಿಸುವ ಏಜೆಂಟ್
ರಕ್ಷಣಾ ಕಾರ್ಯವಿಧಾನವಾಗಿ, ಇರುವೆಗಳು ಹಕ್ಕಿಯ ಮೇಲೆ ಫಾರ್ಮಿಕ್ ಆಮ್ಲವನ್ನು ಸಿಂಪಡಿಸುತ್ತವೆ. ಈ ಆಮ್ಲವು ನೈಸರ್ಗಿಕ ಪ್ರತಿಜೀವಕ, ನಂಜುನಿರೋಧಕ ಮತ್ತು ಪರಾವಲಂಬಿಯಾಗಿ ಕಾರ್ಯನಿರ್ವಹಿಸುತ್ತದೆ, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಅವುಗಳ ಗರಿಗಳಲ್ಲಿ ಅಡಗಿರುವ ಹುಳಗಳನ್ನು ಕೊಲ್ಲುತ್ತದೆ.
66
ಇರುವೆ ಹಿಡಿದು ಉಜ್ಜಿಕೊಳ್ಳುವ ಕಾಗೆ
ಕೆಲವೊಮ್ಮೆ, ಪಕ್ಷಿಯು ತನ್ನ ಕೊಕ್ಕಿನಲ್ಲಿ ಪ್ರತ್ಯೇಕ ಇರುವೆಗಳನ್ನು ಹಿಡಿದು ತನ್ನ ರೆಕ್ಕೆಗಳು ಮತ್ತು ಬಾಲದ ಗರಿಗಳ ಕೆಳಗೆ ಉಜ್ಜುತ್ತವೆ. ಇದು ಮುಲಾಮಿನಂತೆ ಕಾರ್ಯನಿರ್ವಹಿಸುತ್ತದೆ. ಫಾರ್ಮಿಕ್ ಆಮ್ಲವು ಕೀಟಗಳನ್ನು ತಟಸ್ಥಗೊಳಿಸುವಲ್ಲಿ ಮತ್ತು ಅವುಗಳ ಗರಿಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ, ಕಾಗೆಯು ತಮ್ಮ ಪರಿಸರವನ್ನು ಬಿಡದೆಯೇ ಗುಣವಾಗಲು ಮತ್ತು ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.