New Year 2023: ಹೊಸವರ್ಷನಾದ್ರೂ ದುಡ್ಡು ಉಳಿಸ್ಬೇಕು ಅಂದ್ಕೊಂಡಿದ್ದೀರಾ? ಇಲ್ಲಿದೆ ಟಿಪ್ಸ್‌

First Published | Dec 15, 2022, 11:59 AM IST

ಹೆಚ್ಚು ಸ್ಯಾಲರಿ ಇರೋದು ಮುಖ್ಯವಲ್ಲ. ನೀವದನ್ನು ಹೇಗೆ ಸೇವಿಂಗ್ಸ್ ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಗಳಿಕೆಯು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಿಲ್ಲ. ನೀವು ಪಡೆಯುವ ಸ್ಯಾಲರಿ ಹೇಗೆ ಬಳಸಬೇಕೆಂದು ತಿಳಿಯಿರಿ. ಆದಾಯ, ಖರ್ಚು, ಉಳಿತಾಯ, ಹೂಡಿಕೆಗಳ ಬಗ್ಗೆಯೂ ಗೊತ್ತಿರಬೇಕು. ಹೊಸ ವರ್ಷದಲ್ಲಿ ಶ್ರೀಮಂತರಾಗಲು ಇಲ್ಲಿದೆ ಕೆಲವೊಂದು ಟಿಪ್ಸ್‌.

ಅತ್ಯಾಸೆ ಒಳ್ಳೆಯದು
ಸಿಕ್ಕಿದ್ದರಲ್ಲಿ ತೃಪ್ತರಾಗುವುದು ಒಳ್ಳೆಯ ಅಭ್ಯಾಸ. ಹಾಗೆಂದು ಯಾವಾಗಲೂ ಅದನ್ನೇ ರೂಢಿಸಿಕೊಂಡರೆ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹೀಗಾಗಿ ಯಾವಾಗಲೂ ಸಾಧನೆಯನ್ನು ನಿಲ್ಲಿಸಬೇಡಿ. ನೀವು ಈಗಾಗಲೇ ಸಾಕಷ್ಟು ಸಂಪಾದಿಸಿದ್ದೀರಿ ಎಂದು ಅಂದುಕೊಳ್ಳುವುದನ್ನು ನಿಲ್ಲಿಸಿ. ನಿಮ್ಮಲ್ಲಿರುವ ಹಣವು ಈಗ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ.. ಆದರೆ ಮುಂದಿನ ದಿನಗಳಿಗೆ ಇದು ಸಾಕಾಗಬೇಕೆಂದಿಲ್ಲ. ಹೀಗಾಗಿ ಇನ್ನಷ್ಟು ಗಳಿಸಲು ಯತ್ನಿಸಿ. ಈ ಕಾರಣದಿಂದಾಗಿ ನೀವು ಭವಿಷ್ಯದಲ್ಲಿ ಯಾರನ್ನೂ ಅವಲಂಬಿಸದೇ ಜೀವನ ನಡೆಸಬಹುದು.

ಹಣ ಗಳಿಸಲು ಹಲವು ಮಾರ್ಗವಿದೆ
ಹಣವನ್ನು ಸಂಪಾದಿಸಲು ಹಲವು ಮಾರ್ಗವಿದೆ. ನೀವು ಕೇವಲ ಒಂದೇ ಉದ್ಯೋಗ ಮಾಡುತ್ತಾ ನಿರ್ಧಿಷ್ಟ ಹಣ ಗಳಿಸುತ್ತಾ ಹೋಗಬೇಕಾಗಿಲ್ಲ. ಬದಲಿಗೆ ಪಾರ್ಟ್‌ ಟೈಂ ಆಗಿ ಬೇರೆ ಕೆಲಸವನ್ನು ಸಹ ಮಾಡಬಹುದು. ಇದಲ್ಲದೆ ನೀವು ಗಳಿಸಿದ್ದನ್ನು ವಿವಿಧ ರೀತಿಯಲ್ಲಿ ಹೂಡಿಕೆ ಮಾಡುವುದರಿಂದ ಅವುಗಳಿಂದ ಬರುವ ಆದಾಯವು ಹೆಚ್ಚಿಸುತ್ತದೆ. ಅದಕ್ಕೆ ತಕ್ಕಂತೆ ಹೂಡಿಕೆಗಳನ್ನು ಯೋಜಿಸಿ.

Tap to resize

ಗಳಿಕೆಯನ್ನು ಹೋಲಿಕೆ ಮಾಡಬೇಡಿ
ನಿಮ್ಮ ಗಳಿಕೆಯನ್ನು ಇತರ ಜನರ ಗಳಿಕೆಯೊಂದಿಗೆ ಎಂದಿಗೂ ಹೋಲಿಸಬೇಡಿ. ಇದು ನಿಮಗೆ ಉತ್ತಮ ಭಾವನೆಯನ್ನು ನೀಡದ ಹೊರತು ಅದು ಹೆಚ್ಚು ಒಳ್ಳೆಯದನ್ನು ಮಾಡುವುದಿಲ್ಲ. ನಿಮ್ಮ ಜೀವನಕ್ಕೆ ಬೇಕಾದಷ್ಟನ್ನು ದುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದು ಮನಸ್ಸಿಗೆ ನೆಮ್ಮದಿ ಹಾಗೂ ಜೀವನಕ್ಕೆ ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ. 

ಹೊಸ ಉತ್ಪನ್ನ ಖರೀದಿಸುವ ಮುನ್ನ ಯೋಚಿಸಿ
ಮಾರುಕಟ್ಟೆಯಲ್ಲಿ ಪ್ರತಿದಿನ ಏನಾದರೊಂದು ಹೊಸದು ಬರುತ್ತಲೇ ಇರುತ್ತದೆ. ವಿವಿಧ ಗ್ಯಾಜೆಟ್‌ಗಳು ಸಹ ಲಭ್ಯವಿದೆ. ಹೊಸ ತಂತ್ರಜ್ಞಾನದ ವಸ್ತುಗಳನ್ನು ಖರೀದಿಸುವ ಮೂಲಕ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಿಕೊಳ್ಳಬೇಡಿ. ನಿಮಗೆ ಎಷ್ಟು ಬೇಕು ಎಂದು ನಿಖರವಾಗಿ ತಿಳಿದ ನಂತರವೇ ವಸ್ತುವನ್ನು ಖರೀದಿಸಿ. ಇಲ್ಲದಿದ್ದರೆ ನೀವು ವೃಥಾ ಹಣವನ್ನು ಪೋಲು ಮಾಡಿಕೊಂಡಂತಾಗುತ್ತದೆ. 

ಬಿಸಿನೆಸ್ ಪಾಲುದಾರರಾಗುವ  ಮುನ್ನ ತಿಳಿದುಕೊಳ್ಳಿ
ಹಣ ಮತ್ತು ಹೂಡಿಕೆಯ ವಿಷಯಗಳಲ್ಲಿ ಯಾರನ್ನೂ ನಂಬಲು ಆತುರಪಡಬೇಡಿ. ಆರ್ಥಿಕ ಪಾಲುದಾರರಾಗುವ ಮುನ್ನ, ಯಾವುದಾದರೂ ಹೂಡಿಕೆ ಮಾಡುವ ಮುನ್ನ ಅದರ ಬಗ್ಗೆ ಸಂಪೂರ್ಣ ಅರಿವು ಮೂಡಿಸಿಕೊಳ್ಳಿ. ಇಲ್ಲದಿದ್ದರೆ ನೀವು ಇರುವ ಹಣವನ್ನು ಸಹ ಕಳೆದುಕೊಳ್ಳುವ ಸಾಧ್ಯತೆಯಿದೆ.

ಸರಿಯಾಗಿ ಹೂಡಿಕೆ ಮಾಡಿ
ಹೂಡಿಕೆಯಿಂದ ಜನರು ಶ್ರೀಮಂತರಾಗುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಹೂಡಿಕೆಯು ನಿಮ್ಮ ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ನಿಮಗೆ ಬೆಂಬಲ ನೀಡುತ್ತದೆ ಎಂಬುದನ್ನು ತಿಳಿದಿರಬೇಕು. ಸಾಲಗಳನ್ನು ಆದಷ್ಟು ಬೇಗ ತೀರಿಸಲು ಪ್ರಯತ್ನಿಸಿ. ಇಲ್ಲವಾದರೆ ಸಾಲ ತೀರಿಸುವುದರಲ್ಲಿಯೇ ಜೀವನ ಮುಗಿಯುತ್ತದೆ. ಯಾವುದೇ ರೀತಿಯಲ್ಲಿ ಸೇವಿಂಗ್ಸ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಜೀವನವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ.

ಶೋಕಿಗೆ ದುಡ್ಡು ಖರ್ಚು  ಹಾಳಬೇಡಿ
ಶ್ರೀಮಂತನೆಂದು ತೋರಿಸಿಕೊಳ್ಳಲು ಹಪಾಹಪಿ ಹೆಚ್ಚಿನವರಿಗೆ ಇರುತ್ತದೆ. ತಾನು ಶ್ರೀಮಂತನೆಂದು ತೋರಿಸಿಕೊಳ್ಳಲು ಹೆಚ್ಚಿನವರು ಬಯಸುತ್ತಾರೆ ಇದಕ್ಕಾಗಿ ಅನೇಕರು ಬೆಲೆಬಾಳುವ ವಸ್ತುಗಳು, ಗ್ಯಾಜೆಟ್‌ಗಳು, ವಾಹನಗಳನ್ನು ಅಗತ್ಯವಿಲ್ಲದಿದ್ದರೂ ಖರೀದಿಸುತ್ತಾರೆ. ಇದರಿಂದ ನಿಮ್ಮ ಜೇಬು ಬರಿದಾಗುವುದು ಬಿಟ್ಟರೆ ಬೇರೇನೂ ಉಪಯೋಗವಿಲ್ಲ. ಹೀಗಾಗಿ ಇಂಥಾ ವಸ್ತುಗಳನ್ನು ತೆಗೆದುಕೊಳ್ಳುವ ಮುನ್ನ ಇನ್ನೊಂದು ಬಾರಿ ಯೋಚಿಸಿ.

Latest Videos

click me!