Kitchen Tips: ಆಲೂಗಡ್ಡೆ, ಮೊಟ್ಟೆ ಬೇಯಿಸೋ ನೀರಿಗೆ ಇದನ್ನ ಹಾಕಿದ್ರೆ ಚೆನ್ನಾಗಿ ಬೇಯುತ್ತೆ

Published : Nov 21, 2025, 07:15 PM IST

Cooking tips for beginners: ಮೊಟ್ಟೆ ಮತ್ತು ಆಲೂಗಡ್ಡೆ ಬೇಯಿಸುವ ನೀರಿಗೆ ಯಾವ ಪದಾರ್ಥ ಸೇರಿಸಿದರೆ ಚೆನ್ನಾಗಿ ಬೇಯುತ್ತೆ?, ಅದರ ಪ್ರಯೋಜನವೇನು? ಎಂಬುದನ್ನು ಈ ಲೇಖನದಲ್ಲಿ ನೋಡೋಣ. 

PREV
15
ಪಾತ್ರೆ ಕಪ್ಪಾಗುತ್ತೆ

ಮೊಟ್ಟೆ, ಆಲೂಗಡ್ಡೆ ಬೇಯಿಸುವುದು ಚಿಕ್ಕ ಕೆಲಸ ಅನ್ಕೋಬಹುದು. ಆದ್ರೆ ಅದ್ರಲ್ಲೂ ರಿಸ್ಕ್ ಇದೆ. ಅಂದ್ರೆ, ಮೊಟ್ಟೆ ಬೇಯಿಸುವಾಗ ಕೆಲವೊಮ್ಮೆ ಸಿಡಿಯುತ್ತೆ. ಹಾಗೆಯೇ ಆಲೂಗಡ್ಡೆ ಬೇಯಿಸುವ ಪಾತ್ರೆ ಕಪ್ಪಾಗುತ್ತೆ. ಹೀಗೆಲ್ಲಾ ಆಗಬಾರದು ಅಂದ್ರೆ, ಕೆಳಗೆ ಹೇಳಿದ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಅದೇನು ಅಂತ ಇಲ್ಲಿ ನೋಡೋಣ.

25
ಆಲೂಗಡ್ಡೆ ಬೇಗನೆ ಬೇಯುತ್ತೆ

ಆಲೂಗಡ್ಡೆ: ಕೆಲವೊಮ್ಮೆ ಆಲೂಗಡ್ಡೆ ಬೇಯಿಸುವಾಗ ಸರಿಯಾಗಿ ಬೇಯುವುದಿಲ್ಲ. ಈ ಸಮಸ್ಯೆ ತಪ್ಪಿಸಲು ಆಲೂಗಡ್ಡೆ ಬೇಯಿಸುವ ನೀರಿಗೆ ಒಂದು ಚಮಚ ನಿಂಬೆ ರಸ ಸೇರಿಸಿ. ಆಲೂಗಡ್ಡೆ ಬೇಗನೆ ಬೆಂದು ಹೋಗುತ್ತದೆ.

35
ಮುಚ್ಚಳ ಹಾಕದೆ ಬೇಯಿಸಿ

ಹಾಗೆಯೇ, ಆಲೂಗಡ್ಡೆ ಬೇಯಿಸುವ ಪಾತ್ರೆ ಕಪ್ಪಾಗುತ್ತದೆ. ಅದನ್ನು ಸ್ವಚ್ಛಗೊಳಿಸುವುದು ಕಷ್ಟ. ಆ ಕಪ್ಪು ಕಲೆ ಹಲವು ದಿನಗಳವರೆಗೆ ಹಾಗೆಯೇ ಇರುತ್ತದೆ. ಆದ್ದರಿಂದ, ಪಾತ್ರೆ ಕಪ್ಪಾಗದಂತೆ ತಡೆಯಲು ಆಲೂಗಡ್ಡೆ ಬೇಯಿಸುವ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ. ಜೊತೆಗೆ, ಆಲೂಗಡ್ಡೆಯನ್ನು ಮುಚ್ಚಳ ಹಾಕದೆ ಬೇಯಿಸಿ.

45
ಅರ್ಧ ನಿಂಬೆಹಣ್ಣಿನ ರಸ ಹಿಂಡಿ

ಮೊಟ್ಟೆ: ಮೊಟ್ಟೆ ಬೇಯಿಸುವ ನೀರಿಗೆ ಅರ್ಧ ನಿಂಬೆಹಣ್ಣಿನ ರಸ ಹಿಂಡಿ. ಹೀಗೆ ಮಾಡಿದರೆ ಮೊಟ್ಟೆ ಒಡೆಯುವುದಿಲ್ಲ. ಸಿಪ್ಪೆಗೂ ಅಂಟಿಕೊಳ್ಳುವುದಿಲ್ಲ. ಜೊತೆಗೆ, ಮೊಟ್ಟೆಯ ಸಿಪ್ಪೆ ತೆಗೆಯುವುದು ತುಂಬಾ ಸುಲಭವಾಗುತ್ತದೆ.

55
ಮೊಟ್ಟೆಯ ವಾಸನೆ ಬರಲ್ಲ

ಹಾಗೆಯೇ, ಮೊಟ್ಟೆ ಅಡುಗೆ ಮಾಡಿದ ಮೇಲೆ ಅಡುಗೆಮನೆಯಲ್ಲಿ ಕೆಟ್ಟ ವಾಸನೆ ಬರುತ್ತೆ. ಮೊಟ್ಟೆ ಬೇಯಿಸುವ ನೀರಿಗೆ ನಿಂಬೆ ರಸ ಸೇರಿಸಿದರೆ ಮೊಟ್ಟೆಯ ವಾಸನೆ ಬರುವುದಿಲ್ಲ.

Read more Photos on
click me!

Recommended Stories