ಅತಿಹೆಚ್ಚು ಹಿಂದೂಗಳಿರುವ ಭಾರತದ ಟಾಪ್ 5 ರಾಜ್ಯಗಳಿವು..! ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

Published : Oct 21, 2026, 07:39 PM IST

ಬೆಂಗಳೂರು: ಭಾರತ ಬಹುಸಂಖ್ಯಾತ ಹಿಂದೂಗಳಿರುವ ದೇಶ. ವಿಶ್ವದ ಪ್ರಾಚೀನ ಜೀವಂತ ಧರ್ಮಗಳಲ್ಲಿ ಹಿಂದೂ ಧರ್ಮವೂ ಒಂದಾಗಿದೆ. ಹಿಂದೂ ಧರ್ಮ ವಿಶ್ವದ ಮೂರನೇ ಅತಿದೊಡ್ಡ ಧರ್ಮವಾಗಿದೆ. ಇನ್ನು ಭಾರತದಲ್ಲಿ ಟಾಪ್-5 ಅತಿಹೆಚ್ಚು ಹಿಂದೂ ಧರ್ಮದವರು ವಾಸಿಸುವ ರಾಜ್ಯಗಳು ಯಾವುವು ನೋಡೋಣ.

PREV
16
1. ಹಿಮಾಚಲ ಪ್ರದೇಶ: 95%

ಹಿಮಾಲಯದ ತಪ್ಪಲಿನಲ್ಲಿರುವ ಹಿಮಾಚಲ ಪ್ರದೇಶದಲ್ಲಿ ವಾಸಿಸುವರ ಪೈಕಿ 95% ಮಂದಿ ಹಿಂದೂಗಳು. ಈ ರಾಜ್ಯದಲ್ಲಿ ಐದು ಶಕ್ತಿಪೀಠಗಳಿವೆ. ಮೊದಲಿನಿಂದಲೂ ಹಿಮಾಚಲ ಪ್ರದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ.

26
2. ಓಡಿಶಾ: 94%

ಓಡಿಶಾದಲ್ಲಿ ವಾಸಿಸುವವರ ಪೈಕಿ 94% ಮಂದಿ ಹಿಂದೂ ಧರ್ಮದ ಅನುಯಾಯಿಗಳಾಗಿದ್ದಾರೆ. ದಿ ಇಂಡಿಯನ್ ಇಂಡೆಕ್ಸ್ ವರದಿಯ ಪ್ರಕಾರ, ಹಿಮಾಚಲ ಪ್ರದೇಶ ಬಳಿಕ ಅತಿಹೆಚ್ಚು ಹಿಂದೂಗಳು ವಾಸಿಸುವ ರಾಜ್ಯವೆಂದರೇ ಅದು ಒಡಿಶಾವಾಗಿದೆ. ಹಿಂದೂಗಳ ಪವಿತ್ರ ಕ್ಷೇತ್ರ ಪುರಿ ಜಗನ್ನಾಥ ದೇವಸ್ಥಾನವಿರುವುದು ಇದೇ ಓಡಿಶಾದಲ್ಲಿ.

36
3. ಛತ್ತೀಸ್‌ಗಢ: 93%

ದಟ್ಟ ಅರಣ್ಯ ಹಾಗೂ ವಾಟರ್‌ಪಾಲ್ಸ್‌ಗೆ ಹೆಸರುವಾಸಿಯಾಗಿರುವ ಛತ್ತೀಸ್‌ಗಢದಲ್ಲಿ ವಾಸಿಸುವವರ ಪೈಕಿ 93% ಹಿಂದೂಗಳಾಗಿದ್ದಾರೆ. ಇಲ್ಲಿ ಬುಡಕಟ್ಟು ಸಮುದಾಯವೇ ಹೆಚ್ಚಿದೆ. ಛತ್ತೀಸ್‌ಗಢವೂ ಅತಿಹೆಚ್ಚು ಹಿಂದೂಗಳು ವಾಸಿಸುವ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

46
4. ಮಧ್ಯಪ್ರದೇಶ:

ವಿಸ್ತೀರ್ಣದಲ್ಲಿ ಭಾರತದ ಎರಡನೇ ಅತಿದೊಡ್ಡ ರಾಜ್ಯವಾಗಿ ಗುರುತಿಸಿಕೊಂಡಿರುವ ಮಧ್ಯಪ್ರದೇಶವು, ಜನಸಂಖ್ಯೆಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಇನ್ನು ಮಧ್ಯಪ್ರದೇಶದಲ್ಲಿ 91% ಹಿಂದೂಗಳು ವಾಸವಾಗಿದ್ದಾರೆ. ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ಮಹಾಕಾಳೇಶ್ವರ ಜ್ಯೋತಿರ್ಲಿಂಗ ವಿರುವುದು ಇದೇ ರಾಜ್ಯದಲ್ಲಿ.

56
5. ಗುಜರಾತ್:

2011ರ ಜನಗಣತಿಯ ಪ್ರಕಾರ ಗುಜರಾತ್‌ನಲ್ಲಿ ಸುಮಾರು 6.2 ಕೋಟಿ ಜನಸಂಖ್ಯೆಯಿತ್ತು. ಇಲ್ಲಿ ವಾಸಿಸುವ 89% ಮಂದಿ ಹಿಂದೂಗಳಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ತವರು ಕ್ಷೇತ್ರವಾಗಿರುವ ಗುಜರಾತ್‌ನಲ್ಲೇ ಪ್ರಖ್ಯಾತ ಸೋಮನಾಥ ದೇವಸ್ಥಾನವೂ ಇದೆ.

66
11. ಕರ್ನಾಟಕ:

ಇನ್ನು ನಮ್ಮ ಕರ್ನಾಟಕದಲ್ಲಿ ಸುಮಾರು 84% ಮಂದಿ ಹಿಂದೂಗಳಿದ್ದಾರೆ ಎಂದು ದ ಇಂಡಿಯನ್ ಇಂಡೆಕ್ಸ್ ವರದಿ ಮಾಡಿದೆ. ಈ ಮೂಲಕ ಕರ್ನಾಟಕವು ಅತಿಹೆಚ್ಚು ಹಿಂದೂಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನ ಪಡೆದುಕೊಂಡಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories