ಬೇಸಿಗೆ ಬಿಸಿಲು ಹೆಚ್ಚಾದಂತೆ ಹಾವುಗಳು ತಮ್ಮ ಹುತ್ತಗಳನ್ನು ಬಿಟ್ಟು ತಂಪಾದ ಜಾಗ ಹುಡುಕಿಕೊಂಡು ಓಡಾಡುತ್ತವೆ. ಈ ಸಮಯದಲ್ಲಿ ಮನೆಗಳಿಗೂ ಹಾವುಗಳು ಬರುವ ಸಾಧ್ಯತೆ ಇರುತ್ತದೆ. ಆದರೆ ಹಾವುಗಳನ್ನು ಓಡಿಸಲು ಕೆಲವು ನೈಸರ್ಗಿಕ ಉಪಾಯಗಳಿವೆ, ಅವುಗಳ ಬಗ್ಗೆ ನಿಮಗೆ ಗೊತ್ತಾ?
ಬೇಸಿಗೆಯಲ್ಲಿ ನೆಲದ ಉಷ್ಣಾಂಶ ಹೆಚ್ಚಾಗುವುದರಿಂದ ಹಾವುಗಳು ತಂಪಾದ ಜಾಗ ಹುಡುಕಿ ಹೊರಬರುತ್ತವೆ. ಮನೆಯ ಸುತ್ತ ನೆರಳು, ಕಸದ ರಾಶಿ, ಇಲಿಗಳ ಓಡಾಟ ಇದ್ದರೆ ಅವು ಅಲ್ಲೇ ಸುತ್ತಾಡುತ್ತವೆ. ಹಾವುಗಳು ಸಾಮಾನ್ಯವಾಗಿ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಅವುಗಳಿಗೆ ಅಪಾಯದ ಸೂಚನೆ ಸಿಕ್ಕರೆ ತಕ್ಷಣ ಕಚ್ಚುತ್ತವೆ. ಅದಕ್ಕೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
26
ಸರ್ಪಗಂಧ
ಹಾವುಗಳನ್ನು ದೂರವಿಡುವ ಗಿಡಗಳಲ್ಲಿ ಸರ್ಪಗಂಧ ಪ್ರಮುಖವಾದುದು. ಈ ಗಿಡದ ಬೇರು ಮತ್ತು ಎಲೆಗಳು ಒಂದು ರೀತಿಯ ಘಾಟು ವಾಸನೆಯನ್ನು ಹೊರಸೂಸುತ್ತವೆ. ಈ ವಾಸನೆ ಹಾವುಗಳಿಗೆ ಕಿರಿಕಿರಿ ಉಂಟುಮಾಡುವುದರಿಂದ, ಅವು ಈ ಪ್ರದೇಶದ ಹತ್ತಿರ ಬರಲು ಇಷ್ಟಪಡುವುದಿಲ್ಲ. ಸರ್ಪಗಂಧ ಗಿಡವನ್ನು ಮನೆಯ ಗೇಟ್, ಕಿಟಕಿ ಅಥವಾ ತೋಟದಲ್ಲಿ ನೆಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ. ಇದನ್ನು ಚಿಕ್ಕ ಕುಂಡಗಳಲ್ಲೂ ಬೆಳೆಸಬಹುದು.
36
ತುಳಸಿಗಿಡ
ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿರುವ ತುಳಸಿ ಗಿಡ ಕೂಡ ಹಾವುಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ತುಳಸಿಯಿಂದ ಬರುವ ವಿಶಿಷ್ಟ ವಾಸನೆಯು ಕೀಟಗಳ ಜೊತೆಗೆ ಹಾವುಗಳನ್ನೂ ಹತ್ತಿರ ಬರಲು ಬಿಡುವುದಿಲ್ಲ.
ಇನ್ನು, ಚೆಂಡು ಹೂವಿನ ಗಿಡಗಳು ಕೂಡ ಇದೇ ರೀತಿ ಕೆಲಸ ಮಾಡುತ್ತವೆ. ಚೆಂಡು ಹೂವಿನ ಗಿಡದ ಬೇರು ಮತ್ತು ಎಲೆಗಳ ವಾಸನೆ ಸರೀಸೃಪಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ತೋಟದಲ್ಲಿ ಚೆಂಡು ಹೂವು ಬೆಳೆಸಿದರೆ ಸ್ವಲ್ಪ ಮಟ್ಟಿಗೆ ರಕ್ಷಣೆ ಸಿಗುತ್ತದೆ.
56
ಮನೆಯ ಸುತ್ತಮುತ್ತ ಸ್ವಚ್ಚತೆ ಕಾಯ್ದುಕೊಳ್ಳುವುದು ಮುಖ್ಯ
ಕೇವಲ ಗಿಡಗಳನ್ನು ಬೆಳೆಸಿದರೆ ಸಾಲದು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಕೂಡ ಮುಖ್ಯ. ಕಸ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು, ಪೊದೆಗಳು ಹೆಚ್ಚಾಗಿ ಬೆಳೆಯಲು ಬಿಡಬಾರದು, ಗೋಡೆಗಳಲ್ಲಿನ ತೂತುಗಳನ್ನು ಮುಚ್ಚಬೇಕು ಮತ್ತು ಇಲಿಗಳು ಬರದಂತೆ ಎಚ್ಚರ ವಹಿಸಬೇಕು.
66
ಹಾವುಗಳ ಬಗ್ಗೆ ಜಾಗ್ರತೆ ಇರಲಿ
ರಾತ್ರಿ ವೇಳೆ ಹೊರಗೆ ಹೋಗುವಾಗ ಲೈಟ್ ಬಳಸಬೇಕು. ಇಂತಹ ನೈಸರ್ಗಿಕ ವಿಧಾನಗಳನ್ನು ಪಾಲಿಸಿದರೆ ಬೇಸಿಗೆಯಲ್ಲಿ ಹಾವುಗಳ ಭಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.