ಮಕ್ಕಳು ಶಾಲೆಗೆ ಹೋಗೋದನ್ನು ತಪ್ಪಿಸಲು ಅನಾರೋಗ್ಯ ನೆಪ ಹೇಳ್ತಿದ್ದಾರಾ?

First Published Dec 14, 2022, 5:49 PM IST

ನೀವು ಪೋಷಕರಾಗಿದ್ದರೆ, ಶಾಲೆಗೆ ಹೋಗುವ ಸಮಯದಲ್ಲಿ ಮಗು ಹೆಚ್ಚಾಗಿ ನಂಗೆ ಹುಷಾರಿಲ್ಲ, ಸ್ಕೂಲಿಗೆ ಹೋಗಲ್ಲ ಎಂದು ಹಠ ಮಾಡುತ್ತಾರೆಯೇ? ಆಗ ನೀವು ಏನು ಮಾಡಬೇಕು ಎಂಬುದರ ಬಗ್ಗೆ ಕೆಲವು ಸಮಯ ಗೊಂದಲಕ್ಕೊಳಗಾಗುತ್ತೀರಿ ಅಲ್ವಾ? ಆಗ ಏನ್ ಮಾಡಬೇಕು ಎಂದು ತಿಳಿಯಲು ಮುಂದೆ ಓದಿ.  

ಅನಾರೋಗ್ಯದ ನೆಪ ಹೇಳಿ ಬಾಲ್ಯದಲ್ಲಿ ನೀವು ಹಲವಾರು ಬಾರಿ ಶಾಲೆ ತಪ್ಪಿಸಿದ್ದು, ನೆನಪಿರಬಹುದು ಅಲ್ವಾ?. ಇಂದಿಗೂ, ಅನೇಕ ಮಕ್ಕಳು ಶಾಲೆಗೆ(School) ಹೋಗುವುದನ್ನು ತಪ್ಪಿಸಲು ಅನಾರೋಗ್ಯದ ನೆಪ ಹೇಳುತ್ತಾರೆ. ಪೋಷಕರು ಮಗುವಿನ ಆರೋಗ್ಯವನ್ನು ಅರ್ಥಮಾಡಿಕೊಳ್ಳದೆ ಶಾಲೆಗೆ ಕಳುಹಿಸುತ್ತಾರೆ. ನಂತರ ಪಶ್ಚಾತ್ತಾಪ ಪಡುತ್ತಾರೆ. ಮಗುವು ನಿಜವಾಗಿಯೂ ಅನಾರೋಗ್ಯದಿಂದ ಬಳಲುತ್ತಿದೆಯೇ ಅಥವಾ ನೆಪ ಹೇಳುತ್ತಿದೆಯೇ ಅಥವಾ ನಿಜವಾಗಿಯೂ ಅವನನ್ನು ಶಾಲೆಗೆ ಕಳುಹಿಸೋದು ಬೇಡ್ವಾ ಎಂದು ತಿಳಿಯೋದು ಹೇಗೆ ಎಂಬ ಬಗ್ಗೆ ನೀವು ಗೊಂದಲದಲ್ಲಿದ್ದರೆ, ಈ ಲೇಖನವು ನಿಮಗೆ ಸಾಕಷ್ಟು ಸಹಾಯ ಮಾಡುತ್ತೆ.
 

ಮಗುವನ್ನು(Child) ಮನೆಯಲ್ಲಿ ಇರಿಸಬೇಕೆ?

ಮಗು ಯಾವುದೇ ರೋಗ ಅಥವಾ ಸೋಂಕಿನ ರೋಗಲಕ್ಷಣಗಳನ್ನು ತೋರಿಸುತ್ತಿದ್ದರೆ, ನೀವು ಅವರನ್ನು ಶಾಲೆಗೆ ಕಳುಹಿಸಬಾರದು. ಏಕೆಂದರೆ ನಿಮ್ಮ ಮಗು, ಚೇತರಿಸಿಕೊಳ್ಳುತ್ತಿದ್ದರೂ ಸಹ, ಇತರ ಮಕ್ಕಳಿಗೆ ಸೋಂಕು ಹರಡಬಹುದು.

ಕೊರೋನಾದ(Corona) ಲಕ್ಷಣಗಳನ್ನು ನೋಡಿ

ಮೂಗು ಸೋರುವುದು, ಹಸಿವಾಗದಿರೋದು, ಕೆಮ್ಮು, ಸೀನುವುದು, ಜ್ವರ ಮತ್ತು ಉಬ್ಬಸದಂತಹ ರೋಗಲಕ್ಷಣಗಳು ನಿಮ್ಮನ್ನು ಗೊಂದಲಕ್ಕೀಡುಮಾಡಬಹುದು. ಭಯ ಬಿಟ್ಟು, ಕೋವಿಡ್ -19 ಸೋಂಕನ್ನು ಮನೆಯಲ್ಲಿಯೇ ಪರೀಕ್ಷಿಸುವ ಮೂಲಕ ಸುಲಭವಾಗಿ ಕಂಡುಹಿಡಿಯಬಹುದು.

ಯಾವುದೇ ಸಂದರ್ಭದಲ್ಲಿ, ರೋಗಲಕ್ಷಣಗಳ (Symptoms) ಆರಂಭದಲ್ಲಿ ತಡ ಮಾಡದೆ ವೈದ್ಯರನ್ನು ಸಂಪರ್ಕಿಸೋದು ಉತ್ತಮ. ಶೀತ ಅಥವಾ ಕೆಮ್ಮಿನಂತಹ ರೋಗಲಕ್ಷಣಗಳನ್ನು ನೀವು ನೋಡಿದರೆ, ಅವುಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಮತ್ತು ಸಮಯಕ್ಕೆ ಸರಿಯಾಗಿ ಕರೋನಾ ಪರೀಕ್ಷೆ ಮಾಡಿಸಿಕೊಳ್ಳಿ.

ಮಗುವನ್ನು ಮನೆಯಲ್ಲಿ ಯಾವಾಗ ಇರಿಸಬೇಕು?

ಮಗುವು ಮನೆಯಲ್ಲಿಯೇ ಇರಬೇಕೆಂದು ಸೂಚಿಸುವ ಕೆಲವು ಗಂಭೀರ ರೋಗಲಕ್ಷಣಗಳಿವೆ ಎಂದು ತಜ್ಞರು ಸೂಚಿಸುತ್ತಾರೆ. ಈ ರೋಗಲಕ್ಷಣಗಳಲ್ಲಿ ಹೆಚ್ಚಿನ ಜ್ವರ (Fever), ವಾಂತಿ, ಅತಿಸಾರ, ತಿನ್ನುವ ತೊಂದರೆ, ಸರಿಯಾದ ನಿದ್ರೆಯ ಕೊರತೆ ಮತ್ತು ಉಸಿರಾಟದ ತೊಂದರೆ ಸೇರಿವೆ.

ಯಾವಾಗ ಶಾಲೆಗೆ ವಾಪಸ್ ಕಳುಹಿಸಬೇಕು

ಮಗುವಿನ ಜ್ವರ ಗುಣಮುಖವಾದಾಗ ಮತ್ತು ವೈದ್ಯರ ಔಷಧಿಗಳ ಕೋರ್ಸ್ ಮುಗಿದಾಗ, ಮಗುವನ್ನು ಶಾಲೆಗೆ ಕಳುಹಿಸಬಹುದು. ಈ ಸಂದರ್ಭದಲ್ಲಿ, ಮಗುವಿಗೆ ಶಾಲೆಗೆ ಹೋಗಲು ಮತ್ತು ಅಧ್ಯಯನ ಮಾಡಲು ಸಾಕಷ್ಟು ಶಕ್ತಿ ಇದೆಯೇ ಎಂಬುದರ ಬಗ್ಗೆಯೂ ನೀವು ಗಮನ ಹರಿಸಬೇಕು. ಸಂದೇಹವಿದ್ದಲ್ಲಿ, ಮಕ್ಕಳ ತಜ್ಞರನ್ನು(Doctor) ಸಂಪರ್ಕಿಸೋದು ಉತ್ತಮ.

ರೋಗ ತಡೆಗಟ್ಟುವುದು ಹೇಗೆ?

ಮಕ್ಕಳಿಗೆ ನೈರ್ಮಲ್ಯ ಮತ್ತು ಕೆಲವು ಸಲಹೆಗಳನ್ನು ನೀಡುವ ಮೂಲಕ, ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಬಹುದು. ತಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಲು ಅವರಿಗೆ ಕಲಿಸಿ, ವಿಶೇಷವಾಗಿ ಆಹಾರ ತಿನ್ನುವ ಮೊದಲು ಕೈತೊಳೆಯಲು(Hand wash) ತಿಳಿಸಿ. ಅವರು ಶಾಲೆಯಲ್ಲಿ ತಮ್ಮೊಂದಿಗೆ ಹ್ಯಾಂಡ್ ಸ್ಯಾನಿಟೈಸರ್  ಕೊಂಡೊಯ್ಯುತ್ತಾರೆ ಎಂದು ಖಚಿತಪಡಿಸಿಕೊಳ್ಳಿ.

ಸ್ನೇಹಿತರೊಂದಿಗೆ ತಿನ್ನೋದನ್ನು ಅಥವಾ ತಿಂಡಿ ಶೇರ್ ಮಾಡೋದನ್ನು ತಪ್ಪಿಸಲು ಮತ್ತು ಅನಾರೋಗ್ಯ ಪೀಡಿತ ಗೆಳೆಯರೊಂದಿಗೆ ಕುಳಿತುಕೊಳ್ಳದಂತೆ ಅವರಿಗೆ ತಿಳಿಸಿ. ನಿಮ್ಮ ಮಗುವಿನ ಮಕ್ಕಳ ವೈದ್ಯರೊಂದಿಗೆ ಮಾತನಾಡಿ ಮತ್ತು ಮಗುವಿಗೆ ಸಮಯಕ್ಕೆ ಸರಿಯಾಗಿ ಲಸಿಕೆ (Vaccine) ಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
 

click me!