Python: ಮಳೆಗಾಲದಲ್ಲಿ ಹೆಬ್ಬಾವು ಮನೆಗೆ ಬರದಂತೆ ತಡೆಯುವ ಅಚ್ಚರಿಯ ವಿಧಾನ ಇಲ್ಲಿವೆ

Published : Sep 23, 2026, 12:17 PM IST

ಮಳೆಗಾಲದಲ್ಲಿ ಹೆಬ್ಬಾವುಗಳು ಸುರಕ್ಷಿತ ಸ್ಥಳ ಹುಡುಕಿಕೊಂಡು ಮನೆಗಳತ್ತ ಬರುವ ಸಾಧ್ಯತೆ ಇರುತ್ತದೆ. ಇವುಗಳನ್ನು ತಡೆಯಲು ಮನೆಯ ಸುತ್ತಮುತ್ತ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

PREV
15
ಹೆಬ್ಬಾವು

ಮಳೆಗಾಲದಲ್ಲಿ ಹೆಬ್ಬಾವು ಸೇರಿದಂತೆ ಎಲ್ಲಾ ಸರೀಸೃಪಗಳು ಸುರಕ್ಷಿತ ಸ್ಥಳ ಹುಡುಕಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಮನೆಗಳ ಸಮೀಪ ಹಾವುಗಳು ಬರುವ ಸಾಧ್ಯತೆಗಳಿರುತ್ತವೆ. ಈ ಸಮಯದಲ್ಲಿ ಮನೆಯತ್ತ ಹೆಬ್ಬಾವು ಬರದಂತೆ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಹೆಬ್ಬಾವುಗಳು ಸುರಕ್ಷಿತ ತಾಣಗಳನ್ನು ಹುಡುಕುತ್ತಾ ಮನೆಗಳು, ತೋಟಗಳತ್ತ ಬರಬಹುದು.

25
ಹೆಬ್ಬಾವು ಬಂದಾಗ ಹೀಗೆ ಮಾಡಬೇಡಿ!
  • ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡಿ ಹೆಬ್ಬಾವು ಹಿಡಿಯಲು ಹೋಗಬೇಡಿ
  • ಹೆಬ್ಬಾವು ಪ್ರವೇಶಿಸಿರುವ ಕೋಣೆ ಬಾಗಿಲು ಮುಚ್ಚಿ
  • ಹೆಬ್ಬಾವಿಗೆ ಹಿಂಸೆ ನೀಡದೇ, ರಕ್ಷಣಾ ತಂಡಕ್ಕೆ ಮಾಹಿತಿ ನೀಡಿ
  • ಹೆಬ್ಬಾವುಗಳಿಂದ ಅಂತರ ಕಾಯ್ದುಕೊಂಡು ಉರಗತಜ್ಞರಿಂದ ಕರೆಸಿ
35
ಮನೆಯಿಂದ ಹೆಬ್ಬಾವು ಬರದಂತೆ ಏನು ಮಾಡಬೇಕು?
  • ಮನೆ ಸುತ್ತಲೂ ಎತ್ತರದ ಹುಲ್ಲು, ಪೊದೆಗಳಿದ್ರೆ ತೆರವುಗೊಳಿಸಿ.
  • ಮನೆ ವ್ಯಾಪ್ತಿಯಲ್ಲಿ ಕಸ ಸೇರಿದಂತೆ ಅನಗತ್ಯ ತ್ಯಾಜ್ಯ ಸಂಗ್ರಹಿಸಬೇಡಿ
  • ಮನೆಯಲ್ಲಿ ಇಲಿಗಳ ಸಂಖ್ಯೆ ಕಡಿಮೆಗೊಳಿಸಿ
  • ಬಾಗಿಲು, ಕಿಟಕಿಗಳ ಸುತ್ತಲಿನ ರಂಧ್ರಗಳನ್ನ ಮುಚ್ಚಿ
45
ಹೆಬ್ಬಾವು ಓಡಿಸಲು ಹೀಗೆ ಮಾಡಿ
  • ಒಣಗಿದ ಸಗಣಿಗೆ ಬೆಂಕಿ ಹೆಚ್ಚಿ ಹೊಗೆ ಹಾಕಿ.
  • ಹಳೆ ಕಾಟನ್ ಬಟ್ಟೆಗಳನ್ನು ಸುಡಬೇಕು.
  • ಬೆಳ್ಳುಳ್ಳಿ ಅಥವಾ ಈರುಳ್ಳಿ ಸಿಪ್ಪೆಯಿಂದ ಹೊಗೆಯನ್ನುಂಟು ಮಾಡಬೇಕು. ಈ ಹೊಗೆ ವಾಸನೆಯಿಂದ ಹಾವುಗಳು ಮನೆಯತ್ತ ಸುಳಿಯಲ್ಲ.
55
ಶೌಚಾಲಯ ಮತ್ತು ಸ್ನಾನಗೃಹ
  • ಸ್ನಾನಗೃಹ ಅಥವಾ ಶೌಚಾಲಯದಲ್ಲಿ ಹಾವನ್ನು ನೋಡಿದರೆ, ಅದನ್ನು ತೊಂದರೆಗೊಳಿಸಲು ಅಥವಾ ಬರಿಗೈಯಿಂದ ಹಿಡಿಯಲು ಪ್ರಯತ್ನಿಸಬೇಡಿ.
  • ಶೌಚಾಲಯ ಅಥವಾ ಸ್ನಾನಗೃಹವನ್ನು ಬಳಸುವ ಮೊದಲು ಯಾವಾಗಲೂ ಸುತ್ತಲೂ ಒಮ್ಮೆ ಗಮನಿಸಿ.
  • ಮನೆಯಲ್ಲಿ ಹಾವು ಕಂಡುಬಂದರೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ ಮತ್ತು ತಕ್ಷಣವೇ ವನ್ಯಜೀವಿ ರಕ್ಷಣಾ ತಂಡವನ್ನು (Snake Rescuers) ಸಂಪರ್ಕಿಸಿ.
  • ರಾತ್ರಿ ವೇಳೆ ಹೊರಗೆ ಹೋಗುವಾಗ ಕಡ್ಡಾಯವಾಗಿ ಟಾರ್ಚ್/ಬ್ಯಾಟರಿ ಬಳಸಿ ಮತ್ತು ಸೂಕ್ತವಾದ ಬೂಟುಗಳನ್ನು ಧರಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories