Eye Glasses Care Tips: ಕನ್ನಡಕ, ಕಾಂಟ್ಯಾಕ್ಟ್ ಲೆನ್ಸ್‌ ಕ್ಲೀನ್ ಮಾಡುವಾಗ ಈ ತಪ್ಪನ್ನ ಮಾಡ್ಬೇಡಿ

Published : Jan 02, 2026, 04:30 PM IST

Optical Care Tips: ಕನ್ನಡಕ, ಕಾಂಟ್ಯಾಕ್ಟ್ ಲೆನ್ಸ್‌ ಮತ್ತು ಸನ್‌ ಗ್ಲಾಸ್ ಅನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಗೀರುಗಳು ಅಥವಾ ಬೇರೆ ರೀತಿ ಹಾನಿಯಾಗದಂತೆ ತಪ್ಪಿಸಲು ಅವುಗಳನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.

PREV
15
ಶುಚಿಗೊಳಿಸುವ ವಿಧಾನವೂ ಮುಖ್ಯ

ಅನೇಕ ಜನರು ಕನ್ನಡಕ, ಸನ್ ಗ್ಲಾಸ್ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಸ್ವಚ್ಛಗೊಳಿಸುವಾಗ ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಗ್ಲಾಸ್ ಮೋಡ ಕವಿದಂತೆ ಕಾಣೋದು, ಗೀರುಗಳು ಮತ್ತು ಲೆನ್ಸ್ ಮೇಲಿನ ಲೇಪನಕ್ಕೆ ಹಾನಿಯಾಗುವಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯ, ಸ್ಪಷ್ಟ ದೃಷ್ಟಿ ಮತ್ತು ಕನ್ನಡಕಗಳ ದೀರ್ಘಕಾಲೀನ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸರಿಯಾದ ಶುಚಿಗೊಳಿಸುವ ವಿಧಾನಗಳನ್ನು ತಿಳಿದುಕೊಳ್ಳುವುದು ಹೆಚ್ಚು ಮುಖ್ಯವಾಗಿದೆ.

25
ಪ್ರಿಸ್ಕ್ರಿಪ್ಷನ್ ಗ್ಲಾಸ್‌ ಸ್ವಚ್ಛಗೊಳಿಸುವುದು ಹೇಗೆ?

ನಿಮ್ಮ ಗ್ಲಾಸ್ ಸ್ವಚ್ಛಗೊಳಿಸುವಾಗ ಮೊದಲು ಲೆನ್ಸ್‌ಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಧೂಳಿನ ಕಣಗಳು ಹೊರಬರುತ್ತವೆ. ನಂತರ ನಿಮ್ಮ ಬೆರಳ ತುದಿಗೆ ಒಂದು ಹನಿ ಸೌಮ್ಯವಾದ ಲಿಕ್ವಿಡ್ ಸೋಪ್ ಹಚ್ಚಿ ಮತ್ತು ಅದನ್ನು ಲೆನ್ಸ್‌ಗಳು ಮತ್ತು ಫ್ರೇಮ್‌ಗಳ ಮೇಲೆ ನಿಧಾನವಾಗಿ ಉಜ್ಜಿ. ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ. ಟಿಶ್ಯೂ ಪೇಪರ್, ಕರವಸ್ತ್ರ ಅಥವಾ ಬಟ್ಟೆಯ ಮೂಲೆಯನ್ನು ಎಂದಿಗೂ ಬಳಸಬೇಡಿ. ಇವು ಗೀರುಗಳಿಗೆ ಕಾರಣವಾಗಬಹುದು. ಸ್ಪ್ರೇ ಕ್ಲೀನರ್ ಮತ್ತು ಮೈಕ್ರೋಫೈಬರ್ ಬಟ್ಟೆಯನ್ನು ಕೊಂಡೊಯ್ಯುವುದು ಒಳ್ಳೆಯ ಅಭ್ಯಾಸ.

35
ಕನ್ನಡಕಗಳ ಮೇಲಿನ ಗೀರು ಸರಿಪಡಿಸುವುದು ಹೇಗೆ?

ಹೆಚ್ಚಿನ ಗೀರುಗಳು ಸಂಪೂರ್ಣವಾಗಿ ಮಾಯವಾಗುವುದಿಲ್ಲ ಎಂಬುದು ನಿಜ. ಆದರೆ ಕೆಲವು ಟೆಕ್ನಿಕ್ಸ್ ಅವುಗಳನ್ನು ಕಡಿಮೆ ಮಾಡಬಹುದು. ಆಳವಾದ ಗೀರುಗಳ ಮೇಲೆ ಮನೆಮದ್ದುಗಳನ್ನು ಪ್ರಯತ್ನಿಸಬೇಡಿ. ಅವು ಇನ್ನಷ್ಟು ಹಾನಿ ಮಾಡ್ಬೋದು. ಸಣ್ಣ ಗೀರುಗಳಿಗೆ, ಲೆನ್ಸ್-ಸುರಕ್ಷಿತ ಪಾಲಿಶಿಂಗ್ ದ್ರಾವಣಗಳು ಮತ್ತು ಮೈಕ್ರೋಫೈಬರ್ ಅನ್ನು ಮಾತ್ರ ಬಳಸಿ.

45
ಗೀರುಗಳು ಹೆಚ್ಚಿದ್ದರೆ ಏನ್ ಮಾಡ್ಬೇಕು?

ಗೀರುಗಳು ಹೆಚ್ಚು ಗೋಚರಿಸುತ್ತಿದ್ದರೆ ಲೆನ್ಸ್ ಅನ್ನು ಬದಲಾಯಿಸುವುದು ಅಥವಾ ಆಪ್ಟಿಕಲ್ ಅಂಗಡಿಯಲ್ಲಿ ಲೇಪನವನ್ನು ಪರಿಶೀಲಿಸುವುದು ಉತ್ತಮ. ಕಿಟ್‌ಗಳು ಅಥವಾ ಟೂತ್‌ಪೇಸ್ಟ್‌ನಂತಹ ಪರಿಹಾರಗಳನ್ನು ತಪ್ಪಿಸಿ. ಇವು ಲೇಪನವನ್ನು ಹಾನಿಗೊಳಿಸುತ್ತವೆ.

55
ಕಾಂಟ್ಯಾಕ್ಟ್ ಲೆನ್ಸ್‌ ಸ್ವಚ್ಛಗೊಳಿಸುವುದು ಹೇಗೆ?

ನಿಮ್ಮ ವೈದ್ಯರು ಶಿಫಾರಸು ಮಾಡಿದ ದ್ರಾವಣದಿಂದ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಯಾವಾಗಲೂ ಸ್ವಚ್ಛಗೊಳಿಸಿ. ಟ್ಯಾಪ್ ವಾಟರ್ ಎಂದಿಗೂ ಬಳಸಬೇಡಿ. ಲೆನ್ಸ್‌ಗಳನ್ನು ತೆಗೆದ ನಂತರ ದ್ರಾವಣವನ್ನು ನಿಮ್ಮ ಅಂಗೈಗೆ ಸುರಿಯಿರಿ. ನಿಧಾನವಾಗಿ ಉಜ್ಜಿ ನಂತರ ಹೊಸ ದ್ರಾವಣದಿಂದ ತೊಳೆಯಿರಿ. ಪ್ರತಿದಿನ ಲೆನ್ಸ್ ಕೇಸ್ ಅನ್ನು ಸ್ವಚ್ಛಗೊಳಿಸಿ ಒಣಗಿಸುವುದು ಸಹ ಮುಖ್ಯವಾಗಿದೆ. ನಿಮ್ಮ ಲೆನ್ಸ್‌ಗಳು ಕಿರಿಕಿರಿ, ಮಸುಕು ಅಥವಾ ತುರಿಕೆಗೆ ಕಾರಣವಾಗಿದ್ದರೆ, ಬಳಕೆಯನ್ನು ನಿಲ್ಲಿಸಿ ಮತ್ತು ಕಣ್ಣಿನ ತಜ್ಞರನ್ನು ಸಂಪರ್ಕಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories