ಮೈದಾ ಬೇಡ, ಜಂಕ್‌ನಿಂದ ದೂರ, ಮನೆಯಲ್ಲಿ ಸುಲಭವಾಗಿ ಮಾಡಿ ಆರೋಗ್ಯಕರ ಪಿಜ್ಜಾ, ಇಲ್ಲಿದೆ ಟಿಪ್ಸ್

Published : Sep 23, 2026, 11:11 AM IST

ಮಕ್ಕಳಿಂದ ಹಿಡಿದು ಎಲ್ಲರಿಗೂ ಪಿಜ್ಜಾ ಅಚ್ಚು ಮೆಚ್ಚು. ಆದರೆ ಹೊರಗಿನ ಪಿಜ್ಜಾಗಳಲ್ಲಿ ಮೈದಾ, ಮಸಾಲೆಗಳ ಬಳಕೆ ಆರೋಗ್ಯಕ್ಕೆ ಉತ್ತಮಲ್ಲ. ಹೀಗಾಗಿ ಮನೆಯಲ್ಲಿ ಆರೋಗ್ಯಕ್ಕೂ ಉತ್ತಮ, ಅತ್ಯಂತ ರುಚಿಕರ ಪಿಜ್ಜಾವನ್ನು ಸುಲಭವಾಗಿ ಮಾಡಲು ಸಾಧ್ಯವಿದೆ. ಇಲ್ಲಿದೆ ರೆಸಿಪಿ.

PREV
15
ಅತ್ಯಂತ ರುಚಿಕ ಪಿಜ್ಜಾ

ಪಿಜ್ಜಾ ಯಾರಿಗೆ ಇಷ್ಟವಿಲ್ಲ ಹೇಳಿ? ಚೀಸ್ ಪಿಜ್ಜಾ, ಚಿಕನ್ ಪಿಜ್ಜಾ, ಮೆಕ್ಸಿಕನ್ ಮ್ಯಾಂಗೋ, ಪನ್ನೀರ್ ಮಕಾನಿ, ಸ್ಮೋಕಿ ಬಿಬಿಕ್ಯೂ, ಫೈರಿ ಶೆಜ್ವಾನ್, ಮಾರ್ಗರಿಟಾ, ಕಂಟ್ರಿ ಫೀಸ್ಟ್ ಸೇರಿದಂತೆ ಬಾಯಲ್ಲಿ ನೀರೂರಿಸುವ ನೂರಾರು ಬಗೆಯ ಪಿಜ್ಜಾ ಲಭ್ಯವಿದೆ. ಚೀಸ್‌ನಿಂದ ತುಂಬಿದ , ಕ್ರಂಚಿ ಸೇರಿದಂತೆ ಹಲವು ಬಗೆಯ ಪಿಜ್ಜಾಗಳು ಎಲ್ಲರನ್ನು ಆಕರ್ಷಿಸುತ್ತದೆ. ಆದರೆ ರೆಸ್ಟೋರೆಂಟ್, ಪಿಜ್ಜಾ ಶಾಪ್‌ಗಳಲ್ಲಿ ಸಿಗುವ ಪಿಜ್ಜಾಗಳ ತಯಾರಿಕೆಯಿಂದ ಅವು ಜಂಕ್ ಫುಡ್ ಆಗಿದೆ. ಹೀಗಾಗಿ ಆರೋಗ್ಯಕ್ಕೂ ಉತ್ತಮವಲ್ಲ. ಆದರೆ ಆರೋಗ್ಯಕರ ಹಾಗೂ ರುಚಿಕರ ಪಿಜ್ಜಾವನ್ನು ಸರಳ ಹಾಗೂ ಸುಲಭವಾಗಿ ಮನೆಯಲ್ಲಿ ತಯಾರಿಸಲು ಸಾಧ್ಯವಿದೆ.

25
ಆರೋಗ್ಯಕರ ಪಿಜ್ಜಾ

ರೆಸ್ಟೋರೆಂಟ್‌ಗಳಲ್ಲಿ ಸೇರಿದಂತೆ ಹೊರಗಿನ ಪಿಜ್ಜಾ ತಯಾರಿಕೆಯಲ್ಲಿ ಮೈದಾ ಬಳಸುತ್ತಾರೆ. ಮೈದಾ ಸೇವೆನೆ ಆರೋಗ್ಯಕ್ಕೆ ಉತ್ತಮವಲ್ಲ. ಜೊತೆಗೆ ಪಿಜ್ಜಾಗೆ ಬಳಸುವ ಇತರ ಮಸಾಲೆ ಪದಾರ್ಥಗಳು ಸೇರಿಕೊಂಡಾಗ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯಲ್ಲಿ ಮೈದಾ, ಜಂಕ್‌ಗಳಿಂದ ದೂರ ಉಳಿದು ಆರೋಗ್ಯಕರ ಪಿಜ್ಜಾ ತಯಾರಿಸಬಹುದು.

35
ಪಿಜ್ಜಾ ತಯಾರಿಗೆ ಬೇಕಾದಾ ಸಾಮಾಗ್ರಿ

ಮೈದಾ ಬದಲು ಇಲ್ಲಿ ಗೋಧಿ ಉತ್ತಮ. ಪ್ರಮುಖವಾಗಿ ಗೋಧಿಯಲ್ಲಿ ಉತ್ತಮ ತಳಿಯ ಗೋಧಿ ಹಿಟ್ಟು ಅವಶ್ಯಕತೆ ಇದೆ. ಸ್ಪೆಲ್ಟ್ ಅಥವಾ ಡಿಂಕಲ್ ವೀಟ್ ಎಂದು ಕರೆಯುವ ಗೋಧಿ ಹಿಟ್ಟು ಹಾಗೂ ಹೋಲ್‌ಮೀಲ್ ಗೋಧಿ ಬ್ರೆಡ್ (wholemeal ) ಬಳಸಬೇಕು. ಸ್ಪೆಲ್ಟ್ ಗೋಧಿ ಹಿಟ್ಟು ಹಾಗೂ ಹೋಲ್‌ಮೀಲ್ ಗೋಧಿ ಬ್ರೆಡ್ ಸರಿಯಾಗಿ ಕಲಸಬೇಕು. ಇನ್ನು ಟೋಮ್ಯಾಟೋ ಸಾಸ್, ಹೆಚ್ಚಿದ ಟೋಮ್ಯಾಟೋ ಪ್ರಮುಖವಾಗಿ ಬೇಕು.

45
ರುಚಿ ಹಾಗೂ ಆಯ್ಕೆ ತಕ್ಕ ಸಾಮಾಗ್ರಿ

ವೆಜ್ ಅಥವಾ ನಾನ್ ವೆಜ್ ಪಿಜ್ಜಾ ಬೇಕಾದ ಸಾಮಾಗ್ರಿ ರೆಡಿ ಮಾಡಿಕೊಳ್ಳಿ, ನಾನ್ ವೆಜ್ ಆದರೆ ಚಿಕನ್ ವೆಜ್ ಆದರೆ ಪನ್ನೀರ್ ಅಥವಾ ತರಕಾರಿ ನಿಮ್ಮ ಆಯ್ಕೆಗೆ ತಕ್ಕಂತೆ ಸಾಮಾಗ್ರಿಗಳು ಇರಲಿ. ಯೀಸ್ಟ್ ಹಾಗೂ ಆಲೀವ್ ಎಣ್ಣೆ ಉತ್ತಮ. ಒಣ ಮೆಣಸಿನ ಫ್ಲೇಕ್ಸ್, ಒಣಗಿಸದ ಮಸಾಲೆಗಳು, ಈರುಳ್ಳಿ, ಕಪ್ಪು ಆಲೀವ್ಸ್, ಮಷ್ರೂಮ್ ಸೇರಿದಂತೆ ಆಲಂಕಾರಿಕ ಹಾಗೂ ಆರೋಗ್ಯಕರ ವಸ್ತುಗಳ ಬಳಕೆ ಮಾಡಿ.

55
ತಯಾರಿಸುವ ವಿಧಾನ

ರೆಡಿ ಮಾಡಿದ ಹಿಟ್ಟನ್ನು ಹೆಚ್ಚು ಹರಡಬೇಕು. ಪ್ರಮುಖವಾಗಿ ತೆಳುವಾಗುವಂತೆ. ಹಿಟ್ಟಿನ ಡೋವ್ ಮೇಲೆ ವೆಜ್ ಪಿಜ್ಜಾ ಆದರೆ ಬೇಕಾಗುವ ತರಕಾರಿ, ಅಲಂಕಾರಿ ಆಹಾರ ವಸ್ತುಗಳ ಬಳಕೆ ಮಾಡಿ. ಚಿಕನ್ ಆಗಿದ್ದರೆ ಚಿಕನ್ ಸೇರಿದಂತೆ ಮಶ್ರೂಮ್ ವಸ್ತುಗಳು, ಮಸಾಲೆಗಳನ್ನು ಹಾಕಿ. ಮೇಲೆ ಹಾಕುವ ಟಾಪಿಂಹ್ಸ್ ಹೆಚ್ಚು ಸೇರಿಸಿದಂತೆ ಪಿಜ್ಜಾ ದಪ್ಪ ಹೆಚ್ಚಾಗುತ್ತದೆ. ಬಳಿಕ ಓವನ್ ಮೂಲಕ ಬೇಯಿಸಿಕೊಳ್ಳಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories