ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಯ ಕುಟುಂಬ ವಾಸಿಸೋದು 15000 ಕೋಟಿ ರೂಪಾಯಿಯ ಐಷಾರಾಮಿ ಬಂಗಲೆಯಲ್ಲಿ. ಅಂಟಿಲಿಯಾ ಎಂದು ಕರೆಯಲ್ಪಡುವ ಈ ಮನೆ ಹಲವು ವಿಶೇಷತೆಗಳಿಂದ ಕೂಡಿದೆ. ಹಾಗೆಯೇ ಈ ಮನೆಯ ಡೋರ್ ಸ್ಪೆಷಲ್ ಸೇಫ್ಟಿ ಫೀಚರ್ಸ್‌ನ್ನು ಒಳಗೊಂಡಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
27 ಅಂತಸ್ತಿನ ಕಟ್ಟಡದಲ್ಲಿ ಮುಕೇಶ್ ಅಂಬಾನಿ ಕುಟುಂವವು ವಾಸಿಸುತ್ತದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಇದ್ದಾರೆ. 568 ಫೀಟ್ ಎತ್ತರವಿರುವ ಅಂಟಿಲಿಯಾ ತಿಳಿದುಕೊಳ್ಳುವಂಥಾ ಹಲವಾರು ಹೊಸ ವಿಚಾರಗಳುವೆ. ಅದರಲ್ಲೊಂದು 15000 ಕೋಟಿ ರೂಪಾಯಿಯ ಮೌಲ್ಯದ ಐಷಾರಾಮಿ ಬಂಗಲೆಯ ಡೋರ್ ಸೇಫ್ಟಿ ಹೇಗಿದೆ ಎಂಬ ವಿಚಾರ.
ಐಷಾರಾಮಿ ಮನೆಯು 173 ಮೀಟರ್ ಎತ್ತರ ಮತ್ತು 37,000 ಚದರ ಮೀಟರ್‌ಗಳಲ್ಲಿ ಹರಡಿಕೊಂಡಿದೆ. ಎತ್ತರದ ಕಟ್ಟಡವು ಬಹು ಅಂತಸ್ತಿನ ಕಾರ್ ಪಾರ್ಕಿಂಗ್, 9 ಹೈ ಸ್ಪೀಡ್ ಎಲಿವೇಟರ್‌ಗಳು ಮತ್ತು ಸಿಬ್ಬಂದಿಗೆ ವಿಶೇಷ ಸೂಟ್‌ಗಳನ್ನು ಹೊಂದಿದೆ. 2012ರಿಂದ ಈವರೆಗೂ ಕೂಡಾ ಈ ಅಂಟಿಲಿಯಾ ಮನೆಯು ತನ್ನ ಐಷಾರಾಮಿ ವ್ಯವಸ್ಥೆಯಿಂದಲೇ ಅತೀ ಜನಪ್ರಿಯವಾಗಿದೆ.
ಅಂಬಾನಿ ಮನೆ ಅಂಟಿಲಿಯಾ ಭಾರತದಲ್ಲೇ ಅತೀ ಸೇಫೆಸ್ಟ್ ಬಂಗಲೆ ಎಂದು ಗುರುತಿಸಿಕೊಂಡಿದೆ. ಭೂಕಂಪನವಾದರೂ ಈ ಕಟ್ಟಡ ಅಲುಗಾಡಲು ಸಾಧ್ಯವಿಲ್ಲ. ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಈ ಬಂಗಲೆಯ ಭದ್ರತೆ ಸಹ ಫುಲ್ ಸೆಕ್ಯೂರ್ಡ್ ಆಗಿದೆ. ಮನೆಯ ಡೋರ್ ಸ್ಪೆಷಲ್ ಸೇಫ್ಟಿ ಫೀಚರ್ಸ್‌ನ್ನು ಒಳಗೊಂಡಿದೆ.
ಅಂಬಾನಿ ಬಂಗಲೆಯ ಗೇಟ್ ನೋಡಲು ಸಾಮಾನ್ಯವಾಗಿ ಕಂಡರೂ ಇದು ಹಲವು ಅಡ್ವಾನ್ಸ್‌ಡ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅಂಟಿಲಿಯಾದ ಮೈನ್ ಡೋರ್ ಸಂಪೂರ್ಣವಾಗಿ ಕಂಪ್ಯೂಟರೈಸ್ಡ್ ಆಗಿದೆ. ಮುಕೇಶ್ ಅಂಬಾನಿಯ ಕಾರನ್ನು ಡಿಟೆಕ್ಟ್ ಮಾಡಿದಾಗ ಡೋರ್‌ಗಳು ಅಟೋಮ್ಯಾಟಿಕ್ ಆಗಿ ಓಪನ್ ಆಗುತ್ತವೆ.
ಮುಕೇಶ್ ಅಂಬಾನಿಯವರ ಸೆಕ್ಯುರಿಟಿ ಗಾರ್ಡ್‌ಗಳು ಸಹ ಈ ಡೋರ್‌ಗಳನ್ನು ಕಂಪ್ಯೂಟರೈಸ್ಡ್ ಅಲ್ಲದೆ ಸ್ವತಃ ತೆಗೆಯುವ ಮತ್ತು ಮುಚ್ಚುವ ಆಸೆಸ್ ಹೊಂದಿದ್ದಾರೆ. ಅಂಟಿಲಿಯಾದ ಡೋರ್‌ನ್ನು ಮೆಟಲ್‌ನಲ್ಲಿ ಮಾಡಲಾಗಿದೆ. ಇದು ಬಾಂಬ್ ಅಟ್ಯಾಕ್ ಆದರೂ ತಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಅಂಟಿಲಿಯಾ ಮೈನ್ ಗೇಟ್‌ಗೆ ಯಾವುದೇ ಅಪರಿಚಿತ ಕಾರು ಬಂದರೂ ಗೇಟ್ ತೆರೆಯುವುದಿಲ್ಲ. ಮತ್ತು ಗೇಟ್ ಬೀಪ್ ಸೌಂಡ್ ಮಾಡಿ ಅಪಾಯದ ಸೂಚನೆ ಕೊಡುತ್ತದೆ. ಅಂಟಿಲಿಯಾ ಮೈನ್ ಡೋರ್‌ನಲ್ಲಿ ಹಲವಾರು ಸೆನ್ಸಾರ್‌ಗಳಿದ್ದು ಸೆಕ್ಯುರಿಟಿಗಳಿಗೆ ಸೂಚನೆ ಕೊಡುತ್ತದೆ.