ಮನೆ ಮುಂದೆಯೇ ಟ್ರೈನ್ ಪಾರ್ಕಿಂಗ್! ದೇಶದಲ್ಲೇ ಸ್ವಂತ ರೈಲ್ವೆ ಸ್ಟೇಷನ್ ಹೊಂದಿದ್ದ ಏಕೈಕ ವ್ಯಕ್ತಿ ಈತ!

Published : May 20, 2026, 12:17 PM IST

ಐಷಾರಾಮಿ ಪ್ರಯಾಣಕ್ಕಾಗಿ ಕಾರು, ಬಸ್ಸು ಖರೀದಿಸುವುದನ್ನು ನೋಡಿದ್ದೇವೆ. ಇನ್ನೂ ಶ್ರೀಮಂತರಾದರೆ ಪ್ರೈವೇಟ್ ಜೆಟ್ ಖರೀದಿಸುತ್ತಾರೆ. ಆದರೆ, ಸ್ವಂತ ರೈಲು, ಅದನ್ನು ಪಾರ್ಕ್ ಮಾಡಲು ಮನೆಯಲ್ಲೇ ರೈಲ್ವೆ ನಿಲ್ದಾಣ ಹೊಂದಿದ್ದ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ?

PREV
15
ಶ್ರೀಮಂತರ ಕಾರು-ಹೆಲಿಕಾಪ್ಟನ್ ಕಲೆಕ್ಷನ್ ಸಾಮಾನ್ಯ

ಶ್ರೀಮಂತರು ತಮ್ಮ ಅರಮನೆಯಂತಹ ಮನೆಯ ಮುಂದೆ ರೋಲ್ಸ್ ರಾಯ್ಸ್, ಟೆಸ್ಲಾ, ಬಿಎಂಡಬ್ಲ್ಯು ಮುಂತಾದ ದುಬಾರಿ ಕಾರುಗಳನ್ನು ನಿಲ್ಲಿಸಲು ಇಷ್ಟಪಡುತ್ತಾರೆ. ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವುದು ಮಾತ್ರವಲ್ಲ, ಅದನ್ನು ಮನೆಯ ಮುಂದೆ ನಿಲ್ಲಿಸುವುದನ್ನೂ ಅವರು ಪ್ರತಿಷ್ಠೆಯ ಸಂಕೇತವೆಂದು ಭಾವಿಸುತ್ತಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಇಂತಹ ಹತ್ತಾರು ಕಾರುಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಮತ್ತು ದೊಡ್ಡ ಉದ್ಯಮಿಗಳು ಅನೇಕರಿದ್ದಾರೆ. ಅಷ್ಟೇ ಏಕೆ, ಐಷಾರಾಮಿ ಬಸ್ಸುಗಳು (ಕ್ಯಾರವಾನ್‌ಗಳು) ಮತ್ತು ಖಾಸಗಿ ಜೆಟ್‌ಗಳನ್ನು ಹೊಂದಿರುವ ಶ್ರೀಮಂತರೂ ಇದ್ದಾರೆ.

25
ಮನೆ ಮುಂದೆಯೇ ಐಷಾರಾಮಿ ಟ್ರೈನ್ ಪಾರ್ಕಿಂಗ್!

ಆದರೆ, ಆ ಕಾಲದಲ್ಲೇ ಒಬ್ಬ ಭಾರತೀಯ ನವಾಬ, ತನಗಾಗಿ ಒಂದು ಐಷಾರಾಮಿ ರೈಲನ್ನು ನಿರ್ವಹಿಸುತ್ತಿದ್ದ. ಅಷ್ಟೇ ಅಲ್ಲ, ಆ ರೈಲು ನೇರವಾಗಿ ತನ್ನ ಅರಮನೆಯ ಬಳಿ ನಿಲ್ಲುವಂತೆ ಮಾಡಲು ಸ್ವಂತ ರೈಲ್ವೆ ನಿಲ್ದಾಣವನ್ನೇ ನಿರ್ಮಿಸಿದ್ದ. ಹೀಗೆ ಭಾರತದಲ್ಲಿ ಸ್ವಂತ ರೈಲು ಮತ್ತು ಅದನ್ನು ನಿಲ್ಲಿಸಲು ಮನೆಯ ಬಳಿಯೇ ರೈಲ್ವೆ ನಿಲ್ದಾಣವನ್ನು ನಿರ್ಮಿಸಿಕೊಂಡಿದ್ದ ಆ ಏಕೈಕ ವ್ಯಕ್ತಿಯ ಬಗ್ಗೆ ಇಲ್ಲಿ ತಿಳಿಯೋಣ.

35
ಖಾಸಗಿ ರೈಲ್ವೆ ನಿಲ್ದಾಣ

ನವಾಬ್ ಫೈಜ್ ಉಲ್ಲಾ ಖಾನ್ ಅವರು 1774ರಲ್ಲಿ ಉತ್ತರ ಪ್ರದೇಶದ ರಾಂಪುರ ಸಂಸ್ಥಾನವನ್ನು ಸ್ಥಾಪಿಸಿದರು. ಬ್ರಿಟಿಷರ ಆಳ್ವಿಕೆಯಲ್ಲೂ ಈ ಸಂಸ್ಥಾನವು ಸ್ವತಂತ್ರವಾಗಿತ್ತು ಮತ್ತು ತನ್ನ ಶ್ರೀಮಂತ ಸಂಸ್ಕೃತಿ ಹಾಗೂ ಸಾಹಿತ್ಯಿಕ ವೈಭವಕ್ಕೆ ಹೆಸರುವಾಸಿಯಾಗಿತ್ತು. ಹೈದರಾಬಾದ್ ನಿಜಾಮರಂತೆಯೇ, ಈ ಸಂಸ್ಥಾನವನ್ನು ಆಳಿದ ನವಾಬರು ಕೂಡ ಅಪಾರ ಸಿರಿ ಸಂಪತ್ತನ್ನು ಹೊಂದಿದ್ದರು. ಅವರು ಅತ್ಯಂತ ವಿಲಾಸಿ ಜೀವನವನ್ನು ನಡೆಸುತ್ತಿದ್ದರು. 

45
ಒಂಬತ್ತನೇ ನವಾಬ ಹಮೀದ್ ಅಲಿ ಖಾನ್

ಈ ರಾಂಪುರ ಸಂಸ್ಥಾನವನ್ನು ಆಳಿದ ಒಂಬತ್ತನೇ ನವಾಬ ಹಮೀದ್ ಅಲಿ ಖಾನ್ ಅವರ ಜೀವನವು ಐಷಾರಾಮಕ್ಕೆ ಮತ್ತೊಂದು ಹೆಸರಾಗಿತ್ತು. ಅವರು ಬ್ರಿಟಿಷರ ಸಹಾಯದಿಂದ ತಮ್ಮದೇ ಆದ ರೈಲ್ವೆ ನಿಲ್ದಾಣವನ್ನು ನಿರ್ಮಿಸಿಕೊಂಡರು. ಇದನ್ನು ಮುಖ್ಯ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸಲು, ತಮ್ಮ ಸ್ವಂತ ಹಣದಿಂದ 40 ಕಿಲೋಮೀಟರ್ ಉದ್ದದ ರೈಲ್ವೆ ಮಾರ್ಗವನ್ನು ಹಾಕಿಸಿದರು. ಅವರ ಅರಮನೆಯ ಬಳಿಯ ರೈಲ್ವೆ ನಿಲ್ದಾಣದಲ್ಲಿ ಯಾವಾಗಲೂ ಒಂದು ಐಷಾರಾಮಿ ರೈಲು ಸಿದ್ಧವಾಗಿರುತ್ತಿತ್ತು. ಈ ರೈಲ್ವೆ ನಿಲ್ದಾಣದ ನಿರ್ಮಾಣಕ್ಕಾಗಿಯೇ ನವಾಬ ಹಮೀದ್ ಅಲಿ ಖಾನ್ ಅಂದಿನ ಕಾಲದಲ್ಲಿ ಬರೋಬ್ಬರಿ 113 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರಂತೆ. ಅಂದರೆ, ಇಂದಿನ ಮೌಲ್ಯದಲ್ಲಿ ಇದು ಸಾವಿರಾರು ಕೋಟಿ ರೂಪಾಯಿ ಆಗುತ್ತದೆ. ಹೀಗೆ, ದೇಶದಲ್ಲಿ ಸ್ವಂತ ರೈಲ್ವೆ ನಿಲ್ದಾಣವನ್ನು ಹೊಂದಿದ್ದ ಏಕೈಕ ವ್ಯಕ್ತಿ ಈ ಹಮೀದ್ ಅಲಿ ಖಾನ್.

55
ಚಲಿಸುವ ಅರಮನೆ - ದಿ ಸಲೂನ್ ಟ್ರೈನ್
ರಾಂಪುರದ ನವಾಬ ಹಮೀದ್ ಅಲಿ ಖಾನ್, ಅರಮನೆಯನ್ನೇ ಮೀರಿಸುವಂತಹ ರೈಲೊಂದನ್ನು ತಯಾರಿಸಿದ್ದರು. 1925ರಲ್ಲಿ 'ಬರೋಡಾ ಸ್ಟೇಟ್ ರೈಲ್ ಬಿಲ್ಡರ್ಸ್' ಈ ಐಷಾರಾಮಿ ರೈಲನ್ನು ನಿರ್ಮಿಸಿತು. ಈ ರೈಲಿನಲ್ಲಿ ನಾಲ್ಕು ಬೋಗಿಗಳಿದ್ದವು. ಇದರಲ್ಲಿ ನವಾಬ ಮತ್ತು ಅವರ ಕುಟುಂಬ ಸದಸ್ಯರು ಪ್ರಯಾಣಿಸಲು ಬೇಕಾದ ಎಲ್ಲಾ ಸೌಕರ್ಯಗಳಿದ್ದವು. ಪರ್ಷಿಯನ್ ಕಾರ್ಪೆಟ್‌ಗಳು, ಸುಂದರವಾದ ಫರ್ನಿಚರ್‌ಗಳು, ಕಿಟಕಿಗಳಿಗೆ ದುಬಾರಿ ಕರ್ಟನ್‌ಗಳು ಮತ್ತು ಬೃಹತ್ ಗೊಂಚಲುಗಳು ಈ ರೈಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು. ರಾಜಮನೆತನಕ್ಕಾಗಿ ವಿಶೇಷ ಮಲಗುವ ಕೋಣೆ ಮತ್ತು ಅಡುಗೆಮನೆಯೂ ಇತ್ತು. ನವಾಬರ ಕುಟುಂಬ ಮಾತ್ರವಲ್ಲದೆ, ಅವರ ಸೇವೆಗಾಗಿ ಪ್ರತ್ಯೇಕ ಕೋಚ್‌ಗಳೂ ಇದ್ದವು. ಇದಕ್ಕಾಗಿಯೇ ರಾಂಪುರದ ನವಾಬರು 'ದಿ ಸಲೂನ್' ಟ್ರೈನ್ ಅನ್ನು 'ಚಲಿಸುವ ಅರಮನೆ' ಎಂದು ಕರೆಯುತ್ತಿದ್ದರು. ಹೀಗೆ, ಕೇವಲ ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಒಂದು ರೈಲ್ವೆ ನಿಲ್ದಾಣ ಮತ್ತು ಐಷಾರಾಮಿ ರೈಲನ್ನು ವ್ಯವಸ್ಥೆ ಮಾಡಿಕೊಂಡಿದ್ದ ವ್ಯಕ್ತಿ ನವಾಬ್ ಹಮೀದ್ ಅಲಿ ಖಾನ್.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories