Kitchen Hacks: ನೆಲದ ಮೇಲೆ ಎಣ್ಣೆ ಬಿದ್ರೆ ತೆಗೆಯೋದು ಹೇಗೆ? ಏನಾದ್ರೂ ಚೆಲ್ಲಿದ್ರೆ ಕ್ಲೀನ್​​ ಮಾಡೋದು ಹೇಗೆ

Published : Sep 25, 2026, 07:32 PM IST

ಮನೆಯ ನೆಲದ ಮೇಲೆ ಎಣ್ಣೆ, ನೈಲ್ ಪಾಲಿಷ್ ಅಥವಾ ಇತರ ಕಲೆಗಳು ಬಿದ್ದಾಗ ಸುಲಭವಾಗಿ ಸ್ವಚ್ಛಗೊಳಿಸುವ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ. ಅಕ್ಕಿ ಹಿಟ್ಟು, ಉಪ್ಪು, ನಿಂಬೆಹಣ್ಣು, ವಿನೆಗರ್ ಮತ್ತು ಅಡುಗೆ ಸೋಡಾವನ್ನು ಬಳಸಿ ಕಲೆಗಳನ್ನು ನಿವಾರಿಸುವ ಸರಳ ಮನೆಮದ್ದುಗಳ ಬಗ್ಗೆ ಮಾಹಿತಿ ನೀಡಲಾಗಿದೆ.

PREV
17
ನೆಲದ ಮೇಲೆಲ್ಲಾ ಕಲೆಯ ಚಿಂತೆ ಬಿಡಿ

ಎಷ್ಟೇ ಜಾಗರೂಕತೆಯಿಂದ ಇದ್ದರೂ ಮನೆಯಲ್ಲಿ ಕೆಲಸ ಮಾಡುವಾಗ ಏನಾದರೊಂದು ಚೆಲ್ಲುವುದು ಇದ್ದೇ ಇರುತ್ತದೆ. ಆದರೆ ಇದು ಎಣ್ಣೆಯಂಥ ಪದಾರ್ಥವಾಗಿದ್ದರೆ ಮಾತ್ರ ಡೇಂಜರ್​ ಆಗುವುದು ಸಹಜ. ಗೊತ್ತಿಲ್ಲದೇ ಅದರ ಮೇಲೆ ಕಾಲಿಟ್ಟರೆ ಜಾರಿಬಿದ್ದು ಸೊಂಟ ಮುರಿದು ಕೂಡ ಹೋಗಬಹುದು. ಸೀರಿಯಲ್​ಗಳಲ್ಲಿ ಲೇಡಿ ವಿಲನ್​ಗಳ ಈ ಟ್ರಿಕ್ಸ್​ ನೋಡಿರುತ್ತೀರಿ ಅಲ್ಲವೆ, ಅಲ್ಲಿ ಕೊನೆಗೆ ಹೆಚ್ಚಾಗಿ ವಿಲನ್ನೇ ಬಿದ್ದುಬಿಡ್ತಾಳೆ. ಆದರೆ ರಿಯಲ್​ ಲೈಫ್​ನಲ್ಲಿ ಹಾಗೆ ಆಗಲ್ವಲ್ಲಾ! ಅದೂ ಅಲ್ಲದೇ, ಮನೆಯಲ್ಲಿ ಕೆಲಸ ಮಾಡುವಾಗ ನೆಲದ ಮೇಲೆ ಏನೇನೋ ಬೀಳುವುದು ಸಹಜ. ಹಾಗಿದ್ದರೆ ಅವುಗಳನ್ನೆಲ್ಲಾ ಹೇಗೆ ಕ್ಲೀನ್​ ಮಾಡಬೇಕು ಎನ್ನುವ ಕೆಲವೊಂದು ಮಾಹಿತಿ ಇಲ್ಲಿ ನೀಡಲಾಗಿದೆ.

27
ಎಣ್ಣೆ ಬಿದ್ದರೆ ಏನು ಮಾಡಬೇಕು

ಮೊದಲೇ ಹೇಳಿದಂತೆ ಎಣ್ಣೆ ಸಿಕ್ಕಾಪಟ್ಟೆ ಡೇಂಜರ್​. ಒಂದು ವೇಳೆ ಯಾವುದೇ ರೀತಿಯ ಎಣ್ಣೆ ಬಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಹಾಗೆಯೇ ಬಟ್ಟೆಯಿಂದ ಒರೆಸಲು ಹೋಗಬೇಡಿ. ನೀರು ಹಾಕಿ ಒರೆಸುವ ಗೋಜು ಬೇಡವೇ ಬೇಡ. ಹೀಗೆ ಮಾಡಿದ್ರೆ ಎಣ್ಣೆ ಮತ್ತಷ್ಟು ಸ್ಪ್ರೆಡ್​ ಆಗಿ ಅಪಾಯ ತಪ್ಪಿದ್ದಲ್ಲ. ಅದರ ಬದಲು ಎಣ್ಣೆ ಬಿದ್ದ ಜಾಗದ ಮೇಲೆ ಒಂದಿಷ್ಟು ಅಕ್ಕಿ ಹಿಟ್ಟನ್ನು ಚೆನ್ನಾಗಿ ಚೆಲ್ಲಿ. ಅದು ಎಲ್ಲಾ ಎಣ್ಣೆಯನ್ನೂ ಹೀರಿಕೊಳ್ಳುತ್ತದೆ. ಅದು ಸಂಪೂರ್ಣ ಎಣ್ಣೆ ಹೀರಿಕೊಂಡ ಬಳಿಕವಷ್ಟೇ ನಿಧಾನವಾಗಿ ಬಟ್ಟೆಯಿಂದ ಅದನ್ನೆಲ್ಲಾ ತೆಗೆದು ಕ್ಲೀನ್​ ಮಾಡಿ.

37
ನೈಲ್​ ಪಾಲಿಷ್​ ಕಲೆ

ಒಂದು ವೇಳೆ ನೈಲ್​ ಪಾಲಿಷ್​ ಹಚ್ಚುವಾಗ ನೆಲದ ಮೇಲೆ ಚಲ್ಲಿದರೆ, ಅದನ್ನು ಹಾಗೆಯೇ ಒರೆಸಿದರೆ ಎಡವಟ್ಟಾಗೋದು ಗ್ಯಾರೆಂಟಿ. ಅದರ ಬದಲು ಚೆಲ್ಲಿದ ನೈಲ್​ ಪಾಲಿಷ್​ ಮೇಲೆ ಸ್ವಲ್ಪ ಉಪ್ಪು ಹಾಕಿ. ಅದು ಹೀರಿಕೊಂಡ ಬಳಿಕ ಬಟ್ಟೆಯಿಂದ ಒರೆಸಿ.

47
ನಿಂಬೆ ಹಣ್ಣಿನಿಂದ ಸ್ವಚ್ಛತೆ

ಯಾವುದಾದರೂ ಚಿಕ್ಕ ಪುಟ್ಟ ಕಲೆಗಳು ಬಿದ್ದಿದ್ದರೆ ಅದಕ್ಕೆ ನಿಂಬೆ ಹಣ್ಣು ರಾಮ ಬಾಣ. ನೆಲದ ಮೇಲಿರುವ ಕಲೆಯನ್ನು ನೀವು ನಿಂಬೆ ಸಹಾಯದಿಂದ ತೆಗೆಯಬಹುದು. ನೆಲದ ಸ್ವಚ್ಛತೆಗೆ ನಿಂಬೆ ರಸ ಬಳಸಿದ್ರೆ ಅಡುಗೆಮನೆಯಲ್ಲಿ ಸೊಳ್ಳೆ ನೊಣಗಳು ಕಡಿಮೆಯಾಗುತ್ತವೆ. ಕಲೆ ತೆಗೆಯಲು ಎರಡು ಟೀ ಚಮಚ ನಿಂಬೆ ರಸಕ್ಕೆ ಸ್ವಲ್ಪ ವಿನೆಗರ್ ಸೇರಿಸಿ ಮಿಕ್ಸ್ ಮಾಡಿ. ಕಲೆಯಾದ ಜಾಗಕ್ಕೆ ದ್ರಾವಣವನ್ನು ಸಿಂಪಡಿಸಿ ಮತ್ತು ಸ್ವಲ್ಪ ಸಮಯದ ನಂತರ ಅದನ್ನು ಸ್ವಚ್ಛಗೊಳಿಸಿ. ಇದ್ರಿಂದ ನೆಲದ ಮೇಲಿರುವ ಕಲೆ ಮಾಯವಾಗುತ್ತದೆ.

57
ಗೋಡೆಯ ಮೇಲಿನ ಕಲೆಗೆ

ಅಡುಗೆಮನೆಯಲ್ಲಿ ಆಹಾರ ತಯಾರಿಸುವಾಗ ಅಡುಗೆಮನೆಯ ಗೋಡೆಗಳು, ಗ್ಯಾಸ್ ಒಲೆ ಮೇಲೆ ಕಲೆಗಳಾಗುತ್ತವೆ. ಅವುಗಳನ್ನು ನಿಂಬೆ ಸಹಾಯದಿಂದ ಸ್ವಚ್ಛಗೊಳಿಸಬಹುದು. ಕಲೆಯಾದ ಜಾಗಕ್ಕೆ ನಿಂಬೆ ರಸಕ್ಕೆ ಉಪ್ಪು ಬೆರೆಸಿದ ಮಿಶ್ರಣವನ್ನು ಹಚ್ಚಿ. 10-15 ನಿಮಿಷಗಳ ಕಾಲ ಅದನ್ನು ಹಾಗೆ ಬಿಡಿ. ನಂತ್ರ ಬಟ್ಟೆಯಿಂದ ಸ್ವಚ್ಛಗೊಳಿಸಿ.

67
ವಿನೆಗರ್​ ಟಿಪ್ಸ್​

ನೀವು ನೆಲ ಒರೆಸುವಾಗ ನೀರಿಗೆ ಬಿಳಿ ವಿನೆಗರ್ ಅನ್ನು ಸೇರಿಸಿ. ಇದು ನೈಸರ್ಗಿಕ ಆಮ್ಲವಾಗಿದ್ದು, ಅನೇಕ ರೀತಿಯ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೇ ಒಂದು ಬಾಟಲಿಯಲ್ಲಿ ಸ್ವಲ್ಪ ವಿನೆಗರ್ ಮತ್ತು ಸ್ವಲ್ಪ ನೀರು ಬೆರೆಸಿ ತುಂಬಿಸಿ. ಹೆಚ್ಚಿನ ಕಲೆ ಇರುವಲ್ಲಿ, ಸ್ವಲ್ಪ ವಿನೆಗರ್ ನೀರನ್ನು ಹಾಕಿ ಆ ಜಾಗವನ್ನು ಬಟ್ಟೆಯಿಂದ ಒರೆಸಿ. ಹೀಗೆ ಮಾಡುವುದರಿಂದ ನೆಲದಿಂದ ಕಲೆಗಳು ನಿವಾರಣೆಯಾಗುತ್ತವೆ.

77
ಯಾವುದೇ ಕಲೆಗಳಿದ್ದರೆ ಸುಲಭದಲ್ಲಿ ಹೋಗಲು

ನೆಲ ಒರೆಸುವಾಗ ಈ ಟ್ರಿಕ್ಸ್​ ಫಾಲೋ ಮಾಡಿದರೆ ನೆಲದ ಮೇಲೆ ಇರುವ ಕಲೆಗಳು ಸುಲಭದಲ್ಲಿ ಹೋಗುತ್ತವೆ. ಅಡುಗೆ ಸೋಡಾ ಮತ್ತು ನೀರನ್ನು ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕಲೆ ಇರುವ ಜಾಗಕ್ಕೆ ಹಚ್ಚಿ. ಕೆಲವು ನಿಮಿಷಗಳ ಕಾಲ ಬಿಡಿ. ನಂತರ ಒದ್ದೆಯಾದ ಸ್ಪಾಂಜ್ ಅಥವಾ ಬಟ್ಟೆಯಿಂದ ನಿಧಾನವಾಗಿ ಆ ಜಾಗವನ್ನು ಉಜ್ಜಿಕೊಳ್ಳಿ. ಸ್ವಲ್ಪ ಸಮಯದ ನಂತರ ಅದನ್ನು ನೀರಿನಿಂದ ತೊಳೆಯಿರಿ. ಇದರಿಂದ ಟೈಲ್ಸ್ ಮೇಲಿನ ಕೊಳೆ ಮತ್ತು ಕಲೆಗಳು ನಿವಾರಣೆಯಾಗಿ ಟೈಲ್ಸ್ ಹೊಳೆಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories