Cockroach Killer Plants: ಮನೆಯಲ್ಲಿ ಜಿರಳೆ ಕಾಣೋದು ಸಹಜ. ಇದಕ್ಕೆ ಒಂದಿಷ್ಟು ಕೆಮಿಕಲ್ ಸ್ಪ್ರೇ ಮಾಡಿದರೆ, ಆರೋಗ್ಯ ಹಾಳಾಗಬಹುದು. ಈಗ ಮನೆಯಿಂದ ಜಿರಳೆಗಳನ್ನು ದೂರ ಇಡಬಹುದಾದ 7 ಒಳಾಂಗಣ ಸಸ್ಯಳಿವು. ಜಿರಳೆಗಳನ್ನು ದೂರ ಇಡಲು ನಿಮ್ಮ ಮನೆಯೊಳಗೆ ಬೆಳೆಸಬಹುದಾದ 7 ಅತ್ಯುತ್ತಮ Indoor Plants)
ಬಿರಿಯಾನಿ ಎಲೆಯನ್ನು ಅಡುಗೆಗೆ ಹಾಕುತ್ತೇವೆ. ಈ ಎಲೆಯಿಂದ ನೈಸರ್ಗಿಕವಾಗಿ ಕೀಟಗಳನ್ನು ಓಡಿಸಬಹುದು. ಈ ಎಲೆ ವಾಸನೆ ಜಿರಳೆಗಳಿಗೆ ಇಷ್ಟವಾಗೋದಿಲ್ಲ. ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಗಿಡ ಬೆಳೆಸಿ. ಒಣಗಿದ ಬಿರಿಯಾನಿ ಎಲೆಗಳನ್ನು ಕಪಾಟುಗಳು ಅಥವಾ ಡ್ರಾಯರ್‌ಗಳಲ್ಲಿ ಇಡಿ.
27
ಪುದೀನಾ (Mint)
ತಾಜಾ ಪುದೀನಾ ಎಲೆಗಳ ವಾಸನೆ ಕೀಟಗಳಿಗೆ ತೊಂದರೆ ಕೊಡುತ್ತದೆ. ಅದರಲ್ಲೂ ಪೆಪ್ಪರ್‌ಮಿಂಟ್ (Peppermint) ತಳಿಯ ಎಣ್ಣೆಗಳು ಜಿರಳೆಗಳನ್ನು ನಿಯಂತ್ರಿಸುತ್ತವೆ
37
ರೋಸ್ಮೇರಿ (Rosemary)
ರೋಸ್ಮೇರಿ ಎಲೆಗಳಲ್ಲಿರುವ ಎಣ್ಣೆಯಂಶವು ಕೀಟ ನಿವಾರಣೆ ಮಾಡುತ್ತದೆ. ಈ ವಾಸನೆಗೆ ಜಿರಳೆಗಳು ಹತ್ತಿರ ಬರೋದಿಲ್ಲ.
ಲ್ಯಾವೆಂಡರ್ ಸುವಾಸನೆಯನ್ನು ಕೀಟಗಳು ದ್ವೇಷಿಸುತ್ತವೆ. ಇದನ್ನು ಮನೆಯ ಬಾಗಿಲು ಅಥವಾ ಕಿಟಕಿಗಳ ಬಳಿ ಇಡಿ
57
ಕ್ಯಾಟ್‌ನಿಪ್ (Catnip)
ಕ್ಯಾಟ್‌ನಿಪ್ ಸಸ್ಯವು ಪುದೀನಾ ಕುಟುಂಬಕ್ಕೆ ಸೇರಿದ್ದಾಗಿದೆ. ಇದು ಜಿರಳೆಗೆ ಉಲ್ಟಾ ಪರಿಣಾಮ ಕೊಡುತ್ತದೆ. ಮನೆಯಲ್ಲಿ ಬೆಕ್ಕುಗಳು ಇಲ್ಲ ಅಂದ್ರೆ, ಕಿಟಕಿಯ ಬಳಿ ಈ ಗಿಡವನ್ನು ನೆಡಿ.
67
ಲೆಮನ್‌ಗ್ರಾಸ್ ಅಥವಾ ನಿಂಬೆ ಹುಲ್ಲು (Lemongrass)
ಲೆಮನ್‌ಗ್ರಾಸ್ ಗಿಡದಿಂದ ಲಿಂಬೆಹಣ್ಣಿನ ಸುವಾಸನೆ ಬರುತ್ತದೆ. ಇದರಲ್ಲಿರುವ ಸಿಟ್ರೊನೆಲ್ಲಾ (Citronella) ಎಣ್ಣೆಯಂಶ ಕೀಟ ನಿವಾರಕ ಕೂಡ ಹೌದು.
77
ಸೇವಂತಿ ಅಥವಾ ಚಂದ್ರಮಲ್ಲಿಗೆ (Chrysanthemums)
ಸೇವಂತಿ ಹೂವುಗಳಲ್ಲಿ 'ಪೈರೆಥ್ರಿನ್ಸ್' (Pyrethrins) ಎಂಬ ನೈಸರ್ಗಿಕ ಸಂಯುಕ್ತವಿದೆ. ಇದನ್ನು ವಾಣಿಜ್ಯ ಕೀಟನಾಶಕಗಳಲ್ಲಿ ಬಳಸಲಾಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.