ಮನೆಯ ಮೂಲೆಯಲ್ಲಿ ಈ ಮಸಾಲೆ ಪದಾರ್ಥ ಇಡಿ.. ತಿಗಣೆ ಸೇರಿದಂತೆ ಚಿಕ್ಕ ಚಿಕ್ಕ ಕೀಟಗಳು ಹತ್ತಿರಕ್ಕೂ ಬರಲ್ಲ

Published : Aug 18, 2026, 01:14 PM IST

Spider Repellent Hack: ಜೇಡ ಅಥವಾ ಸಣ್ಣ ಕೀಟಗಳ ಕಾಟವೇ? ರಾಸಾಯನಿಕ ಸ್ಪ್ರೇಗಳ ಬದಲು ನಮ್ಮ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳನ್ನು ಬಳಸಿ ಕೀಟಗಳನ್ನು ನೈಸರ್ಗಿಕವಾಗಿ ದೂರವಿಡಿ! ಈ ಸಿಂಪಲ್ ಹೋಮ್ ಹ್ಯಾಕ್ ಕೀಟಗಳನ್ನ ಓಡಿಸುವುದು ಮಾತ್ರವಲ್ಲದೆ, ನಿಮ್ಮ ಮನೆಯನ್ನು ಸುಗಂಧಮಯವಾಗಿರಿಸಲು ಕೂಡ ಸಹಕಾರಿ.

PREV
14
ದಿನನಿತ್ಯ ಅಡುಗೆಗೆ ಬಳಸುವ ಮಸಾಲೆಗಳು

ದಿನನಿತ್ಯ ಅಡುಗೆಗೆ ಬಳಸುವ ಮಸಾಲೆಗಳು
ನಮ್ಮ ಮನೆಗಳಲ್ಲಿ ಅದರಲ್ಲೂ ವಿಶೇಷವಾಗಿ ಕತ್ತಲಿರುವ ಮೂಲೆಗಳು, ಕಿಟಕಿಗಳ ಸಂದಿ ಅಥವಾ ಅಡುಗೆ ಮನೆಯ ಕಪಾಟುಗಳಲ್ಲಿ ಜೇಡಗಳು ಮತ್ತು ಸಣ್ಣ ಪುಟ್ಟ ಕೀಟಗಳ ಹಾವಳಿ ಸಾಮಾನ್ಯ. ಇವುಗಳನ್ನು ಓಡಿಸಲು ನಾವು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಸ್ಪ್ರೇಗಳನ್ನು ಬಳಸುತ್ತೇವೆ. ಆದರೆ, ಇವುಗಳ ಬದಲು ನಮ್ಮ ಅಡುಗೆ ಮನೆಯಲ್ಲಿರುವ ಕೆಲವು ಮಸಾಲೆ ಪದಾರ್ಥಗಳನ್ನು ಬಳಸಿಯೇ ಅತ್ಯಂತ ಸುರಕ್ಷಿತವಾಗಿ ಕೀಟಗಳನ್ನು ದೂರವಿಡಬಹುದು.

ದಿನನಿತ್ಯ ಅಡುಗೆಗೆ ಬಳಸುವ ಲವಂಗ (Clove), ಚಕ್ಕೆ (Cinnamon) ಮತ್ತು ನಕ್ಷತ್ರ ಮೊಗ್ಗು (Star Anise) ಕೀಟಗಳ ಪಾಲಿಗೆ ಅತ್ಯಂತ ಪವರ್‌ಫುಲ್ ಬ್ಯಾರಿಯರ್ ಆಗಿ ಕೆಲಸ ಮಾಡುತ್ತವೆ.

24
ಇದನ್ನು ಬಳಸುವ ವಿಧಾನ ಹೇಗೆ?

ಇದನ್ನು ಬಳಸುವ ವಿಧಾನ ಹೇಗೆ?
ಲವಂಗ (Cloves)
ಲವಂಗವು ಅತ್ಯಂತ ತೀಕ್ಷ್ಣವಾದ ವಾಸನೆ ಹೊಂದಿರುತ್ತದೆ. ಇದರಲ್ಲಿ 'ಯೂಜೆನಾಲ್' ಎಂಬ ಅಂಶವಿದ್ದು, ಇದರ ಕಟುವಾದ ವಾಸನೆಯು ಜೇಡಗಳು, ಇರುವೆಗಳು ಮತ್ತು ನೊಣಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ.

ಚಕ್ಕೆ (Cinnamon)
ದಾಲ್ಚಿನ್ನಿಯ ಘಾಟು ವಾಸನೆಯು ಕೀಟಗಳ ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ತಲೆತಿರುಗುವಂತೆ ಮಾಡುತ್ತದೆ. ಜೇಡಗಳು ತಮ್ಮ ಕಾಲುಗಳ ಮೂಲಕ ವಾಸನೆಯನ್ನು ಗ್ರಹಿಸುತ್ತವೆ. ಆದ್ದರಿಂದ ಚಕ್ಕೆ ಇರುವ ಜಾಗಕ್ಕೆ ಅವು ಬರಲು ಹೆದರುತ್ತವೆ.

ಅನಾನಸ್ ಹೂವು (Star Anise)
ಈ ಮಸಾಲೆಯು ಲೈಕೋರೈಸ್‌ನಂತಹ ಪವರ್‌ಫುಲ್ ಸುವಾಸನೆ ಹೊಂದಿರುತ್ತದೆ. ಇದರ ವಾಸನೆಯು ಮನೆಯಲ್ಲಿ ಸುವಾಸನೆಯನ್ನು ಹರಡುವುದಲ್ಲದೆ, ಸಣ್ಣ ಪುಟ್ಟ ಹುಳುಗಳನ್ನು ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ.

34
ಇವುಗಳನ್ನು ಬಳಸುವ ವಿಧಾನ

ಇವುಗಳನ್ನು ಬಳಸುವ ವಿಧಾನ
ಸಣ್ಣ ಬಟ್ಟಲು ಅಥವಾ ಪೊಟ್ಟಣ: ಒಂದು ಸಣ್ಣ ಗಾಜಿನ ಬಟ್ಟಲಿನಲ್ಲಿ ಕೆಲವು ಲವಂಗ, ಚಕ್ಕೆ ತುಂಡುಗಳು ಮತ್ತು ನಕ್ಷತ್ರ ಮೊಗ್ಗನ್ನು ಹಾಕಿ ಜೇಡಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಜಾಗದಲ್ಲಿ ಇಡಿ ಅಥವಾ ಇವುಗಳನ್ನು ಸಣ್ಣ ಬಟ್ಟೆಯಲ್ಲಿ ಕಟ್ಟಿ (Sachet) ಕಪಾಟುಗಳಲ್ಲಿ ನೇತುಹಾಕಿ.

ನೈಸರ್ಗಿಕ ಸ್ಪ್ರೇ: ಇವೆಲ್ಲವನ್ನೂ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಆ ನೀರು ತಣ್ಣಗಾದ ಮೇಲೆ ಸ್ಪ್ರೇ ಬಾಟಲಿಗೆ ತುಂಬಿಸಿ ಕಿಟಕಿ, ಬಾಗಿಲು ಮತ್ತು ಮೂಲೆಯ ಸಂದುಗಳಿಗೆ ಸಿಂಪಡಿಸಿ.

44
ಇದರ ಪ್ರಯೋಜನಗಳೇನು?

ಇದರ ಪ್ರಯೋಜನಗಳೇನು?
ಈ ವಿಧಾನವು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, ನಿಮ್ಮ ಮನೆಯಲ್ಲಿ ಸದಾ ಕಾಲ ಒಂದು ಅದ್ಭುತವಾದ ಸುಗಂಧ ಹರಡಿರುತ್ತದೆ. ರಾಸಾಯನಿಕ ಸ್ಪ್ರೇಗಳಂತೆ ಇದು ಮಕ್ಕಳಿಗೆ ಅಥವಾ ಸಾಕುಪ್ರಾಣಿಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಇದು ಕಡಿಮೆ ವೆಚ್ಚದ ಮತ್ತು ಅತ್ಯಂತ ಪರಿಣಾಮಕಾರಿ 'ಹೋಮ್ ಹ್ಯಾಕ್' ಆಗಿದೆ. ನೀವು ಈ ಸರಳ ಕ್ರಮವನ್ನು ಈಗಾಗಲೇ ಆರಂಭಿಸಿದ್ದರೆ, ಅದರ ಫಲಿತಾಂಶ ಖಂಡಿತವಾಗಿಯೂ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ! ಒಮ್ಮೆ ಪ್ರಯತ್ನಿಸಿ ನೋಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories