ಬಿಳಿ ಪ್ಲಾಸ್ಟಿಕ್ ಕುರ್ಚಿಗಳ ಮೇಲಿನ ಹಠಮಾರಿ ಕಲೆಗಳು ಮತ್ತು ಹಳದಿ ಬಣ್ಣವನ್ನು ತೆಗೆದುಹಾಕಲು ಸರಳ ಮನೆಮದ್ದುಗಳನ್ನು ಬಳಸಬಹುದು. ಈ ವಿಧಾನಗಳಿಂದ ಕಡಿಮೆ ಸಮಯದಲ್ಲಿ ಕುರ್ಚಿಗಳಿಗೆ ಹೊಸ ಹೊಳಪನ್ನು ನೀಡಬಹುದು.
ಬಿಳಿ ಬಣ್ಣದ ಪ್ಲಾಸ್ಟಿಕ್ ಕುರ್ಚಿ ಸ್ವಚ್ಛಗೊಳಿಸುವ ವಿಧಾನಗಳು
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ಕುರ್ಚಿಗಳಿರುತ್ತವೆ. ಮನೆಯಲ್ಲಿದ್ರೂ ಈ ಕುರ್ಚಿಗಳು ಕೊಳಕು ಆಗುತ್ತವೆ. ಕುರ್ಚಿ ಹಿಂಭಾಗ ಬಹುತೇಕರು ಗಮನಿಸಿರುವುದಿಲ್ಲ. ನೋಡುವಷ್ಟರಲ್ಲಿ ಬಿಳಿ ಬಣ್ಣ ಕಪ್ಪು ಅಥವಾ ಹಳದಿಯಾಗಿ ಬದಲಾಗಿರುತ್ತವೆ. ಕೆಲವೊಮ್ಮೆ ಎಷ್ಟೇ ಉಜ್ಜಿದ್ರೂ ಕುರ್ಚಿಗಳು ಕ್ಲೀನ್ ಆಗಲ್ಲ. ಈ ಸಂದರ್ಭದಲ್ಲಿ ಕೆಲವು ಸರಳ ವಿಧಾನಗಳಿಂದ ಕುರ್ಚಿಗಳನ್ನು ಸುಲಭ ಮತ್ತು ಕಡಿಮೆ ಸಮಯದಲ್ಲಿ ಕ್ಲೀನ್ ಮಾಡಬಹುದು. ಆ ವಿಧಾನಗಳು ಯಾವವು ಎಂದು ನೋಡೋಣ ಬನ್ನಿ.
25
ಅಡುಗೆಸೋಡಾ ಬಳಕೆ ಮಾಡಿ
ಬಿಳಿ ಕುರ್ಚಿಗಳ ಮೇಲೆ ಮೊಂಡು ಕಲೆಗಳಿದ್ರೆ ಮನೆಯಲ್ಲಿರುವ ಅಡುಗೆಸೋಡಾ ಅಂದ್ರೆ ಬೇಕಿಂಗ್ ಸೋಡಾ ಬಳಕೆ ಮಾಡಹುದು. ಬೇಕಿಂಗ್‌ಸೋಡಾಗೆ ಸ್ವಲ್ಪವೇ ನೀರು ಸೇರಿಸಿ ಪೇಸ್ಟ್ ರೀತಿ ಸಿದ್ಧಪಡಿಸಿಕೊಳ್ಳಿ. ಅನಂತರ ಕುರ್ಚಿ ಮೇಲಿರುವ ಕಲೆ ಮೇಲೆ ಸ್ಪಾಂಜ್ ಅಥವಾ ಬ್ರಷ್‌ನಿಂದ ಪೇಸ್ಟ್ ಸವರಬೇಕು. 10 ರಿಂದ 15 ನಿಮಿಷ ಬಳಿಕ ಸ್ಪಾಂಜ್/ಬ್ರಷ್‌ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ ತೊಳೆದ್ರೆ ಕಲೆಗಳೆಲ್ಲಾ ಮಾಯವಾಗುತ್ತವೆ.
35
ನಿಂಬೆ ರಸ ಮತ್ತು ಉಪ್ಪು
ಇಡೀ ಕುರ್ಚಿಯೆಲ್ಲಾ ಹಳದಿಯಾಗಿದ್ರೆ ಅಥವಾ ಅಲ್ಲಲ್ಲಿ ಕಲೆಗಳಿದ್ರೆ ನಿಂಬೆ ರಸ ಮತ್ತು ಉಪ್ಪು ಬಳಸಿ. ಮೊದಲಿಗೆ ನಿಂಬೆಹಣ್ಣನ್ನು ಎರಡು ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಈಗ ನಿಂಬೆಹಣ್ಣಿನ ಮೇಲೆ ಉಪ್ಪು ಹಚ್ಚಿ ಕುರ್ಚಿ ಮೇಲೆ ನಯವಾಗಿ ಉಜ್ಜಬೇಕು. ನಂತರ 10 ನಿಮಿಷಗಳ ಬಳಿಕ ಸ್ವಚ್ಛವಾದ ನೀರಿನಿಂದ ತೊಳದ್ರೆ ಕುರ್ಚಿ ಸ್ವಚ್ಛವಾಗುತ್ತದೆ.
ಒಂದು ಅಥವಾ ಎರಡು ಕುರ್ಚಿಗಳಿದ್ರೆ ಮೇಲಿನ ಎರಡು ವಿಧಾನಗಳನ್ನು ಬಳಸಿಕೊಳ್ಳಬಹುದು. ಆದ್ರೆ ಕುರ್ಚಿಗಳ ಸಂಖ್ಯೆ ಹೆಚ್ಚಿದ್ದಾಗ ಉಗುರು ಬೆಚ್ಚಗಿನ ನೀರಿಗೆ ಡಿಟರ್ಜೆಂಟ್ ಸೇರಿಸಿಕೊಳ್ಳಿ. ನಂತರ ಈ ನೀರನ್ನು ಕುರ್ಚಿಗಳ ಮೇಲೆ ಹಾಕಿ 10 ನಿಮಿಷ ಬಿಡಿ. ಆನಂತರ ಉಜ್ಜಿ ಸ್ವಚ್ಛವಾದ ನೀರಿನಿಂದ ತೊಳೆದ್ರೆ ಕೊಳೆಯೆಲ್ಲಾ ಹೋಗುತ್ತದೆ.
55
ಸ್ವಚ್ಛಗೊಳಿಸಿದ ನಂತ್ರ ಹೀಗೆ ಮಾಡಿ
ಕುರ್ಚಿಗಳನ್ನು ತೊಳೆಯಲು ಯಾವುದೇ ಕೆಮಿಕಲ್ ಬಳಕೆ ಮಾಡೋದನ್ನು ತಪ್ಪಿಸೋದು ಒಳ್ಳೆಯದು. ಹಾಗೆಯೇ ಕುರ್ಚಿ ತೊಳೆದ ನಂತರ ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಿ. ಆನಂತರ ಕುರ್ಚಿಗಳ ಮೇಲಿರುವ ತೇವಾಂಶ ಒಣಗೋವರೆಗೂ ವೇಟ್ ಮಾಡಿ. ಆನಂತರವೇ ಕುರ್ಚಿಗಳನ್ನು ಒಂದರೊಳಗೆ ಮತ್ತೊಂದು ಹಾಕಿ ಮನೆಯೊಳಗೆ ಇಟ್ಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.