ನಾವು ಪ್ರತಿದಿನ ಅಡುಗೆ ಮಾಡುವಾಗ ಗ್ಯಾಸ್ ಸ್ಟವ್ ಆನ್ ಆಗಿಲ್ಲ ಅಂದಾಗ ಮಾತ್ರ ಅದನ್ನು ನೋಡ್ತೇವೆಯೇ ಹೊರತು ಆನ್ ಆದ್ರೆ ಉರಿ ನೋಡೋಕೆ ಹೋಗೋದಿಲ್ಲ. ಆದ್ರೆ ಜ್ವಾಲೆಯ ಬಣ್ಣವನ್ನು ನಾವು ಗಮನಿಸ್ಬೇಕು. ಜ್ವಾಲೆ ಬಣ್ಣದಲ್ಲಿ ಬದಲಾವಣೆ ಗ್ಯಾಸ್ ಹಾಗೂ ಸ್ಟವ್ ನಲ್ಲಿರುವ ಸಮಸ್ಯೆಯನ್ನು ಹೇಳುತ್ತೆ.
ಸಾಮಾನ್ಯವಾಗಿ ಗ್ಯಾಸ್ ಸ್ಟವ್ನಲ್ಲಿ ನೀಲಿ ಬಣ್ಣದ ಜ್ವಾಲೆ ಕಾಣಿಸುತ್ತದೆ. ಇದು ಗ್ಯಾಸ್ ಸರಿಯಾಗಿ ಉರಿಯುತ್ತಿದೆ ಎಂಬುದರ ಸೂಚನೆ. ನಿಮ್ಮ ಗ್ಯಾಸ್ ಸ್ಟವ್ ನೀಲಿ ಬಣ್ಣದಲ್ಲಿ ಉರಿಯುತ್ತಿದ್ದರೆ ಟೆನ್ಷನ್ ಮಾಡ್ಕೊಳ್ಳುವ ಅಗತ್ಯವಿಲ್ಲ.
26
ಹಳದಿ – ಕಿತ್ತಳೆ ಬಣ್ಣ
ನಿಮ್ಮ ಗ್ಯಾಸ್ ಸ್ಟವ್ ಜ್ವಾಲೆ ಹಳದಿ ಬಣ್ಣದಲ್ಲಿ ಉರಿಯುತ್ತಿದ್ದರೆ ಸ್ವಲ್ಪ ಅದ್ರ ಬಗ್ಗೆ ಗಮನ ಹರಿಸುವ ಅಗತ್ಯವಿರುತ್ತದೆ. ಬರ್ನರ್ನ ಸಣ್ಣ ರಂಧ್ರಗಳಲ್ಲಿ ಕೊಳೆ ಅಥವಾ ಆಹಾರದ ಕಣಗಳು ಸೇರಿಕೊಂಡಿದ್ದರೆ ಗ್ಯಾಸ್ ಸರಿಯಾಗಿ ಹೊರಬರದಿರಬಹುದು. ಗ್ಯಾಸ್ ಮತ್ತು ಗಾಳಿ ಸರಿಯಾದ ಪ್ರಮಾಣದಲ್ಲಿ ಮಿಶ್ರಣವಾಗದಿದ್ದರೂ ಜ್ವಾಲೆಯ ಬಣ್ಣ ಬದಲಾಗಬಹುದು. ಇದರಿಂದ ಗ್ಯಾಸ್ ಸಂಪೂರ್ಣವಾಗಿ ಉರಿಯದೆ ಇರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ನಿಮ್ಮ ಸ್ಟವ್ನಲ್ಲಿ ಸಾಮಾನ್ಯವಾಗಿ ನೀಲಿ ಜ್ವಾಲೆ ಇದ್ದು, ಇದ್ದಕ್ಕಿದ್ದಂತೆ ಹಳದಿ ಅಥವಾ ಕಿತ್ತಳೆ ಬಣ್ಣದ ಜ್ವಾಲೆ ಕಾಣಿಸಿಕೊಂಡರೆ, ಸ್ಟವ್ ಅನ್ನು ಒಮ್ಮೆ ಪರಿಶೀಲಿಸುವುದು ಒಳ್ಳೆಯದು.
36
ಕೆಂಪು ಬಣ್ಣ
ನಿಮ್ಮ ಗ್ಯಾಸ್ ಸ್ಟವ್ ನಿಂದ ಕೆಂಪು ಬಣ್ಣದ ಉರಿ ಬರ್ತಿದ್ದರೆ ಅದು ಎಚ್ಚರಿಕೆಯ ಸೂಚನೆ. ಮೊದಲು ಗ್ಯಾಸ್ ಬಂದ್ ಮಾಡಿ. ಅನಿಲ ಸೋರಿಕೆ ಅಥವಾ ಹೆಚ್ಚಿನ ಇಂಗಾಲದ ಮಾನಾಕ್ಸೈಡ್‌ನಂತಹ ಗಂಭೀರ ಸಮಸ್ಯೆಯನ್ನು ಇದು ಸೂಚಿಸುತ್ತದೆ. ನೀವು ಗ್ಯಾಸ್ ಆಫ್ ಮಾಡಿ ಮತ್ತು ನಿಮ್ಮ ಒಲೆಯನ್ನು ಪರಿಶೀಲಿಸಿ.
ಸಾಮಾನ್ಯವಾಗಿ ರಾಸಾಯನಿಕಗಳು ಅಥವಾ ಅನಿಲದಲ್ಲಿನ ಕಲ್ಮಶಗಳಿಂದ ಇದು ಉಂಟಾಗುತ್ತದೆ. ಇದು ಸಾಮಾನ್ಯವಲ್ಲ. ಇದನ್ನು ಪರಿಶೀಲಿಸುವುದು ಬಹಳ ಅಗತ್ಯ.
56
ನೀಲಿ ಮಿಶ್ರಿತ ಕಿತ್ತಳೆ
ಬರ್ನರ್ ನಲ್ಲಿ ಕೊಳಕಿದ್ದರೆ ಅಥವಾ ಬರ್ನರ್ ನಲ್ಲಿ ಸಮಸ್ಯೆ ಇದ್ದರೆ ನೀಲಿ ಮಿಶ್ರಿತ ಕಿತ್ತಳೆ ಬಣ್ಣ ಕಾಣಿಸಿಕೊಳ್ಳುತ್ತದೆ. ನೀವು ಮೊದಲು ಬರ್ನರ್ ಕ್ಲೀನ್ ಮಾಡಿ. ನಂತ್ರ ಗ್ಯಾಸ್ ಸ್ಟವ್ ಬಳಸಬಹುದು.
66
ಬಿಳಿ ಅಥವಾ ಮಸುಕಾದ ಜ್ವಾಲೆ
ಗ್ಯಾಸ್ ಲೈನ್ ಅಥವಾ ಬರ್ನರ್‌ನಲ್ಲಿ ಹೆಚ್ಚು ಗಾಳಿ ಇರುವುದನ್ನು ಇದು ಸೂಚಿಸುತ್ತದೆ. ಇದು ಅಪಾಯಕಾರಿ ಅಲ್ಲ. ಆದ್ರೆ ಇದನ್ನು ನಿರ್ಲಕ್ಷ್ಯ ಮಾಡುವುದು ಕೂಡ ಸೂಕ್ತವಲ್ಲ.ಸಣ್ಣದಾಗಿ ಕಾಣುವ ಜ್ವಾಲೆಯ ಬದಲಾವಣೆಯೂ ಕೆಲವೊಮ್ಮೆ ನಮಗೆ ಎಚ್ಚರಿಕೆಯ ಸಂದೇಶ ನೀಡಬಹುದು. ಆದ್ದರಿಂದ ಪ್ರತಿದಿನ ಅಡುಗೆ ಮಾಡುವಾಗ ಸ್ಟವ್ನ ಜ್ವಾಲೆಯನ್ನು ಗಮನಿಸುವ ಅಭ್ಯಾಸ ಮಾಡಿಕೊಳ್ಳಿ. ಇದ್ರಿಂದ ನೀವು ಹಾಗೂ ನಿಮ್ಮ ಕುಟುಂಬ ಸುರಕ್ಷಿತವಾಗಿರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.