ತುಳಸಿ ಒಣಗುತ್ತಿದೆಯೇ? ಕೇವಲ 2 ರೂ.ಗೆ ಸಿಗುವ ಈ ಪದಾರ್ಥ ಹಾಕಿ ದಟ್ಟವಾಗಿ ಹಚ್ಚಹಸಿರಾಗಿ ಬೆಳೆಯುತ್ತೆ

Published : May 26, 2026, 09:22 AM IST

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನ ಇದೆ. ಬಹುತೇಕ ಪ್ರತಿಯೊಂದು ಮನೆಯ ಮುಂದೆ ತುಳಸಿ ಗಿಡವನ್ನು ನೆಟ್ಟು ಪ್ರತಿದಿನ ಪೂಜೆ ಮಾಡಲಾಗುತ್ತದೆ. ಆದರೆ ಬೇಸಿಗೆ ಆರಂಭವಾದ ಕೂಡಲೇ ಅನೇಕ ಮನೆಗಳಲ್ಲಿ ಒಂದು ಸಮಸ್ಯೆ ಸಾಮಾನ್ಯವಾಗಿ ಕಾಣಿಸುತ್ತದೆ – ತುಳಸಿ ಗಿಡ ಒಣಗುವುದು. 

PREV
14
ಮೇ ಮತ್ತು ಜೂನ್

ಮೇ ಮತ್ತು ಜೂನ್ ತಿಂಗಳ ತೀವ್ರ ಬಿಸಿಲು, ಬಿಸಿ ಗಾಳಿ ಮತ್ತು ಹೆಚ್ಚಿದ ಉಷ್ಣಾಂಶದಿಂದ ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು, ಒಣಗುವುದು ಹಾಗೂ ಗಿಡ ದುರ್ಬಲವಾಗುವುದು ಸಾಮಾನ್ಯ. ಕೆಲವೊಮ್ಮೆ ಗಿಡ ಸಂಪೂರ್ಣವಾಗಿ ಸತ್ತಂತೆ ಕಾಣುತ್ತದೆ. ಇದರಿಂದ ಹಲವರು ದುಬಾರಿ ಗೊಬ್ಬರಗಳನ್ನು ಖರೀದಿಸಲು ಮುಂದಾಗುತ್ತಾರೆ.

ಆದರೆ ತೋಟಗಾರಿಕೆ ತಜ್ಞರ ಪ್ರಕಾರ, ಮನೆಯಲ್ಲೇ ಇರುವ ಕೆಲವು ಸರಳ ವಸ್ತುಗಳಿಂದ ತುಳಸಿ ಗಿಡವನ್ನು ಮತ್ತೆ ಹಸಿರಾಗಿಸಬಹುದು.

24
ಹೇಗೆ ತಯಾರಿಸಬೇಕು ಈ ಮನೆಮದ್ದು?

ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನೀರು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಕಾಫಿ ಪುಡಿ ಮತ್ತು ಅರ್ಧ ಟೀಚಮಚ ಎಪ್ಸಮ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಈ ಮಿಶ್ರಣವನ್ನು ತುಳಸಿ ಗಿಡದ ಬೇರು ಭಾಗದ ಮಣ್ಣಿಗೆ ನಿಧಾನವಾಗಿ ಹಾಕಬೇಕು.

ಕಾಫಿ ಪುಡಿಯಲ್ಲಿ ಇರುವ ಸಾರಜನಕ ಮಣ್ಣಿಗೆ ಪೋಷಕಾಂಶ ನೀಡುತ್ತದೆ. ಎಪ್ಸಮ್ ಉಪ್ಪಿನಲ್ಲಿರುವ ಮೆಗ್ನೀಸಿಯಮ್ ಮತ್ತು ಸಲ್ಫೇಟ್ ಅಂಶಗಳು ಎಲೆಗಳನ್ನು ಮತ್ತೆ ಹಸಿರಾಗಿಸಲು ಸಹಾಯ ಮಾಡುತ್ತವೆ. ವಿಶೇಷವಾಗಿ ಬಿಸಿಲಿನಿಂದ ದುರ್ಬಲವಾದ ಗಿಡಗಳಿಗೆ ಇದು ಒಳ್ಳೆಯ ಟಾನಿಕ್‌ನಂತೆ ಕೆಲಸ ಮಾಡುತ್ತದೆ.

34
ಈ ಸಣ್ಣ ವಿಷಯಗಳನ್ನು ಮರೆಯಬೇಡಿ

ಗಿಡಕ್ಕೆ ಮಧ್ಯಾಹ್ನ ಬಿಸಿಲಿನ ವೇಳೆ ಗೊಬ್ಬರ ಹಾಕಬೇಡಿ

ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಹಾಕುವುದು ಉತ್ತಮ

ಮಣ್ಣನ್ನು ಸ್ವಲ್ಪ ಸಡಿಲ ಮಾಡಿದ ಬಳಿಕ ದ್ರವ ಗೊಬ್ಬರ ಹಾಕಿ

ಗಿಡವನ್ನು ನೇರ ಬಿಸಿಲಿನಲ್ಲಿ ಇಡದೇ, ಸ್ವಲ್ಪ ನೆರಳಿನಲ್ಲಿಡಿ

ಹೆಚ್ಚು ನೀರು ಹಾಕಬೇಡಿ, ಮಣ್ಣಿನಲ್ಲಿ ತೇವಾಂಶ ಇರೋಷ್ಟು ಸಾಕು

44
ತುಳಸಿ ಗಿಡದಲ್ಲಿ ಹೊಸ ಎಲೆ

ಈ ರೀತಿ ವಾರಕ್ಕೊಮ್ಮೆ ಮಾಡಿದರೆ ಕೆಲವೇ ದಿನಗಳಲ್ಲಿ ತುಳಸಿ ಗಿಡದಲ್ಲಿ ಹೊಸ ಎಲೆಗಳು ಮೂಡಲು ಪ್ರಾರಂಭಿಸುತ್ತವೆ. ದುಬಾರಿ ಗೊಬ್ಬರಗಳ ಅಗತ್ಯವಿಲ್ಲದೆ ಮನೆಯಲ್ಲೇ ಇರುವ ಸರಳ ಪದಾರ್ಥಗಳಿಂದ ನಿಮ್ಮ ತುಳಸಿ ಗಿಡವನ್ನು ಆರೋಗ್ಯಕರವಾಗಿ ಬೆಳೆಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories