ಕಪ್ಪಾದ ತಾಮ್ರ, ಹಿತ್ತಾಳೆಯ ಪೂಜಾ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇದೇ ಅತ್ಯಂತ ವೇಗವಾದ ಮಾರ್ಗ

Published : Aug 14, 2026, 11:17 PM IST

Clean copper utensils: ಹಬ್ಬ ಹರಿದಿನಗಳಲ್ಲಿ ಕಪ್ಪಾದ ತಾಮ್ರ-ಹಿತ್ತಾಳೆಯ ಪೂಜಾ ಪಾತ್ರೆಗಳನ್ನು ಬೆಳಗುವುದು ದೊಡ್ಡ ಕೆಲಸವೆಂದು ಅನಿಸುತ್ತಿದೆಯೇ? ದುಬಾರಿ ಕೆಮಿಕಲ್ ಬಳಸುವ ಬದಲು ಮನೆಯಲ್ಲಿರುವ ವಸ್ತುಗಳಿಂದಲೇ ಇವುಗಳನ್ನು ಕೆಲವೇ ನಿಮಿಷದಲ್ಲಿ ಹೊಸದರಂತೆ ಹೊಳೆಯುವಂತೆ ಮಾಡುವ ಸುಲಭ ಉಪಾಯ ಇಲ್ಲಿದೆ.

PREV
15
ಹೊಸದರಂತೆ ಆಗುತ್ತೆ

ಹೊಸದರಂತೆ ಆಗುತ್ತೆ
ಹಬ್ಬ ಹರಿದಿನಗಳಲ್ಲಿ ಅಥವಾ ಪ್ರತಿನಿತ್ಯ ಪೂಜೆಗೆ ಬಳಸುವ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳು ಗಾಳಿಯಲ್ಲಿನ ತೇವಾಂಶದಿಂದಾಗಿ ಬೇಗನೆ ಕಪ್ಪಾಗುತ್ತವೆ. ಇವುಗಳನ್ನು ಬೆಳಗಲು ಮಾರುಕಟ್ಟೆಯ ಕೆಮಿಕಲ್ ಸ್ಪ್ರೇಗಳ ಬದಲು ನಮ್ಮ ಅಡುಗೆಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿ ಹೊಸದರಂತೆ ಹೊಳೆಯುವಂತೆ ಮಾಡಬಹುದು.

25
ಸ್ವಚ್ಛಗೊಳಿಸುವ ಸುಲಭ ವಿಧಾನಗಳು

ಸ್ವಚ್ಛಗೊಳಿಸುವ ಸುಲಭ ವಿಧಾನಗಳು
1. ನಿಂಬೆಹಣ್ಣು ಮತ್ತು ಉಪ್ಪು
ಇದು ಅತ್ಯಂತ ವೇಗವಾದ ಮಾರ್ಗ. ಅರ್ಧ ಹೋಳು ನಿಂಬೆಹಣ್ಣಿಗೆ ಸ್ವಲ್ಪ ಉಪ್ಪು ಹಚ್ಚಿ ಪಾತ್ರೆಯ ಮೇಲೆ ಉಜ್ಜಿದರೆ ಕಪ್ಪು ಕಲೆಗಳು ತಕ್ಷಣವೇ ಮಾಯವಾಗುತ್ತವೆ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಒಣ ಬಟ್ಟೆಯಿಂದ ಒರೆಸಿದರೆ ಪಾತ್ರೆಗಳು ಥಳ ಥಳ ಹೊಳೆಯುತ್ತವೆ.

35
2. ಹುಣಸೆಹಣ್ಣಿನ ರಸ

2. ಹುಣಸೆಹಣ್ಣಿನ ರಸ
ಇದು ನಮ್ಮ ಹಿರಿಯರ ಕಾಲದಿಂದಲೂ ನಡೆದುಬಂದಿರುವ ಸಾಂಪ್ರದಾಯಿಕ ಪದ್ಧತಿ. ಸ್ವಲ್ಪ ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ ಅದರ ತಿರುಳನ್ನು ಪಾತ್ರೆಗೆ ಹಚ್ಚಿ 5 ರಿಂದ 10 ನಿಮಿಷಗಳ ಕಾಲ ಬಿಡಿ. ನಂತರ ಸ್ಕ್ರಬ್ಬರ್‌ನಿಂದ ಉಜ್ಜಿದರೆ ಎಂತಹ ಹಠಮಾರಿ ಕಲೆಗಳೂ ಸುಲಭವಾಗಿ ಹೋಗುತ್ತವೆ.

45
3. ವಿನೆಗರ್ ಮತ್ತು ಬೇಕಿಂಗ್ ಸೋಡಾ

3. ವಿನೆಗರ್ ಮತ್ತು ಬೇಕಿಂಗ್ ಸೋಡಾ
ಒಂದು ಚಮಚ ಬೇಕಿಂಗ್ ಸೋಡಾಕ್ಕೆ ಸ್ವಲ್ಪ ವೈಟ್ ವಿನೆಗರ್ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಪಾತ್ರೆಗಳಿಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಉಜ್ಜಿದರೆ ಪಾತ್ರೆಗಳು ಹೊಸದರಂತೆ ಕಾಣುತ್ತವೆ.

55
4. ಟೊಮೆಟೊ ಸಾಸ್ ಅಥವಾ ಕೆಚಪ್

4. ಟೊಮೆಟೊ ಸಾಸ್ ಅಥವಾ ಕೆಚಪ್
ಕೇಳಲು ವಿಚಿತ್ರವೆನಿಸಿದರೂ ಟೊಮೆಟೊ ಸಾಸ್‌ನಲ್ಲಿರುವ ಆಮ್ಲೀಯ ಗುಣಗಳು ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ. ಪಾತ್ರೆಗೆ ಸಾಸ್ ಹಚ್ಚಿ 10 ನಿಮಿಷದ ನಂತರ ತೊಳೆದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಗಮನಿಸಬೇಕಾದ ಅಂಶಗಳು
ಪಾತ್ರೆಗಳನ್ನು ತೊಳೆದ ತಕ್ಷಣ ನೀರಿನ ಹನಿಗಳು ಇಲ್ಲದಂತೆ ಒಣ ಬಟ್ಟೆಯಿಂದ ಒರೆಸಬೇಕು. ಇಲ್ಲದಿದ್ದರೆ ನೀರಿನ ಕಲೆಗಳು ಮತ್ತೆ ಕಪ್ಪಾಗಿ ಕಾಣಿಸಬಹುದು. ಹಾಗೆಯೇ ಪಾತ್ರೆಗಳನ್ನು ಉಜ್ಜಲು ಮೃದುವಾದ ಸ್ಕ್ರಬ್ಬರ್ ಬಳಸುವುದು ಉತ್ತಮ, ಇದರಿಂದ ಪಾತ್ರೆಗಳ ಮೇಲೆ ಗೀರುಗಳು ಬೀಳುವುದಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories