Cutting board cleaning tips: ಮರದ ಕಟಿಂಗ್ ಬೋರ್ಡ್ ಕ್ಲೀನ್ ಮಾಡುವಾಗ ಈ 5 ತಪ್ಪು ಮಾಡ್ಲೆಬೇಡಿ

Published : Nov 21, 2025, 06:58 PM IST

Cutting board safety: ಕಟಿಂಗ್ ಬೋರ್ಡ್ ಬಳಸಿ ತರಕಾರಿಗಳು, ಮಾಂಸ ಮತ್ತು ಮೀನು ಕತ್ತರಿಸುವುದು ಸುಲಭ. ಕಟಿಂಗ್ ಬೋರ್ಡ್‌ಗಳನ್ನು ಹಲವು ಬಗೆಯ ಮೆಟೀರಿಯಲ್‌ಗಳಿಂದ ಮಾಡಲಾಗಿರುತ್ತದೆ. ಆದರೆ ಮರದ ಕಟಿಂಗ್ ಬೋರ್ಡ್ ಕ್ಲೀನ್ ಮಾಡುವಾಗ ನಾವು ಮಾಡಬಾರದ ತಪ್ಪುಗಳಿವು.    

PREV
15
ಗಡುಸಾದ ಸ್ಕ್ರಬ್ಬರ್‌ಗಳು

ಗಡುಸಾದ ಸ್ಕ್ರಬ್ಬರ್‌ಗಳನ್ನು ಬಳಸಿ ಕಟಿಂಗ್ ಬೋರ್ಡ್ ಅನ್ನು ಎಂದಿಗೂ ಸ್ವಚ್ಛಗೊಳಿಸಬೇಡಿ. ಇದು ಕಟಿಂಗ್ ಬೋರ್ಡ್‌ಗೆ ಹಾನಿಯನ್ನುಂಟುಮಾಡುತ್ತದೆ.

25
ನಿಂಬೆ

ನೇರವಾಗಿ ನಿಂಬೆಹಣ್ಣು ಬಳಸಿ ಕಟಿಂಗ್ ಬೋರ್ಡ್ ಸ್ವಚ್ಛಗೊಳಿಸುವುದನ್ನು ತಪ್ಪಿಸಿ. ಬದಲಿಗೆ, ನಿಂಬೆ ಜೊತೆ ಉಪ್ಪನ್ನು ಸೇರಿಸಿ ಸ್ವಚ್ಛಗೊಳಿಸುವುದು ಉತ್ತಮ.

35
ಬ್ಲೀಚ್

ಬ್ಲೀಚ್ ಅನ್ನು ಕಠಿಣ ರಾಸಾಯನಿಕಗಳಿಂದ ತಯಾರಿಸಲಾಗುತ್ತದೆ. ಇದು ಮರಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ ಬ್ಲೀಚ್ ಬಳಸಿ ಕಟಿಂಗ್ ಬೋರ್ಡ್ ಸ್ವಚ್ಛಗೊಳಿಸಬೇಡಿ.

45
ನೀರಿನಲ್ಲಿ ನೆನೆಸಬೇಡಿ

ಮರದ ಕಟಿಂಗ್ ಬೋರ್ಡನ್ನು ನೀರಿನಲ್ಲಿ ನೆನೆಸಿಡುವುದನ್ನು ತಪ್ಪಿಸಬೇಕು. ಮರವಾಗಿರುವುದರಿಂದ ಇದು ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.

55
ಡಿಶ್‌ವಾಶರ್

ಮರದ ಕಟಿಂಗ್ ಬೋರ್ಡನ್ನು ಡಿಶ್‌ವಾಶರ್‌ನಲ್ಲಿ ಹಾಕಿ ತೊಳೆಯಬೇಡಿ. ಇದು ಕಟಿಂಗ್ ಬೋರ್ಡ್‌ಗೆ ಹಾನಿಯನ್ನುಂಟು ಮಾಡುತ್ತದೆ.

Read more Photos on
click me!

Recommended Stories