ನಗರ ಪ್ರದೇಶಗಳಲ್ಲಿ ಗಾರ್ಡನಿಂಗ್ ಹವ್ಯಾಸ ಹೆಚ್ಚಾಗಿದ್ದು, ಗುಲಾಬಿ ಗಿಡದಲ್ಲಿ ಹೂಗಳಿಲ್ಲದಿದ್ದರೆ ನಿರಾಸೆಯಾಗುತ್ತದೆ. ಗುಲಾಬಿ ಗಿಡದ ಬುಡದಲ್ಲಿ ಒಂದು ತರಕಾರಿ ಬೆಳೆಸುವುದರಿಂದ ಗಿಡದ ತುಂಬೆಲ್ಲಾ ಹೂಗಳನ್ನು ಪಡೆಯಬಹುದು. ಇದು ಗಿಡದ ಬೆಳವಣಿಗೆಗೆ ಸಹಾಯ ಮಾಡಿ ಕೀಟನಾಶಕವಾಗಿಯೂ ಕೆಲಸ ಮಾಡುತ್ತವೆ.
ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಗಾರ್ಡನಿಂಗ್ ಒಂದೊಳ್ಳೆಯ ಹವ್ಯಾಸ ಆಗಿದೆ. ಮನೆ ಅಂಗಳ ಅಥವಾ ಬಾಲ್ಕನಿಯ ಅಂದ ಹೆಚ್ಚಿಸಲು ಬಣ್ಣ ಬಣ್ಣದ ಹೂವಿನ ಗಿಡಗಳನ್ನು ಪ್ಲಾಂಟ್ ಮಾಡುತ್ತಾರೆ. ಆದ್ರೆ ಮಾಹಿತಿಯ ಕೊರತೆಯಿಂದಾಗಿ ಗಿಡಗಳಿದ್ರೂ, ಹೂಗಳಿರಲ್ಲ. ಅದರಲ್ಲೂ ಗುಲಾಬಿ ಗಿಡದಲ್ಲಿ ಹೂಗಳಿಲ್ಲ ಅಂದ್ರೆ ಹೆಚ್ಚು ನಿರಾಸೆಯಾಗುತ್ತದೆ.
25
ಹೂಗಳಿಗಾಗಿ ಸೂಪರ್ ಟ್ರಿಕ್ಸ್
ಇಂದು ನಾವು ಗುಲಾಬಿ ಗಿಡದಲ್ಲಿ ಹೂಗಳು ಬಿಡಲು ಏನು ಮಾಡಬೇಕೆಂದು ಹೇಳುತ್ತಿದ್ದೇವೆ. ಈ ಒಂದು ಟ್ರಿಕ್ಸ್ ಫಾಲೋ ಮಾಡೋದರಿಂದ ಗಿಡದ ತುಂಬೆಲ್ಲಾ ಹೂಗಳನ್ನು ಕಾಣಬಹುದು. ಇದರಿಂದ ನಿಮ್ಮ ಮನೆಯಂಗಳ ಅಥವಾ ಬಾಲ್ಕನಿ ಅಥವಾ ಟರೇಸ್ ಅತ್ಯಂತ ಸುಂದರವಾಗಿ ಕಾಣಿಸುತ್ತದೆ.
35
ಈರುಳ್ಳಿ ಬೀಜ
ಗಿಡದ ತುಂಬೆಲ್ಲಾ ಗುಲಾಬಿ ಹೂಗಳು ಬೇಕಿದ್ರೆ, ಅದರ ಬುಡದಲ್ಲಿ ಒಂದು ಅಥವಾ ಎರಡು ಈರುಳ್ಳಿ ಬೆಳೆಸಬೇಕು. ಮಾರುಕಟ್ಟೆಯಲ್ಲಿ ಈರುಳ್ಳಿ ಬೀಜಗಳು ಸಿಗುತ್ತವೆ. ಗುಲಾಬಿ ಗಿಡದ ಬುಡದಲ್ಲಿಯೇ ಈರುಳ್ಳಿ ಬೀಜ ಹಾಕಿ, ಮಣ್ಣಿನ ಪದರಿನಿಂದ ಮುಚ್ಚಿ, ನೀರು ಚುಮುಕಿಸಿಬೇಕು. ಈರುಳ್ಳಿ ಪೈರು ಬೆಳೆದಂತೆ, ಇತ್ತ ಗುಲಾಬಿ ಗಿಡ ಹೂಗಳಿಂದ ತುಂಬಿಕೊಳ್ಳುತ್ತದೆ.
ಈರುಳ್ಳಿಯಲ್ಲಿರುವ ಪೊಟ್ಯಾಸಿಯಮ್ (Potassium) ಗುಲಾಬಿ ಗಿಡದಲ್ಲಿ ಹೂಗಳನ್ನು ಬಿಡಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್ ಗುಲಾಬಿ ಗಿಡದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಈರುಳ್ಳಿಯಲ್ಲಿ ರಂಜಕದ ಅಂಶ ಗಿಡದ ಬೇರುಗಳು ಬಲವಾಗಿ ಬೆಳೆಯಲು ಮತ್ತು ಹರಡಲು ಸಹಾಯ ಮಾಡುತ್ತದೆ. ಈರುಳ್ಳಿಯಲ್ಲಿನ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅಂ
55
ಮಣ್ಣಿನ ಆರೋಗ್ಯ ಕಾಪಾಡೋ ಈರುಳ್ಳಿ
ಈರುಳ್ಳಿಯಲ್ಲಿರುವ ರಂಜಕದ ಅಂಶ ನೈಸರ್ಗಿಕ ಕೀಟನಾಶಕ ಮತ್ತು ಶಿಲೀಂಧ್ರನಾಶಕವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಗುಲಾಬಿ ಗಿಡದ ಬೆಳವಣಿಗೆಗೆ ಈರುಳ್ಳಿ ಸಹಾಯ ಮಾಡುತ್ತದೆ. ಒಂದು ವೇಳೆ ಈರುಳ್ಳಿ ಬೀಜಗಳು ನಿಮಗೆ ಸಿಗದಿದ್ರೆ, ಮನೆಯಲ್ಲಿರುವ ಈರುಳ್ಳಿಯನ್ನೇ ಮಣ್ಣಿನಲ್ಲಿ ನಾಟಿ ಮಾಡಬಹುದು ಅಥವಾ ಮಣ್ಣಿನಲ್ಲಿ ಈರುಳ್ಳಿಯನ್ನು ಹೂಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.