ಮನಿ ಪ್ಲಾಂಟ್ ಎಲೆ ಹಳದಿ ಬಣ್ಣಕ್ಕೆ ತಿರುಗ್ತಿದ್ಯಾ? ನಿತ್ಯ ಸಿಂಕ್ನಲ್ಲಿ ಚೆಲ್ಲುವ ಈ ಪದಾರ್ಥ ಹಾಕಿ ಮ್ಯಾಜಿಕ್ ನೋಡಿ

Published : Jul 07, 2026, 08:03 PM IST

Money Plant : ಮನೆಯಲ್ಲಿ ಬೆಳೆದ ಮನಿಪ್ಲಾಂಟ್ ಎಲೆ ಹಳದಿ ಆಗ್ತಿದ್ದಂತೆ ಆತಂಕ ಕಾಡೋದು ಸಹಜ. ಆದ್ರೆ ಅದಕ್ಕೆ ಟೆನ್ಷನ್ ಮಾಡ್ಕೊಳ್ಳುವ ಅಗತ್ಯ ಇಲ್ಲ. ಸರಿಯಾದ ಆರೈಕೆ ಮಾಡಿದ್ರೆ ಮನೆ ಪ್ಲಾಂಟ್ ಮತ್ತೆ ಹಸಿರಾಗುತ್ತೆ. ಅಡುಗೆ ಮನೆಯಲ್ಲಿರುವ ಈ ಪದಾರ್ಥ ಬಳಸಿದ್ರೆ ಅತ್ಯುತ್ತಮ.

PREV
14
ಬಿಸಿಲು ಬೇಡ

ಜನರು ಮನೆ ಅಲಂಕಾರಕ್ಕಾಗಿ ಮಾತ್ರವಲ್ಲದೆ ಸಕಾರಾತ್ಮಕ ವಾತಾವರಣಕ್ಕಾಗಿ ಮನಿ ಪ್ಲಾಂಟ್ ಬೆಳೆಸ್ತಾರೆ. ನೀರು ಮತ್ತು ಮಣ್ಣಿನಲ್ಲಿ ಸುಲಭವಾಗಿ ಬೆಳೆಯುವ ಬಳ್ಳಿ ಇದು. ಅದಕ್ಕೆ ಹೆಚ್ಚಿನ ಆರೈಕೆ ಅಗತ್ಯವಿಲ್ಲದಿದ್ರೂ ಕೆಲವೊಂದು ಸಂಗತಿ ತಿಳಿದಿರಬೇಕು. ಮನಿ ಪ್ಲಾಂಟ್ ಗೆ ಹೆಚ್ಚು ನೀರಿನ ಅಗತ್ಯವಿಲ್ಲ. ನಿರಂತರವಾಗಿ ನೀವು ನೀರನ್ನು ಹಾಕ್ತಿದ್ದರೆ ಒದ್ದೆಯಾದ ಮಣ್ಣಿನಿಂದ ಮನಿ ಪ್ಲಾಂಟ್ ಬೇರು ಕೊಳೆಯಲು ಶುರುವಾಗುತ್ತದೆ. ಎಲೆಗಳು ಹಳದಿ ಆಗುತ್ವೆ.

24
ಸೂರ್ಯನ ಬೆಳಕು

ಮನಿ ಪ್ಲಾಂಟ್ ಗೆ ಅತಿಯಾದ ಸೂರ್ಯನ ಬೆಳಕಿನ ಅಗತ್ಯವಿಲ್ಲ. ಕಡಿಮೆ ಶಾಖ ಸಾಕಾಗುತ್ತದೆ. ಹಾಗೆಯೇ ಅತಿಯಾದ ಬೆಳಕಿನ ಅಗತ್ಯವಿಲ್ಲ. ಸೌಮ್ಯ, ಪರೋಕ್ಷ ಸೂರ್ಯನ ಬೆಳಕಿನಲ್ಲಿ ನೀವದನ್ನು ಬೆಳೆಸಬೇಕು. ಮನಿ ಪ್ಲಾಂಟ್ ನೀರಿನಲ್ಲಿದ್ದರೆ ವಾರಕ್ಕೊಮ್ಮೆ ನೀರನ್ನು ಬದಲಿಸಿ. ಅದೇ ಮಣ್ಣಿನಲ್ಲಿದ್ದರೆ ಮಣ್ಣು ಒಣಗಿದ ಮೇಲೆ ನೀರನ್ನು ಹಾಕಿ.

34
ಮನಿ ಪ್ಲಾಂಟ್ ಗೆ ಇದನ್ನು ಹಾಕಿ

ಮನೆ ಪ್ಲಾಂಟ್ ಎಲೆಗಳು ಹಸುರಾಗಬೇಕು, ಸೋಂಪಾಗಿ ಪ್ಲಾಂಟ್ ಬೆಳೆಯಬೇಕು ಎಂದಾದ್ರೆ ಪ್ರತಿ ದಿನ ನೀವು ಸಿಂಕ್ ನಲ್ಲಿ ಚೆಲ್ಲುವ ನೀರನ್ನು ಇದಕ್ಕೆ ಬಳಸಬೇಕು. ಅಕ್ಕಿ ತೊಳೆದ ನೀರು ಮನಿ ಪ್ಲಾಂಟ್ ಗೆ ಹೇಳಿ ಮಾಡಿಸಿದ ಪೋಷಕಾಂಶ. ಇದು ಪಿಷ್ಠವನ್ನು ಹೊಂದಿರುತ್ತದೆ. ಪೊಟ್ಯಾಸಿಯಮ್, ರಂಜಕ ಮತ್ತು ಇತರ ಪೋಷಕಾಂಶ ಸ್ವಲ್ಪ ಪ್ರಮಾಣದಲ್ಲಿರುತ್ತದೆ. ಇದು ಸಸ್ಯ ಬೆಳೆಯಲು ಸಹಕಾರಿ. ಆದ್ರೆ ಉಪ್ಪುರಹಿತ ಮತ್ತು ತಾಜಾ ಅಕ್ಕಿ ನೀರನ್ನು ಗಿಡಕ್ಕೆ ಹಾಕಬೇಕು. ಪ್ರತಿ ದಿನ ಈ ನೀರನ್ನು ಬಳಸಬೇಡಿ. ತಿಂಗಳಿಗೆ 2 ರಿಂದ 3 ಬಾರಿ ಸಸ್ಯದ ಮಣ್ಣಿಗೆ ಸೀಮಿತ ಪ್ರಮಾಣದಲ್ಲಿ ಅಕ್ಕಿ ನೀರನ್ನು ಹಾಕಿದ್ರೆ ಸಾಕು.

44
ಇದು ನೆನಪಿರಲಿ

ನೀವು ಮನೆ ಪ್ಲಾಂಟ್ ಬೆಳೆಸುತ್ತಿದ್ದರೆ ಹಳದಿ ಎಲೆಗಳನ್ನು ಕತ್ತರಿಸುತ್ತಿರಿ. ನೀರಿನಲ್ಲಿ ಗಿಡ ಬೆಳೆದಿದ್ದರೆ ನೀರು ಬದಲಿಸಿ, ಪಾಟ್ ಕ್ಲೀನ್ ಮಾಡಿ. ಹಾಗೆಯೇ ಎಲ್ಲ ಭಾಗಕ್ಕೂ ಸಮಾನವಾಗಿ ಬೆಳಕು ಸಿಗಬೇಕು ಅಂದ್ರೆ ಕೆಲವು ದಿನಕ್ಕೊಮ್ಮೆ ಸಸ್ಯವನ್ನು ತಿರುಗಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories