ಪೌಡರ್ vs ಲಿಕ್ವಿಡ್: ವಾಷಿಂಗ್ ಮಷಿನ್, ಬಟ್ಟೆ ದೀರ್ಘಕಾಲ ಬಾಳಿಕೆ ಬರಲು ಇದೇ ಸೂಕ್ತ ಅಂದ್ರು ತಜ್ಞರು

Published : Aug 14, 2026, 09:43 PM IST

Washing machine maintenance: ವಾಷಿಂಗ್ ಮಷಿನ್ ಬಳಸುವಾಗ ಪೌಡರ್ ಅಥವಾ ಲಿಕ್ವಿಡ್ ಡಿಟರ್ಜೆಂಟ್ ಈ ಎರಡರಲ್ಲಿ ಯಾವುದು ಉತ್ತಮ ಎಂಬ ಗೊಂದಲ ನಿಮ್ಮಲ್ಲಿದೆಯೇ? ಬಟ್ಟೆಯ ಹೊಳಪು ಕಾಪಾಡಲು ಮತ್ತು ಮಷಿನ್‌ನ ದೀರ್ಘಕಾಲದ ಬಾಳಿಕೆಗೆ ಯಾವುದು ಸೂಕ್ತ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

PREV
15
ಮಷಿನ್ ಬಾಳಿಕೆಗೂ ಬಹಳ ಮುಖ್ಯ

ಮಷಿನ್ ಬಾಳಿಕೆಗೂ ಬಹಳ ಮುಖ್ಯ
ಇಂದಿನ ದಿನಗಳಲ್ಲಿ ವಾಷಿಂಗ್ ಮಷಿನ್ ಪ್ರತಿ ಮನೆಯ ಅವಶ್ಯಕತೆಯಾಗಿದೆ. ಆದರೆ ಬಟ್ಟೆಗಳನ್ನು ಒಗೆಯುವಾಗ ಪೌಡರ್ ಬಳಸಬೇಕೋ ಅಥವಾ ಲಿಕ್ವಿಡ್ ಬಳಸಬೇಕೋ ಎಂಬ ಗೊಂದಲ ಅನೇಕರಲ್ಲಿದೆ. ಸರಿಯಾದ ಡಿಟರ್ಜೆಂಟ್ ಆಯ್ಕೆ ಮಾಡುವುದು ಕೇವಲ ಬಟ್ಟೆಯ ಶುಭ್ರತೆಗೆ ಮಾತ್ರವಲ್ಲ, ನಿಮ್ಮ ಮಷಿನ್ ಬಾಳಿಕೆಗೂ ಬಹಳ ಮುಖ್ಯವಾಗಿದೆ.

25
ವಾಷಿಂಗ್ ಮಷಿನ್‌ಗೆ ಯಾವುದು ಉತ್ತಮ?

ವಾಷಿಂಗ್ ಮಷಿನ್‌ಗೆ ಯಾವುದು ಉತ್ತಮ?
ಸಾಮಾನ್ಯವಾಗಿ ಪೌಡರ್ ಮತ್ತು ಲಿಕ್ವಿಡ್ ಎರಡೂ ಕೊಳೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ. ಆದರೆ ಹೋಮ್ ಅಪ್ಲೈಯನ್ಸ್ ತಜ್ಞರ ಪ್ರಕಾರ, ಆಧುನಿಕ ವಾಷಿಂಗ್ ಮಷಿನ್‌ಗಳಿಗೆ ಪೌಡರ್ ಗಿಂತ ಲಿಕ್ವಿಡ್ ಡಿಟರ್ಜೆಂಟ್ ಬಳಸುವುದು ಹೆಚ್ಚು ಸೂಕ್ತ.

35
1. ನೀರಿನಲ್ಲಿ ಕರಗುವ ಸಾಮರ್ಥ್ಯ

1. ನೀರಿನಲ್ಲಿ ಕರಗುವ ಸಾಮರ್ಥ್ಯ
ಲಿಕ್ವಿಡ್ ಡಿಟರ್ಜೆಂಟ್ ನೀರಿನಲ್ಲಿ ತಕ್ಷಣವೇ ಕರಗುತ್ತದೆ. ಆದರೆ ಪೌಡರ್ ಡಿಟರ್ಜೆಂಟ್ ವಿಶೇಷವಾಗಿ ತಣ್ಣೀರಿನಲ್ಲಿ ಸರಿಯಾಗಿ ಕರಗುವುದಿಲ್ಲ. ಇದರಿಂದ ಬಟ್ಟೆಗಳ ಮೇಲೆ ಬಿಳಿ ಮಚ್ಚೆಗಳು ಅಥವಾ ಮರಳಿನಂತಹ ಪದರ ಉಳಿಯಬಹುದು. ಲಿಕ್ವಿಡ್ ಬಳಸುವುದರಿಂದ ಬಟ್ಟೆಗಳ ನಾರುಗಳ ಒಳಗೆ ಸುಲಭವಾಗಿ ಸೇರಿ ಬಣ್ಣವನ್ನು ಕಾಪಾಡುತ್ತದೆ.

45
2. ವಿದ್ಯುತ್ ಮತ್ತು ನೀರಿನ ಉಳಿತಾಯ

2. ವಿದ್ಯುತ್ ಮತ್ತು ನೀರಿನ ಉಳಿತಾಯ
ಪೌಡರ್ ಬಳಸಿದಾಗ ಬಟ್ಟೆಗಳಿಗೆ ಅಂಟಿಕೊಂಡಿರುವ ಸೋಪಿನ ಅಂಶವನ್ನು ಹೋಗಲಾಡಿಸಲು ಮಷಿನ್ ಹೆಚ್ಚು ಬಾರಿ ಬಟ್ಟೆಯನ್ನು ತೊಳೆಯಬೇಕಾಗುತ್ತದೆ (Extra Rinse). ಇದರಿಂದ ನೀರು ಮತ್ತು ವಿದ್ಯುತ್ ಹೆಚ್ಚು ವ್ಯರ್ಥವಾಗುತ್ತದೆ. ಲಿಕ್ವಿಡ್ ಡಿಟರ್ಜೆಂಟ್ ಸುಲಭವಾಗಿ ತೊಳೆದು ಹೋಗುವುದರಿಂದ ಸಮಯ ಮತ್ತು ಕರೆಂಟ್ ಬಿಲ್ ಎರಡೂ ಉಳಿತಾಯವಾಗುತ್ತದೆ.

55
3. ಮಷಿನ್ ಸುರಕ್ಷತೆ

3. ಮಷಿನ್ ಸುರಕ್ಷತೆ
ಪೌಡರ್ ಡಿಟರ್ಜೆಂಟ್ ಕಣಗಳು ಕಾಲಕ್ರಮೇಣ ಮಷಿನ್‌ನ ಡ್ರೈನೇಜ್ ಪೈಪ್‌ಗಳಲ್ಲಿ ಅಥವಾ ಡ್ರಮ್‌ನ ಅಂಚಿನಲ್ಲಿ ಜಿಗುಟಿನಂತೆ ಅಂಟಿಕೊಳ್ಳುತ್ತವೆ. ಇದು ಪೈಪ್ ಬ್ಲಾಕ್ ಆಗಲು ಮತ್ತು ಮಷಿನ್‌ನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಲಿಕ್ವಿಡ್ ಬಳಸುವುದರಿಂದ ಈ ಸಮಸ್ಯೆ ಇರುವುದಿಲ್ಲ ಮತ್ತು ಮಷಿನ್ ಒಳಗಿನ ಭಾಗಗಳು ಸ್ವಚ್ಛವಾಗಿರುತ್ತವೆ.

ಒಟ್ಟಾರೆ ನಿಮ್ಮ ವಾಷಿಂಗ್ ಮಷಿನ್ ದೀರ್ಘಕಾಲ ಬಾಳಿಕೆ ಬರಬೇಕೆಂದರೆ ಮತ್ತು ಬಟ್ಟೆಗಳು ಹೊಸದರಂತೆ ಇರಬೇಕೆಂದರೆ ಲಿಕ್ವಿಡ್ ಡಿಟರ್ಜೆಂಟ್ ಬಳಸುವುದು ಅತ್ಯುತ್ತಮ ಆಯ್ಕೆಯಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories