ಮನೆಯ ಸುತ್ತಮುತ್ತ ಹಾವುಗಳು ಬರದಂತೆ ತಡೆಯಲು ಮನೆಯಲ್ಲೇ ಔಷಧ ತಯಾರಿಸಬಹುದು. ಈ ಮಿಶ್ರಣವನ್ನು ಮನೆಯ ಸುತ್ತ ಸಿಂಪಡಿಸಿದರೆ, ಅದರ ಕಡು ವಾಸನೆಗೆ ಹಾವುಗಳು ಮನೆಯ ಹತ್ತಿರ ಸುಳಿಯುವುದಿಲ್ಲ. ಗ್ರಾಮೀಣ ಭಾಗದಲ್ಲಿ ಈ ಉಪಾಯವನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಮನೆಯ ಸುತ್ತಮುತ್ತ ಹಸಿರು ಮತ್ತು ಜಲಮೂಲಗಳಿದ್ರೆ ಹಾವುಗಳ ಅಪಾಯ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ ಹಾವುಗಳು ನೀರು ಅರಸಿ ಜನವಸತಿ ಪ್ರದೇಶಗಳಿಗೆ ಬರುತ್ತವೆ. ಹಾವು ಕಂಡ್ರೆ ಕೆಲವರು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಾರೆ. ಒಂದಿಷ್ಟು ಜನರು ಸಾಯಿಸುತ್ತಾರೆ. ಮನೆ ಹತ್ರ ಹಾವುಗಳು ಬರಬಾರದು ಅಂದ್ರೆ ಕೆಲವು ಟ್ರಿಕ್ಸ್ ಬಳಸಬೇಕು.
25
ಮನೆಯಲ್ಲಿಯೇ ಮಾಡಿಕೊಳ್ಳಿ
ಗ್ರಾಮೀಣ ಭಾಗದ ಜನರು ಮನೆಯ ಸುತ್ತಮುತ್ತ ಹಾವುಗಳು ಬರದಂತೆ ಔಷಧವೊಂದನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಈ ಔಷಧವನ್ನು ನೀವು ಮನೆಯಲ್ಲಿಯೇ ಕೇವಲ ಎರಡು ವಸ್ತುಗಳಿಂದ ತಯಾರಿಸಿಕೊಳ್ಳಬಹುದು. ನಂತರ ಇದನ್ನು ಮನೆಯ ಸುತ್ತಲೂ ಸಿಂಪಡಿಸಬೇಕು.
35
ಏನಿದು ಔಷಧ?
ಇದನ್ನು ತಯಾರಿಸಲು ನಿಮಗೆ ಸೀಮೆಎಣ್ಣೆ ಮತ್ತು ಟಾಯ್ಲೆಟ್ ಮಾತ್ರೆ (Naftalin Tablet) ಬೇಕಾಗುತ್ತದೆ. ಮೊದಲಿಗೆ ಈ ಮಾತ್ರೆಗಳನ್ನು ಕುಟ್ಟಿಕೊಂಡು ಪುಡಿ ಮಾಡಿಕೊಳ್ಳಿ. ನಂತರ ಈ ಪುಡಿಯನ್ನು ಸೀಮೆಎಣ್ಣೆಗೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಅರ್ಧ ಲೀಟರ್‌ಗೆ ನಾಲ್ಕರಿಂದ ಐದು ಮಾತ್ರೆ ಬೇಕಾಗುತ್ತದೆ.
ನಶೆಮಾತ್ರೆ ಮಿಶ್ರಿತ ಸೀಮೆಎಣ್ಣೆಯನ್ನು ಬಾಟೆಲ್‌ನಲ್ಲಿ ತುಂಬಿಸಿಕೊಂಡು ಮನೆ ಸುತ್ತಲೂ ಸಿಂಪಡಿಸಬೇಕು. ಈ ಎರಡರ ಕಡು ವಾಸನೆಯಿಂದ ಹಾವುಗಳು ಮನೆಯತ್ತ ಸುಳಿಯಲ್ಲ. ಗ್ರಾಮೀಣ ಭಾಗದಲ್ಲಿ ಈ ಟ್ರಿಕ್ಸ್ ಬಳಸುತ್ತಾರೆ.
ಹಾವುಗಳು ಕಡುವಾಸನೆಯಿಂದ ದೂರ ಉಳಿಯುತ್ತವೆ. ಹಾವುಗಳ ಮನೆ ಬಳಿ ಬರದಂತೆ ತಡೆಯಲು ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಲಹೆ ನೀಡಲಾಗುತ್ತದೆ. ಸುಟ್ಟ ಆಯಿಲ್ ವಾಸನೆಯಿಂದಲೂ ಹಾವುಗಳು ದೂರ ಹೋಗುತ್ತವೆ ಎಂದು ಕೆಲವರು ಹೇಳುತ್ತಾರೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.