ಊಟಕ್ಕೆಂದು ಮನೆಗೆ ಬಂದ ಮಹಿಳಾ ಸಹೋದ್ಯೋಗಿ; ಆಮೇಲೆ ನಡೆದೇ ಹೋಯ್ತು ಕಂಡು ಕೇಳರಿಯದ ಅನಾಹುತ!

Published : Feb 23, 2026, 03:01 PM IST

Apartment Rules: ನಗರಗಳಲ್ಲಿ ಅಪಾರ್ಟ್‌ಮೆಂಟ್‌ ಎಷ್ಟು ಸೇಫ್‌, ಹಾಗೆ ಕಿರಿಕಿರಿ ಕೂಡ ಮಾಡುವುದು. ಅನೇಕರು ಈ ಕಾರಣಕ್ಕೆ ಅಪಾರ್ಟ್‌ಮೆಂಟ್‌ ಸಹವಾಸವೇ ಬೇಡ ಎನ್ನುತ್ತಾರೆ. ಓರ್ವ ವ್ಯಕ್ತಿ ತನ್ನ ಮಹಿಳಾ ಸಹೋದ್ಯೋಗಿಯನ್ನು ಮನೆಗೆ ಕರೆಸಿದ್ದಕ್ಕೆ ಸಮಸ್ಯೆ ಎದುರಿಸಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.

PREV
16
ಎಚ್ಚರಿಕೆ ಕೊಟ್ಟರು

ಫ್ಲಾಟ್‌ವೊಂದಕ್ಕೆ ಮಹಿಳಾ ಸಹೋದ್ಯೋಗಿಯನ್ನು ಆಹ್ವಾನ ಮಾಡಿದ್ದಕ್ಕೆ ವ್ಯಕ್ತಿಯೋರ್ವರಿಗೆ ಅಪಾರ್ಟ್‌ಮೆಂಟ್‌ನವರು ನೋಟೀಸ್‌ ನೀಡಿದ್ದಾರೆ. ಅಪಾರ್ಟ್‌ಮೆಂಟ್‌ ಅಸೋಸಿಯೇಶನ್‌ ಅವರು ಎಚ್ಚರಿಕೆ ಕೂಡ ನೀಡಿದ್ದಾರೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ಹೈದರಾಬಾದ್‌ ವ್ಯಕ್ತಿಯೋರ್ವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

26
ನಿಯಮಗಳ ಉಲ್ಲಂಘನೆ ಆಗಿದೆ

ನೋಟೀಸ್‌ ನೀಡಿದ ಫೋಟೋ ಸಮೇತ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ ಸೆಕ್ರೆಟರಿ ಅವರು ನೋಟೀಸ್‌ ನೀಡಿದ್ದಾರಂತೆ. ಕೆಲ ತಿಂಗಳುಗಳಿಂದ ಮನೆಗೆ ಟೀ, ಡಿನ್ನರ್‌ ಎಂದು ಮಹಿಳಾ ಸಹೋದ್ಯೋಗಿಯನ್ನು ಆಹ್ವಾನಿಸಿರುವುದು ನಿಯಮಗಳ ಉಲ್ಲಂಘನೆ ಆಗಿದೆಯಂತೆ ಎಂದು ದೂರಲಾಗಿದೆ.

36
ತೊಂದರೆ ಕೊಟ್ಟಿಲ್ಲ

ಯಾರಿಗೂ ಯಾವುದೇ ತೊಂದರೆ ಮಾಡಿರಲಿಲ್ಲ, ಮ್ಯೂಸಿಕ್‌ ಹಾಕಿರಲಿಲ್ಲ, ಅನಗತ್ಯ ಚಟುವಟಿಕೆ ಕೂಡ ಇರಲಿಲ್ಲ. ಈ ನೋಟೀಸ್‌ಗೆ ಏನು ಹೇಳಬೇಕು ಎಂದು ಗೊತ್ತಾಗ್ತಿಲ್ಲ ಎಂದು ವ್ಯಕ್ತಿಯೋರ್ವರು ಪೋಸ್ಟ್‌ ಮಾಡಿದ್ದಾರೆ.

46
ಕೆಲ ದೂರುಗಳು ಬಂದಿವೆ

ಕೆಲ ತಿಂಗಳುಗಳಿಂದ ವೀಕ್‌ ಡೇಸ್‌ಗಳಲ್ಲಿ, ವೀಕೆಂಡ್‌ನಲ್ಲಿ ಮಹಿಳಾ ಸಹದ್ಯೋಗಿಯನ್ನು ಫ್ಲಾಟ್‌ಗೆ ಕರೆಯಲಾಗಿದೆ ಎಂದು ಕೆಲ ದೂರುಗಳು ಬಂದಿವೆಯಂತೆ. ಇದು ಅಪಾರ್ಟ್‌ಮೆಂಟ್‌ ನೀತಿ-ನಿಯಮಗಳ ಉಲ್ಲಂಘನೆ ಎನ್ನಲಾಗಿದೆ.

56
ಫ್ಲಾಟ್‌ ಖಾಲಿ ಮಾಡಿ ಎಂದ್ರು

ಈ ರೀತಿ ತಪ್ಪುಗಳನ್ನು ಅಪಾರ್ಟ್‌ಮೆಂಟ್‌ ಕಮಿಟಿ ಸಹಿಸೋದಿಲ್ವಂತೆ. ಈ ರೀತಿ ಮತ್ತೆ ಆದರೆ ಫ್ಲಾಟ್‌ ಖಾಲಿ ಮಾಡಿ ಎಂದು ಎಚ್ಚರಿಕೆ ನೀಡಿದೆ. ಈ ರೀತಿ ನಿಯಮಗಳ ಬಗ್ಗೆ ಚರ್ಚೆಯಾಗಿದ್ದು, ಯಾರಿಗೂ ತೊಂದರೆ ಕೊಡದಿದ್ದರೂ ಕೂಡ, ಗರ್ಲ್‌ಫ್ರೆಂಡ್‌ ಬಂದಳು ಎಂದು ಫ್ಲಾಟ್‌ ಖಾಲಿ ಮಾಡಿ ಎನ್ನೋದು ಸರಿ ಅಲ್ಲ ಎಂದು ಕೆಲವರು ಹೇಳಿದ್ದಾರೆ.

66
ಅಪಾರ್ಟ್‌ಮೆಂಟ್‌ ಸಹವಾಸ ಬೇಡ

ಅಪಾರ್ಟ್‌ಮೆಂಟ್‌ಗಳಲ್ಲಿ ಮೊದಲೇ ಈ ರೀತಿ ನೀತಿ-ನಿಯಮ ಇರುತ್ತದೆ, ಇದನ್ನು ಕಾನೂನಾತ್ಮಕವಾಗಿ ಪ್ರಶ್ನೆ ಮಾಡೋಕೆ ಆಗದು. ಇದೇ ಕಾರಣಕ್ಕೆ ಕೆಲ ಅಪಾರ್ಟ್‌ಮೆಂಟ್‌ಗಳಲ್ಲಿ ನಾವು ವಾಸ ಮಾಡೋದಿಲ್ಲ ಎಂದು ಕೆಲವರು ಹೇಳಿದ್ದಾರೆ,

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories