ಮಳೆಗಾಲದಲ್ಲಿ ಬೆಚ್ಚಗೆ ಕುಳಿತು ಟೀ – ಪಕೋಡಾ ಸೇವನೆ ಮಾಡೋ ಖುಷಿಗೆ ಮನೆಯಿಂದ ಬರುವ ವಾಸನೆ ಬ್ರೇಕ್ ಹಾಕುತ್ತೆ. ಮಳೆಗಾಲ ಶುರು ಆಗ್ತಿದ್ದಂತೆ ಮನೆಯ ಮೂಲೆ ಮೂಲೆಯಲ್ಲಿ ಗಬ್ಬು ವಾಸನೆ ಬರುತ್ತೆ. ಅದನ್ನು ಸುಲಭ ಟ್ರಿಕ್ಸ್ ಬಳಸಿ ಕಡಿಮೆ ಮಾಡ್ಬಹುದು.
ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುತ್ತದೆ. ಬಿಸಿಲನ್ನೇ ಕಾಣದ ಅನೇಕ ಊರುಗಳು ನಮ್ಮಲ್ಲಿವೆ. ಒಂದೇ ಸಮನೆ ಮಳೆ ಬೀಳ್ತಿದ್ದರೆ ತೇವಾಂಶವನ್ನು ಗೋಡೆ, ನೆಲ, ಪೀಠೋಪಕರಣಗಳು ಹೀರಿಕೊಳ್ಳುತ್ತವೆ. ಕಿಟಕಿ-ಬಾಗಿಲುಗಳನ್ನು ಮುಚ್ಚಿಡುವುದರಿಂದ ತಾಜಾ ಗಾಳಿ ಒಳಬರುವುದಿಲ್ಲ. ತೇವವಿರುವ ಗೋಡೆಗಳು, ಮೂಲೆಗಳು, ಬಾತ್ರೂಮ್, ಮರದ ಪೀಠೋಪಕರಣಗಳಲ್ಲಿ ಫಂಗಸ್ ಬೆಳೆಯುತ್ತದೆ. ಇದರಿಂದ ಗಬ್ಬು ವಾಸನೆ ಬರುತ್ತದೆ. ಮನೆಯಲ್ಲಿ ಸಂಪೂರ್ಣ ಒಣಗದ ಬಟ್ಟೆಗಳು ದುರ್ವಾಸನೆಗೆ ಕಾರಣವಾಗುತ್ತವೆ. ಮೇಲ್ಛಾವಣಿ, ಗೋಡೆ ಅಥವಾ ಪೈಪ್ಗಳಿಂದ ನೀರು ಸೋರುತ್ತಿದ್ದರೆ ತೇವ ಹೆಚ್ಚಾಗಿ ವಾಸನೆ ಬರುತ್ತದೆ.
26
ತಾಜಾ ಗಾಳಿ
ಮಳೆ ಶುರು ಆಗ್ತಿದ್ದಂತೆ ಕಿಟಕಿ , ಬಾಗಿಲುಗಳನ್ನು ಬಿಗಿಯಾಗಿ ಹಾಕಿರ್ತೇವೆ. ಇದ್ರಿಂದ ಮನೆಯೊಳಗೆ ಶುದ್ಧ ಗಾಳಿ ಬರೋದಿಲ್ಲ. ಮಳೆ ಕಡಿಮೆ ಆಗ್ತಿದ್ದಂತೆ ಸ್ವಲ್ಪ ಸಮಯ ಕಿಟಕಿ, ಬಾಗಿಲುಗಳನ್ನು ತೆರೆದಿಡಿ. ಶುದ್ಧವಾದ ಗಾಳಿ ಮನೆ ಪ್ರವೇಶ ಮಾಡುವಂತೆ ನೋಡ್ಕೊಳ್ಳಿ. ಇದರಿಂದ ತೇವ ಇರುವ ಸ್ಥಳ ಒಣಗುತ್ತದೆ. ಫಂಗಸ್ ಬೆಳವಣಿಗೆ ಕಡಿಮೆ ಆಗುತ್ತದೆ.
36
ಬೇಕಿಂಗ್ ಸೋಡಾ
ಅಡುಗೆಮನೆಯಲ್ಲಿರುವ ಅಡಿಗೆ ಸೋಡಾ ಅಡುಗೆಗೆ ಮಾತ್ರ ಉಪಯುಕ್ತವಲ್ಲ. ಇದು ವಾಸನೆ ಹೀರಿಕೊಳ್ಳುವ ಕೆಲಸ ಮಾಡುತ್ತದೆ. ಸಣ್ಣ ಪ್ಲೇಟ್ ಗೆ 2-3 ಟೀ ಚಮಚ ಅಡಿಗೆ ಸೋಡಾವನ್ನು ಹಾಕಿ. ಈ ಪ್ಲೇಟನ್ನು ಮನೆಯ ಮೂಲೆಗಳಲ್ಲಿ ಹೆಚ್ಚು ವಾಸನೆ ಬರ್ತಿರುವ ಸ್ಥಳಗಳಲ್ಲಿ ಇಡಿ. ಬಾತ್ ರೂಮ್, ಶೂ ರ್ಯಾಕ್ ಅಥವಾ ಬೀರು ಅಡಿಯಲ್ಲಿ ಇಡಬಹುದು.
ಕರ್ಪೂರ ಉಲ್ಲಾಸಕರ ಪರಿಮಳ ಬೀರುತ್ತದೆ. ಕೆಲವು ಕರ್ಪೂರದ ತುಂಡುಗಳೊಂದಿಗೆ 4-5 ಲವಂಗಗಳನ್ನು ತೆಗೆದುಕೊಂಡು ಸಣ್ಣ ಬಂಡಲ್ಗಳನ್ನು ಮಾಡಲು ಹತ್ತಿ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಈ ಬಂಡಲ್ಗಳನ್ನು ನಿಮ್ಮ ಬಟ್ಟೆಗಳ ನಡುವೆ, ಡ್ರಾಯರ್ಗಳಲ್ಲಿ ಅಥವಾ ಸೋಫಾದ ಹಿಂದೆ ಇಡಿ. ಇದು ವಾಸನೆ ಕಡಿಮೆ ಮಾಡುವುದಲ್ಲದೆ, ಬಟ್ಟೆಯಿಂದ ಕೀಟವನ್ನು ದೂರ ಇಡುತ್ತದೆ.
56
ಕಾಫಿ ಪುಡಿ ಬಳಸಿ
ಕಾಫಿ ವಾಸನೆ ನಿಮಗೆ ಇಷ್ಟವಾಗಿದ್ದರೆ ನೀವು ಇದನ್ನು ಟ್ರೈ ಮಾಡ್ಬಹುದು. ಕಾಫಿ ಪುಡಿ ತೇವಾಂಶ ಮತ್ತು ವಾಸನೆಯನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಸಣ್ಣ ಪ್ಲೇಟ್ ನಲ್ಲಿ 2 ಟೀ ಚಮಚ ಕಾಫಿ ಪುಡಿಯನ್ನು ಹಾಕಿ ಅದನ್ನು ಲಿವಿಂಗ್ ರೂಮ್ ಟೇಬಲ್ ಅಥವಾ ನಿಮ್ಮ ಮಲಗುವ ಕೋಣೆಯಲ್ಲಿ ಇಡಿ. ಇದು ರೂಮ್ ನಾದ್ಯಂತ ಗುರವಾದ ಮತ್ತು ಆಹ್ಲಾದಕರವಾದ ಸುಗಂಧ ಬೀರುತ್ತದೆ.
66
ಸಮುದ್ರದ ಉಪ್ಪು
ಮನೆಯಲ್ಲಿ ತೇವಾಂಶಕ್ಕೆ ದೊಡ್ಡ ಕಾರಣವೆಂದರೆ ಗಾಳಿಯಲ್ಲಿ ಹೆಚ್ಚುವರಿ ತೇವಾಂಶ. ಸಮುದ್ರ ಅಥವಾ ಕಲ್ಲು ಉಪ್ಪು ಈ ತೇವಾಂಶವನ್ನು ಹೀರಿಕೊಳ್ಳಲು ಚೆನ್ನಾಗಿ ಕೆಲಸ ಮಾಡುತ್ತದೆ. ಒಂದು ಬೌಲ್ ಗೆ ಸಮುದ್ರದ ಉಪ್ಪನ್ನು ಹಾಕಿ ಅದನ್ನು ರೂಮ್ ಮೂಲೆಯಲ್ಲಿ ಇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.