ಅಚ್ಚರಿಯಾದ್ರೂ ಸತ್ಯವಂತೆ, ಉಳಿದ ಇಡ್ಲಿ, ದೋಸೆ ಹಿಟ್ಟನ್ನು ಹೀಗೂ ಬಳಕೆ ಮಾಡ್ತಾರಂತೆ!

Published : Jun 24, 2025, 12:11 PM IST

Weird and Funny Kitchen Hacks: ಇಡ್ಲಿ ಹಿಟ್ಟು ತುಂಬಾ ಹುಳಿ ಆಗಿಬಿಟ್ಟರೆ ಅದನ್ನ ವೇಸ್ಟ್ ಮಾಡದೇ ಈ ರೀತಿಯಾಗಿಯೂ ಯೂಸ್ ಮಾಡಬಹುದು ಗೊತ್ತಾ? ಈ ಕಿಚನ್ ಹ್ಯಾಕ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಹೇಗೆ ಅಂತ ಈ ಪೋಸ್ಟ್ ಅಲ್ಲಿ ನೋಡೋಣ.

PREV
15
ಹುಳಿ ಇಡ್ಲಿ ಹಿಟ್ಟಿನಿಂದ ಸ್ವಚ್ಛತಾ ಟಿಪ್ಸ್

ಸಾಮಾನ್ಯವಾಗಿ ನಮ್ಮೆಲ್ಲರ ಮನೆಯಲ್ಲೂ ಇಡ್ಲಿ, ದೋಸೆ ಹಿಟ್ಟು ರುಬ್ಬಿ ಇಟ್ಟಿರ್ತೀವಿ. ಫ್ರಿಡ್ಜ್ ಅಲ್ಲಿ ಇಟ್ಟು ಯೂಸ್ ಮಾಡಿದ್ರೂ ಜಾಸ್ತಿ 3 ದಿನಕ್ಕೆ ಹುಳಿ ಆಗುತ್ತೆ. ಹೀಗಾಗಿ ಹಲವರು ಹುಳಿ ಹಿಟ್ಟನ್ನ ಯೂಸ್ ಮಾಡದೆ ಎಸೆದು ಬಿಡ್ತಾರೆ. ಯಾಕಂದ್ರೆ ಹುಳಿ ಹಿಟ್ಟಲ್ಲಿ ಇಡ್ಲಿ ಅಥವಾ ದೋಸೆ ಮಾಡಿ ತಿಂದ್ರೆ ಹೊಟ್ಟೆ ನೋವು, ಅಸಿಡಿಟಿ, ಅಜೀರ್ಣ ತೊಂದರೆಗಳು ಬರುತ್ತೆ. 

ನೀವು ಕೂಡ ಹುಳಿ ಇಡ್ಲಿ ಹಿಟ್ಟನ್ನ ಎಸೆಯುತ್ತೀರಾ? ಇನ್ಮೇಲೆ ಹಾಗೆ ಮಾಡ್ಬೇಡಿ. ಒಂದು ಕಪ್ ಹುಳಿ ಇಡ್ಲಿ ಹಿಟ್ಟನ್ನ ಇಟ್ಟುಕೊಂಡು ಮನೆ ಸ್ವಚ್ಛ ಮಾಡಬಹುದು ಗೊತ್ತಾ? ಹೇಗೆ ಅಂತ ಈ ಪೋಸ್ಟ್ ಅಲ್ಲಿ ನೋಡೋಣ.

25
ಬಾತ್ರೂಮ್ ಬಕೆಟ್ ಅಲ್ಲಿರೋ ಕಲೆಗಳನ್ನ ಹೋಗಲಾಡಿಸಿ :

ಬಾತ್ರೂಮ್ ಅಲ್ಲಿ ಯೂಸ್ ಮಾಡೋ ಬಕೆಟ್ ಅಲ್ಲಿ ತುಂಬಾ ಕಲೆಗಳು ಇರುತ್ತೆ. ಡೈಲಿ ಯೂಸ್ ಮಾಡೋದ್ರಿಂದ ಅದರ ಒಳಗೆ ಮತ್ತು ಹೊರಗೆ ಜಾರುತ್ತಿರುತ್ತೆ. ಉಪ್ಪು ನೀರಿನ ಕಲೆಗಳು ಕೂಡ ಇರುತ್ತೆ. ಅದನ್ನ ಕ್ಲೀನ್ ಮಾಡೋಕೆ ಹುಳಿ ಇಡ್ಲಿ ಹಿಟ್ಟನ್ನ ಯೂಸ್ ಮಾಡಬಹುದು. 

ಇಡ್ಲಿ ಹಿಟ್ಟನ್ನ ಬಕೆಟ್ ಒಳಗೆ ಮತ್ತು ಹೊರಗೆ ಹಚ್ಚಿ. 15 ನಿಮಿಷ ಬಿಟ್ಟು ಬ್ರಷ್ ಇಂದ ಚೆನ್ನಾಗಿ ಉಜ್ಜಿದ್ರೆ ಬಕೆಟ್ ಅಲ್ಲಿರೋ ಕಲೆಗಳು,  ಉಪ್ಪು ನೀರಿನ ಕಲೆ ಎಲ್ಲಾ ಹೋಗುತ್ತೆ. ನಂತರ ಸೋಪ್ ಹಾಕಿ ತೊಳೆಯಿರಿ. ಬಕೆಟ್ ಹೊಸದಾಗಿ ಕಾಣುತ್ತದೆ.

35
ಕಿಚನ್ ಸಿಂಕ್ ಕ್ಲೀನ್ ಮಾಡಬಹುದು

ಕಿಚನ್ ಸಿಂಕ್ ಯಾವಾಗಲೂ ತೇವವಾಗಿ, ಜಿಗುಟಾಗಿ, ದುರ್ವಾಸನೆ ಬರುತ್ತಿರುತ್ತೆ. ಹುಳಿ ಇಡ್ಲಿ ಹಿಟ್ಟನ್ನ ಇಟ್ಟುಕೊಂಡು ಇದನ್ನ ಸರಿ ಮಾಡಬಹುದು. ಸಿಂಕ್ ಅಲ್ಲಿ ಏನೂ ಇಡದೆ ಸ್ವಲ್ಪ ನೀರು ಹಾಕಿ ತೇವ ಮಾಡಿ, ಸುಮಾರು 5 ಚಮಚ ಹುಳಿ ಇಡ್ಲಿ ಹಿಟ್ಟನ್ನ ಸಿಂಕ್ ಗೆಲ್ಲಾ ಹಚ್ಚಿ. 

15 ನಿಮಿಷ ಬಿಟ್ಟು ಸ್ಕ್ರಬ್ಬರ್ ಇಂದ ಚೆನ್ನಾಗಿ ಉಜ್ಜಬೇಕು. ನಂತರ ಸೋಪ್ ನೀರಿನಿಂದ ತೊಳೆಯಿರಿ. ಕಿಚನ್ ಸಿಂಕ್ ಹೊಸದಾಗಿ ಕಾಣುತ್ತೆ ಮತ್ತು ದುರ್ವಾಸನೆ ಬರದೆ, ಒಳ್ಳೆ ವಾಸನೆ ಬರುತ್ತೆ. ವಾರಕ್ಕೆ ಒಮ್ಮೆ ಹೀಗೆ ಕ್ಲೀನ್ ಮಾಡಬಹುದು.

45
ನೀರಿನ ಪೈಪ್ ಕ್ಲೀನ್ ಮಾಡಬಹುದು

ನೀರಿನ ಪೈಪ್ ಎಷ್ಟೇ ಉಜ್ಜಿ ಸ್ವಚ್ಛ ಮಾಡಿದ್ರೂ ಅದರಲ್ಲಿರೋ ಕಲೆ ಮತ್ತು ತುಕ್ಕು ಹಾಗೇ ಇರುತ್ತೆ. ಇದನ್ನ ಕ್ಲೀನ್ ಮಾಡೋಕೆ ಹುಳಿ ಇಡ್ಲಿ ಹಿಟ್ಟನ್ನ ಯೂಸ್ ಮಾಡಬಹುದು. ಒಂದು ಚಮಚ ಹುಳಿ ಇಡ್ಲಿ ಹಿಟ್ಟಿಗೆ ೪ ಚಮಚ ನೀರು ಮತ್ತು ಸ್ವಲ್ಪ ಡಿಶ್ ವಾಶ್ ಲಿಕ್ವಿಡ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನ ಸ್ಕ್ರಬ್ ಸಹಾಯದಿಂದ ಪೈಪ್ ಗೆ ಚೆನ್ನಾಗಿ ಉಜ್ಜಬೇಕು. 15 ನಿಮಿಷ ಬಿಟ್ಟು ತೊಳೆದ್ರೆ ಪೈಪ್ ಹೊಸದಾಗಿ ಹೊಳೆಯುತ್ತೆ.

55
ಮನೆಯ ನೆಲ ಒರೆಸಬಹುದು

ಮನೆಯ ನೆಲ ಒರೆಸೋಕೆ ತರಹೇವಾರಿ ಫ್ಲೋರ್ ಕ್ಲೀನರ್ ಗಳು ಮಾರ್ಕೆಟ್ ಅಲ್ಲಿ ಸಿಗುತ್ತೆ. ಆದ್ರೆ ದುಡ್ಡು ಖರ್ಚು ಮಾಡದೆ ಹುಳಿ ಇಡ್ಲಿ ಹಿಟ್ಟನ್ನ ಇಟ್ಟುಕೊಂಡು ನೆಲ ಸ್ವಚ್ಛ ಮಾಡಬಹುದು. ಅರ್ಧ ಬಕೆಟ್ ನೀರಿಗೆ 4 ಚಮಚ ಹುಳಿ ಇಡ್ಲಿ ಹಿಟ್ಟು ಮತ್ತು 1 ಚಮಚ ಬೇಕಿಂಗ್ ಸೋಡಾ, 1 ಚಮಚ ಶಾಂಪೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನ ಇಟ್ಟುಕೊಂಡು ನೆಲ ಒರೆಸಿದ್ರೆ ನೆಲದಲ್ಲಿರೋ ಕಲೆಗಳು ಹೋಗಿ ನೆಲ ಹೊಳೆಯುತ್ತೆ. ಮನೆ ಕೂಡ ಒಳ್ಳೆ ವಾಸನೆ ಬರುತ್ತೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories