ನಿಮ್ಮ ಮನೆ ಸ್ಮೆಲ್ ಬರುತ್ತಿದೆಯೇ? ಕೇವಲ 5 ನಿಮಿಷದಲ್ಲಿ ತಯಾರಿಸಿ ರೂಮ್ ಫ್ರೆಶ್‌ನರ್

Published : Aug 25, 2026, 03:15 PM IST

DIY room freshener: ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಕೋಣೆಯೊಳಗೆ ಬರುವ ಸಣ್ಣ ವಾಸನೆ ಕಿರಿಕಿರಿ ಉಂಟುಮಾಡುತ್ತದೆಯೇ? ಮಾರುಕಟ್ಟೆಯ ದುಬಾರಿ ರೂಮ್ ಸ್ಪ್ರೇಗಳ ಬದಲು, ಕೇವಲ ಕೆಲವೇ ನಿಮಿಷಗಳಲ್ಲಿ ಕೆಮಿಕಲ್ ಮುಕ್ತ ರೂಮ್ ಫ್ರೆಶ್‌ನರ್ ಅನ್ನು ಮನೆಯಲ್ಲೇ ತಯಾರಿಸುವುದು ಹೇಗೆಂದು ನೋಡೋಣ..

PREV
16
ಮಾಡೋದು ತುಂಬಾ ಸುಲಭ

ಮಾಡೋದು ತುಂಬಾ ಸುಲಭ
ಮನೆಯನ್ನು ಎಷ್ಟೇ ಶುಚಿಗೊಳಿಸಿದರೂ ಕೆಲವೊಮ್ಮೆ ಕೋಣೆಯೊಳಗೆ ಒಂದು ರೀತಿಯ ವಾಸನೆ ಬರುತ್ತಿರುತ್ತದೆ. ಇದನ್ನು ಹೋಗಲಾಡಿಸಲು ನಾವು ಮಾರುಕಟ್ಟೆಯಿಂದ ದುಬಾರಿ ಮತ್ತು ಕೆಮಿಕಲ್ ಯುಕ್ತ ರೂಮ್ ಸ್ಪ್ರೇಗಳನ್ನು ತರುತ್ತೇವೆ. ಆದರೆ, ಕೇವಲ ರೋಸ್ ವಾಟರ್ ಮತ್ತು ಎಸೆನ್ಷಿಯಲ್ ಆಯಿಲ್ ಬಳಸಿ ನೀವು ಮನೆಯಲ್ಲೇ ನೈಸರ್ಗಿಕ ರೂಮ್ ಫ್ರೆಶ್‌ನರ್ ತಯಾರಿಸಬಹುದು. ಇದು ಸುಲಭ ಮಾತ್ರವಲ್ಲ, ನಿಮ್ಮ ಇಷ್ಟದ ಸುಗಂಧವನ್ನೂ ನೀವೇ ಆರಿಸಿಕೊಳ್ಳಬಹುದು.

26
ಅಗತ್ಯವಿರುವ ಸಾಮಗ್ರಿಗಳು

ಅಗತ್ಯವಿರುವ ಸಾಮಗ್ರಿಗಳು
ಈ ಸ್ಪ್ರೇ ತಯಾರಿಸಲು ನಿಮಗೆ ಹೆಚ್ಚಿನ ವಸ್ತುಗಳ ಅಗತ್ಯವಿಲ್ಲ
ನೀರು: 1 ಕಪ್
ರೋಸ್ ವಾಟರ್: 2 ದೊಡ್ಡ ಚಮಚ
ಬೇಕಿಂಗ್ ಸೋಡಾ: 1 ಸಣ್ಣ ಚಮಚ
ಎಸೆನ್ಷಿಯಲ್ ಆಯಿಲ್: 8 ರಿಂದ 10 ಹನಿಗಳು (ಲ್ಯಾವೆಂಡರ್, ನಿಂಬೆ ಅಥವಾ ಪುದೀನಾ - ನಿಮ್ಮಿಷ್ಟದ ವಾಸನೆ)
ಸ್ಪ್ರೇ ಬಾಟಲ್: ಒಂದು ಖಾಲಿ ಮತ್ತು ಸ್ವಚ್ಛವಾದ ಬಾಟಲ್.

36
ತಯಾರಿಸುವ ವಿಧಾನ

ತಯಾರಿಸುವ ವಿಧಾನ
*ಮೊದಲು ಸ್ವಚ್ಛವಾದ ಸ್ಪ್ರೇ ಬಾಟಲಿಗೆ ಒಂದು ಕಪ್ ನೀರು ಹಾಕಿ.
*ಅದಕ್ಕೆ 2 ಚಮಚ ರೋಸ್ ವಾಟರ್ ಸೇರಿಸಿ.
*ನಂತರ ಒಂದು ಚಮಚ ಬೇಕಿಂಗ್ ಸೋಡಾ ಹಾಕಿ ಬಾಟಲಿಯನ್ನು ಸ್ವಲ್ಪ ಅಲ್ಲಾಡಿಸಿ (ಬೇಕಿಂಗ್ ಸೋಡಾ *ವಾಸನೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ).
*ಕೊನೆಯಲ್ಲಿ ನಿಮಗೆ ಇಷ್ಟವಾದ 8-10 ಹನಿ ಎಸೆನ್ಷಿಯಲ್ ಆಯಿಲ್ ಸೇರಿಸಿ.
*ಬಾಟಲಿಯ ಮುಚ್ಚಳವನ್ನು ಮುಚ್ಚಿ ಚೆನ್ನಾಗಿ ಕುಲುಕಿದರೆ (Shake), ನಿಮ್ಮ ಹೋಮ್‌ಮೇಡ್ ರೂಮ್ ಸ್ಪ್ರೇ ಸಿದ್ಧ!

46
ಬಳಸುವ ಕ್ರಮ

ಬಳಸುವ ಕ್ರಮ
*ಈ ಸ್ಪ್ರೇಯನ್ನು ಕೋಣೆಯ ಗಾಳಿಯಲ್ಲಿ ಹಗುರವಾಗಿ ಸಿಂಪಡಿಸಿ.
*ಮನೆಗೆ ಅತಿಥಿಗಳು ಬರುವ ಮುನ್ನ ಅಥವಾ ಮನೆ ಕ್ಲೀನ್ ಮಾಡಿದ ನಂತರ ಇದನ್ನು ಬಳಸಿದರೆ ಕೋಣೆ ತಾಜಾ ಅನುಭವ ನೀಡುತ್ತದೆ.
*ಪರದೆ ಅಥವಾ ಬಟ್ಟೆಗಳ ಮೇಲೆ ಸಿಂಪಡಿಸುವ ಮೊದಲು, ಬಟ್ಟೆಯ ಒಂದು ಮೂಲೆಯಲ್ಲಿ ಸ್ವಲ್ಪ ಸ್ಪ್ರೇ ಮಾಡಿ ಪರೀಕ್ಷಿಸಿ .
*ಪ್ರತಿ ಬಾರಿ ಬಳಸುವ ಮೊದಲು ಬಾಟಲಿಯನ್ನು ಚೆನ್ನಾಗಿ ಕುಲುಕುವುದನ್ನು ಮರೆಯಬೇಡಿ.

56
ಯಾವ ಸುಗಂಧ ಉತ್ತಮ?

ಯಾವ ಸುಗಂಧ ಉತ್ತಮ?
ನಿಂಬೆ (Lemon): ತಾಜಾತನದ ಅನುಭವಕ್ಕಾಗಿ.
ಲ್ಯಾವೆಂಡರ್ (Lavender): ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡಲು.
ಪುದೀನಾ (Peppermint): ಕೋಣೆಯಲ್ಲಿ ಎನರ್ಜಿಟಿಕ್ ಅನುಭವ ನೀಡಲು.

66
ಗಮನಿಸಬೇಕಾದ ಅಂಶಗಳು

ಗಮನಿಸಬೇಕಾದ ಅಂಶಗಳು
*ಸ್ಪ್ರೇಯನ್ನು ಕಣ್ಣು, ಮುಖ ಮತ್ತು ಚರ್ಮದಿಂದ ದೂರವಿಡಿ.
*ಮಕ್ಕಳು ಮತ್ತು ಸಾಕುಪ್ರಾಣಿಗಳಿಗೆ ಎಟುಕದಂತೆ ಇರಿಸಿ.
*ಆಹಾರ ಪದಾರ್ಥಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನೇರವಾಗಿ ಸಿಂಪಡಿಸಬೇಡಿ.
*ಇದನ್ನು ಸಣ್ಣ ಪ್ರಮಾಣದಲ್ಲಿ ತಯಾರಿಸಿ ಬಳಸುವುದು ಉತ್ತಮ, ಹಳೆಯದಾದ ಮಿಶ್ರಣಕ್ಕಿಂತ ಹೊಸದಾಗಿ ತಯಾರಿಸಿದ ಸ್ಪ್ರೇ ಹೆಚ್ಚು ಪರಿಣಾಮಕಾರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories