ಖರ್ಚಿಲ್ಲದೇ ಗಿಡ ಬೆಳೆಸೋ ಸೂಪರ್ ಟ್ರಿಕ್, ಕಸ ಸೇರೋ ಕಾರ್ಡ್ ಬೋರ್ಡ್‌ನಿಂದ ಪಾಟ್ ತಯಾರಿಸಿ

Published : Feb 16, 2026, 03:37 PM IST

home garden hack : ಮನೆಯಲ್ಲಿ ಕಾರ್ಡ್‌ ಬೋರ್ಡ್‌ ಇದ್ದೇ ಇರುತ್ತೆ. ನಿಮ್ಮ ಮನೆಯಲ್ಲೂ ಮೂಲೆ ಸೇರಿರುವ ಕಾರ್ಡ್ ಬೋರ್ಡ್ ಮರುಬಳಕೆ ಮಾಡ್ಬಹುದು. ಖರ್ಚಿಲ್ಲದೆ ಪಾಟ್ ತಯಾರಿಸಿ, ಉತ್ತಮ ಸಸಿ ಬೆಳೆಸ್ಬಹುದು. 

PREV
17
ಕಾರ್ಡ್ ಬೋರ್ಡ್‌ ಪಾಟ್

ಆನ್ಲೈನ್ ಶಾಪಿಂಗ್ ಮಾಡೋರ ಮನೆಯಲ್ಲಿ ಕಾರ್ಡ್ ಬೋರ್ಡ್ ರಾಶಿ ಬಿದ್ದಿರುತ್ತೆ. ಅದನ್ನು ಏನು ಮಾಡ್ಬೇಕು ತಿಳಿಯೋದಿಲ್ಲ. ಕಸಕ್ಕೆ ಸೇರುವ ಈ ಕಾರ್ಡ್ ಬೋರ್ಡ್ ಮರು ಬಳಕೆ ಮಾಡಿ ನೀವು ಪರಿಸರ ರಕ್ಷಣೆ ಮಾಡ್ಬಹುದು. ಜೊತೆಗೆ ಹಣ ಉಳಿತಾಯ ಮಾಡ್ಬಹುದು. ಕಾರ್ಡ್ ಬೋರ್ಡ್ ಮೂಲಕ ಸುಲಭವಾಗಿ ಪಾಟ್ ತಯಾರಿ ಹೇಗೆ ಗೊತ್ತಾ?

27
ಪರಿಸರ ರಕ್ಷಣೆ

ಈಗ ಮಾರ್ಕೆಟ್ ಗೆ ನಾನಾ ಪಾಟ್ ಬಂದಿದೆ. ಅನೇಕರು ಪ್ಲಾಸ್ಟಿಕ್ ಪಾಟ್ ಗಳನ್ನು ಬಳಸ್ತಾರೆ. ಆದ್ರೆ ಈ ಪ್ಲಾಸ್ಟಿಕ್ ಪಾಟ್ ಗಳು ಪರಿಸರಕ್ಕೆ ಹಾನಿಕರ. ಅಲ್ದೆ ಗಿಡಗಳ ಬೆಳವಣಿಗೆಗೆ ಉತ್ತಮವಲ್ಲ. ಹಾಗಾಗಿ ಕಸದ ಬುಟ್ಟಿ ಸೇರುವ ಕಾರ್ಡ್ ಬೋರ್ಡ್ ಬಳಸಿ ಪಾಟ್ ತಯಾರಿಸಿ.

37
ಹಣ ಉಳಿತಾಯ

ಮಾರ್ಕೆಟ್ ನಲ್ಲಿ ಸಿಗುವ ಪಾಟ್ ಗಳ ಬೆಲೆ 60 – 100 ರೂಪಾಯಿ ಮೇಲಿದೆ. ದೊಡ್ಡ ಗಾರ್ಡನ್ ಮಾಡೋರಿಗೆ ಇದು ದುಬಾರಿ ಅನ್ನಿಸ್ಬಹುದು. ಅದೇ ಈ ಕಾರ್ಡ್ ಬೋರ್ಡ್ ಬಳಸಿ ಪಾಟ್ ತಯಾರಿಸಿದ್ರೆ ನೀವು ಹಣ ಉಳಿಸ್ಬಹುದು. ಮನೆಯ ಮೂಲೆಯಲ್ಲಿರುವ ಕಾರ್ಡ್ ಬೋರ್ಡ್ ಗಳನ್ನು ಈಗ್ಲೇ ತೆಗೆದು ಪಾಟ್ ತಯಾರಿಸಿ.

47
ಪಾಟ್ ತಯಾರಿಗೆ ಅಗತ್ಯವಿರುವ ವಸ್ತುಗಳು

ಕಾರ್ಡ್ ಬೋರ್ಡ್ ಪಾಟ್ ತಯಾರಿಸಲು,  ನೀವು ಹಣ ಖರ್ಚು ಮಾಡ್ಬೇಕಾಗಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಪಾಟ್‌ ತಯಾರಿಸಬಹುದು. ಕಾರ್ಡ್‌ ಬೋರ್ಡ್‌ ಪಾಟ್‌ ತಯಾರಿಸಲು ಕಾರ್ಡ್‌ ಬೋರ್ಡ್‌ ಬಾಕ್ಸ್‌, ಟಿನ್ ಡಬ್ಬ ಅಥವಾ ಗಾಜಿನ ಜಾರ್ ಜೊತೆ ನೀರಿನ ಅಗತ್ಯವಿದೆ.

57
ಪಾಟ್ ತಯಾರಿಸುವ ವಿಧಾನ

ಮೊದಲು ಕಾರ್ಡ್ಬೋರ್ಡ್ ತೆಗೆದುಕೊಂಡು, ಅದರಲ್ಲಿ ಯಾವುದೇ ಲೇಬಲ್, ಟೇಪ್ ಇರದಂತೆ ಕ್ಲೀನ್ ಮಾಡಿ. ನಂತ್ರ ಒಂದು ಪಾತ್ರೆಗೆ ನೀರನ್ನು ಹಾಕಿ, ಕಾರ್ಡ್ಬೋರ್ಡ್ ನೆನೆಹಾಕಿ. ಸುಮಾರು 15 ನಿಮಿಗಳ ಕಾಲ ನೀವು ಕಾರ್ಡ್ಬೋರ್ಡ್ ನೆನೆಹಾಕಬೇಕು. ನಂತ್ರ ಕಾರ್ಡ್ಬೋರ್ಡನ್ನು ಸ್ಟ್ರಿಪ್ಗಳಾಗಿ ಕತ್ತರಿಸಿ, ಗಾಜಿನ ಜಾರ್ ಅಥವಾ ಖಾಲಿ ಟಿನ್ ಡಬ್ಬಿಯ ಸುತ್ತು ಮತ್ತು ಕೆಳಭಾಗದಲ್ಲಿ ಸುತ್ತಿ. ನಂತ್ರ ಕಾರ್ಡ್ಬೋರ್ಡ ಗಾಜಿಗೆ ಅಂಟಿಕೊಳ್ಳುವ ಮೊದಲು ಅದನ್ನು ಬೇರ್ಪಡಿಸಿ.

67
ಗಿಡ ನೆಡಲು ಪಾಟ್ ಸಿದ್ಧ

ನೀವು ಗಾಜಿನ ಜಾರಿನಿಂದ ಬೇರ್ಪಡಿಸಿದ ಕಾರ್ಡ್ ಬೋರ್ಡ್ ಜಾರ್ ಆಕಾರಕ್ಕೆ ಬಂದಿರುತ್ತೆ. ಇದ್ರೊಳಗೆ ಮಣ್ಣಿ ಹಾಗೂ ಬೀಜವನ್ನು ಹಾಕಿ ನೀವು ಗಿಡನೆಡಬಹುದು. ಇದನ್ನು ನೀವು ನೇರವಾಗಿ ಮಣ್ಣಿಲ್ಲಿ ಇಡಬಹುದು. ಕಾರ್ಡ್ಬೋರ್ಡ್ ಸಹಜವಾಗಿ ಕರಗುತ್ತದೆ. ಬೇರುಗಳು ಸುಲಭವಾಗಿ ಹೊರಗೆ ಬೆಳೆಯಬಹುದು.

77
ಕಾರ್ಡ್ ಬೋರ್ಡ್‌ ಪ್ರಯೋಜನ

ಗಿಡವನ್ನು ಬೇರೆಡೆ ನೆಟ್ಟಾಗ ಅದು ಒಣಗುವ ಅಥವಾ ಸಾಯುವ ಸಮಸ್ಯೆ ಕಾಡುತ್ತದೆ. ಆದ್ರೆ ಕಾರ್ಡ್ಬೋರ್ಡ್ ಪಾಟಿನಲ್ಲಿ ಈ ಸಮಸ್ಯೆ ಇರೋದಿಲ್ಲ. ನೀವು ನೇರವಾಗಿ ಮಣ್ಣಿನಲ್ಲಿ ಈ ಕಾರ್ಡ್ಬೋರ್ಡ್ ಪಾಟ್ ಇಟ್ಟಾಗ ಕಾರ್ಡ್ಬೋರ್ಡ್ ಕೊಳೆಯುತ್ತದೆ. ಈ ಹ್ಯಾಕ್ ಬೇರುಗಳು ಮಣ್ಣಿನಲ್ಲಿ ಸರಾಗವಾಗಿ ಮತ್ತು ಅಡೆತಡೆಯಿಲ್ಲದೆ ಬೆಳೆಯಲು ಅನುವು ಮಾಡಿಕೊಡುತ್ತದೆ. ಕಾರ್ಡ್ಬೋರ್ಡ್ ಅನ್ನು ಮಣ್ಣಿನಲ್ಲಿ ಕೊಳೆಯಲು ಬಿಟ್ಟಾಗ, ಅದು ಸಾವಯವ ಪದಾರ್ಥವನ್ನು ಸೇರಿಸುತ್ತದೆ. ಮಣ್ಣಿನ ಪೋಷಕಾಂಶದ ಮಟ್ಟವನ್ನು ಹೆಚ್ಚಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories