ಗೋಧಿ ಹಿಟ್ಟು Vs ಮೈದಾ ಹಿಟ್ಟು: ಈ ಲೇಖನವು ಮೈದಾ ಹಿಟ್ಟು ಸಿದ್ದವಾಗುವ ಪ್ರಕ್ರಿಯೆಯನ್ನು ವಿವರಿಸುತ್ತದೆ. ಅಂತೆಯೇ ಮೈದಾ ಹಿಟ್ಟಿನ ಉತ್ಪನ್ನಗಳನ್ನು ಸೇವಿಸಿದ ಬಳಿಕ ಆರೋಗ್ಯದಲ್ಲಾಗುವ ಏರುಪೇರುಗಳ ಮಾಹಿತಿಯನ್ನು ಹೊಂದಿದೆ.
ಬೇಕರಿ ಫುಡ್‌ಗಳನ್ನು (ಬಿಸ್ಕಟ್, ಬ್ರೆಡ್, ಕುಕ್ಕಿಸ್, ಪಿಜ್ಜಾ) ಮೈದಾ ಹಿಟ್ಟಿನಿಂದಲೇ ತಯಾರಿಸುತ್ತಾರೆ. ಮನೆಗಳಲ್ಲಿ ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಿರುತ್ತಾರೆ. ಆದ್ರೂ ಆಹಾರ ಬಳಕೆಯಲ್ಲಿ ಮೈದಾ ಬಳಕೆ ಮಾಡಲಾಗುತ್ತದೆ. ಈ ಮೈದಾ ಹಿಟ್ಟು ಹೇಗೆ ಸಿದ್ಧವಾಗುತ್ತೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
25
ಮೈದಾ ಹಿಟ್ಟು ಹೇಗೆ ತಯಾರಾಗುತ್ತೆ?
ನಾವು ಪ್ರತಿದಿನ ಬಳಸುವ ಗೋಧಿಯಿಂದಲೇ ಮೈದಾ ಕೂಡ ತಯಾರಾಗುತ್ತೆ. ಆದ್ರೆ, ಇದನ್ನ ಪ್ರೊಸೆಸ್ ಮಾಡುವ ವಿಧಾನ ಮಾತ್ರ ಸಂಪೂರ್ಣ ಬೇರೆಯಾಗಿರುತ್ತದೆ. ಮೊದಲಿಗೆ, ಗೋಧಿಯನ್ನು ಚೆನ್ನಾಗಿ ತೊಳೆದು, ಅದರಲ್ಲಿರುವ ಮಣ್ಣು ಮತ್ತು ಧೂಳಿನಂಶವನ್ನು ತೆಗೆಯುತ್ತಾರೆ.
ನಂತರ ಈ ಕಾಳುಗಳನ್ನು ರೋಲರ್ ಮಿಲ್‌ಗಳಲ್ಲಿ ರುಬ್ಬಿ, ಹೊಟ್ಟು (bran), ಜರ್ಮ್ (germ) ಮತ್ತು ಎಂಡೋಸ್ಪರ್ಮ್ (endosperm) ಅನ್ನು ಬೇರೆ ಮಾಡ್ತಾರೆ. ಹೀಗೆ ಬೇರೆ ಮಾಡಿದ ಬಿಳಿ ಹಿಟ್ಟನ್ನು (ಎಂಡೋಸ್ಪರ್ಮ್) ಹಲವು ಬಾರಿ ಜರಡಿ ಹಿಡಿದು, ಅಲ್ಟ್ರಾ ಫೈನ್ ಮೈದಾ ತಯಾರಿಸುತ್ತಾರೆ.
ಈ ಹಿಟ್ಟು ಸ್ವಲ್ಪ ಹಳದಿ ಬಣ್ಣದಲ್ಲಿರುತ್ತೆ. ಇದನ್ನ ನೋಡಲು ಬೆಳ್ಳಗೆ, ಆಕರ್ಷಕವಾಗಿ ಕಾಣುವಂತೆ ಮಾಡಲು ಬೆಂಜಾಯ್ಲ್ ಪೆರಾಕ್ಸೈಡ್ ಅಥವಾ ಕ್ಲೋರಿನ್ ಡೈಆಕ್ಸೈಡ್‌ನಂತಹ ರಾಸಾಯನಿಕಗಳನ್ನು ಬಳಸಿ ಬ್ಲೀಚ್ ಮಾಡ್ತಾರೆ.
35
ಆರೋಗ್ಯಕ್ಕೆ ಯಾಕೆ ಒಳ್ಳೆಯದಲ್ಲ?
ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಎಲ್ಲರೂ ಹೇಳ್ತಾರೆ. ಯಾಕಂದ್ರೆ, ಈ ಹಿಟ್ಟಿನಲ್ಲಿ ನಾರಿನಂಶ (ಫೈಬರ್) ಇರೋದಿಲ್ಲ. ಮೈದಾ ತಯಾರಿಸುವಾಗ ಹೊಟ್ಟೆಲ್ಲಾ ತೆಗೆಯುವುದರಿಂದ ಇದರಲ್ಲಿ ಫೈಬರ್ ತುಂಬಾ ಕಡಿಮೆ ಇರುತ್ತೆ. ಅದಕ್ಕೇ, ಮೈದಾದಿಂದ ಮಾಡಿದ ಫುಡ್ಸ್ ತಿಂದರೆ ಮಲಬದ್ಧತೆ, ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಶುರುವಾಗುತ್ತೆ. ಅಷ್ಟೇ ಅಲ್ಲ, ಮೈದಾದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಹೆಚ್ಚಿರುತ್ತೆ.
ಇದು ತಿಂದ ತಕ್ಷಣ ಗ್ಲೂಕೋಸ್ ಆಗಿ ಬದಲಾಗಿ ರಕ್ತದಲ್ಲಿನ ಶುಗರ್ ಲೆವೆಲ್ ಹೆಚ್ಚಿಸುತ್ತೆ. ಹಾಗಾಗಿ, ಶುಗರ್ ಪೇಷೆಂಟ್ಸ್ ಮೈದಾ ಫುಡ್ಸ್‌ನಿಂದ ದೂರ ಇರಬೇಕು.
ಮೈದಾವನ್ನು ರಿಫೈನ್ ಮಾಡುವಾಗ ವಿಟಮಿನ್ ಮತ್ತು ಮಿನರಲ್ಸ್ ಎಲ್ಲವೂ ನಾಶವಾಗುತ್ತೆ. ಇದರಲ್ಲಿ ಉಳಿಯುವುದು ಬರೀ ಪಿಷ್ಟ ಮಾತ್ರ. ಇದರಿಂದ ದೇಹಕ್ಕೆ ಯಾವುದೇ ಪೋಷಕಾಂಶ ಸಿಗುವುದಿಲ್ಲ. ಮೈದಾ ಫುಡ್ಸ್ ತಿಂದಾಗ ತಕ್ಷಣಕ್ಕೆ ಎನರ್ಜಿ ಬಂದಂತೆ ಅನಿಸಿದರೂ, ಸ್ವಲ್ಪ ಹೊತ್ತಿನಲ್ಲೇ ಸುಸ್ತಾಗುತ್ತೆ. ಮತ್ತೆ ಮತ್ತೆ ಸಿಹಿ ತಿನ್ನಬೇಕು, ಜಂಕ್ ಫುಡ್ ತಿನ್ನಬೇಕು ಅನ್ನೋ ಆಸೆ ಹೆಚ್ಚಾಗುತ್ತೆ. ಇದರಿಂದ ತೂಕ ಕೂಡ ಜಾಸ್ತಿಯಾಗುತ್ತೆ. ಜೊತೆಗೆ, ಮೈದಾ ತಯಾರಿಸಲು ಬಳಸುವ ರಾಸಾಯನಿಕಗಳು ನಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಿ, ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ.
55
ಮೈದಾವನ್ನು ಸಂಪೂರ್ಣವಾಗಿ ಬಿಡಬೇಕಾ?
ಹಬ್ಬದ ದಿನಗಳಲ್ಲಿ ಅಥವಾ ಅಪರೂಪಕ್ಕೆ ಬೇಕರಿ ಐಟಮ್ಸ್ ತಿಂದರೆ ದೊಡ್ಡ ನಷ್ಟವಿಲ್ಲ. ಆದ್ರೆ, ಪ್ರತಿದಿನ ಮೈದಾ ಬ್ರೆಡ್, ಪಿಜ್ಜಾ, ಪಾಸ್ತಾ, ಬಿಸ್ಕೆಟ್ ತಿನ್ನುವುದೇ ಅಸಲಿ ಸಮಸ್ಯೆ. ಮೈದಾ ಬದಲು ಗೋಧಿ ಹಿಟ್ಟು, ಜೋಳ, ಸಜ್ಜೆ, ರಾಗಿ ಅಥವಾ ಕಡಲೆ ಹಿಟ್ಟು ಬಳಸಿದರೆ ಆರೋಗ್ಯವಾಗಿರಬಹುದು.
ಮೈದಾ ನಮ್ಮ ದೇಹಕ್ಕೆ ಸಂಪೂರ್ಣ ವಿಷವಲ್ಲದಿದ್ದರೂ, ಖಂಡಿತ ಆರೋಗ್ಯಕರ ಆಹಾರವಂತೂ ಅಲ್ಲ. ಇದನ್ನ ಪೂರ್ತಿಯಾಗಿ ಬಿಡುವ ಅಗತ್ಯವಿಲ್ಲ, ಆದ್ರೆ ಮಿತವಾಗಿ ಬಳಸುವುದೇ ಆರೋಗ್ಯಕ್ಕೆ ಸೇಫ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.