Oil cleaning tips : ಪೂರಿ- ಪಕೋಡಾ ಕರಿಯುವಾಗ ಎಣ್ಣೆ ಕಪ್ಪಾಗ್ತಿದ್ರೆ ಈ ಸರಳ ಉಪಾಯ ಮಾಡಿ

Published : Sep 23, 2026, 12:02 PM IST

ಪೂರಿ, ಪಕೋಡಾ ಕರಿಯುವಾಗ ಕಾದ ಎಣ್ಣೆ ಕಪ್ಪಾಗುತ್ತೆ. ಅಲ್ದೆ ಸುಟ್ಟ ವಾಸನೆ ಬರಲು ಶುರುವಾಗುತ್ತೆ.ಒಂದೇ ಎಣ್ಣೆಯನ್ನು ಅನೇಕ ಬಾರಿ ಯೂಸ್‌ ಮಾಡ್ಬೇಕು ಎನ್ನುವವರಿಗೆ ಇದು ದೊಡ್ಡ ಸಮಸ್ಯೆಯಾಗುತ್ತೆ. ಸಣ್ಣ ಮುನ್ನೆಚ್ಚರಿಕೆ ತೆಗೆದುಕೊಂಡ್ರೆ ಕರಿಯುವ ಎಣ್ಣೆ ಕಪ್ಪಗಾಗಿ, ಸುಟ್ಟ ವಾಸನೆ ಬರೋದನ್ನು ತಡೆಯಬಹುದು.

PREV
15
ಎಣ್ಣೆ ಕಪ್ಪಾಗಲು ಕಾರಣ ಏನು?

ಪೂರಿ ಅಥವಾ ಪಕೋಡಾ ಕರಿಯುವಾಗ ಹಿಟ್ಟು ಅಥವಾ ಬ್ಯಾಟರ್ನ ಸಣ್ಣ ತುಂಡುಗಳು ಎಣ್ಣೆಯಲ್ಲಿ ಬೀಳುತ್ತವೆ. ಅವು ಕಾದ ಎಣ್ಣೆಯಲ್ಲೇ ಉಳಿದು ಸುಟ್ಟುಹೋದಾಗ ಎಣ್ಣೆಯ ಬಣ್ಣ ಕಪ್ಪಾಗಲು ಶುರುವಾಗುತ್ತದೆ. ಈ ಸುಟ್ಟ ತುಂಡುಗಳು ಪೂರಿ, ಪಕೋಡಾಗಳಿಗೆ ಅಂಟಿಕೊಂಡರೆ ಅವುಗಳ ರುಚಿ ಮತ್ತು ವಾಸನೆಯ ಮೇಲೂ ಪರಿಣಾಮ ಬೀರುತ್ತದೆ.

25
ಬ್ಯಾಟರ್ ಮುಖ್ಯ

ಪಕೋಡಾ ಮಾಡಲು ಬಳಸುವ ಬ್ಯಾಟರ್ ತುಂಬಾ ತೆಳ್ಳಗಿದ್ದರೆ ಸಣ್ಣ ಸಣ್ಣ ತುಂಡುಗಳು ಎಣ್ಣೆಯಲ್ಲಿ ಹೆಚ್ಚು ಬೀಳಬಹುದು. ಅಷ್ಟೇ ಅಲ್ಲ, ತೆಳ್ಳಗಿನ ಬ್ಯಾಟರ್ ಎಣ್ಣೆಯಲ್ಲಿ ಹರಡಿ, ಸಣ್ಣ ತುಂಡುಗಳಾಗಿ ಬೇರ್ಪಟ್ಟು ಸುಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಬ್ಯಾಟರ್ ತುಂಬಾ ತೆಳ್ಳಗಿರಲು ಬಿಡಬೇಡಿ. ತುಂಬಾ ಗಟ್ಟಿಯಾಗಿಯೂ ಇರಬಾರದು. ಸರಿಯಾದ ಹದ ಕಾಯ್ದುಕೊಳ್ಳಿ.

35
ಹೊಗೆ ಬರುವಷ್ಟು ಬಿಸಿ ಬೇಡ

ಎಣ್ಣೆಯಿಂದ ಹೊಗೆ ಬರಲು ಶುರುವಾದರೆ ಎಣ್ಣೆ ಚೆನ್ನಾಗಿ ಕಾದಿದೆ ಅಂತ ಹಲವರು ಅಂದುಕೊಳ್ಳುತ್ತಾರೆ. ಆದರೆ ಎಣ್ಣೆಯನ್ನು ಅತಿಯಾಗಿ ಬಿಸಿ ಮಾಡಿದರೆ ಪೂರಿ ಅಥವಾ ಪಕೋಡಾದ ಹೊರಭಾಗ ಬೇಗ ಸುಡುವ ಸಾಧ್ಯತೆ ಇರುತ್ತದೆ. ಜೊತೆಗೆ ಎಣ್ಣೆಯಲ್ಲಿ ಬೀಳುವ ಸಣ್ಣ ತುಂಡುಗಳೂ ಬೇಗ ಕಪ್ಪಾಗುತ್ತವೆ. ಹಾಗಾಗಿ ಕರಿಯುವಾಗ ಎಣ್ಣೆಯ ಉಷ್ಣತೆಯನ್ನು ಸಾಧ್ಯವಾದಷ್ಟು ಒಂದೇ ರೀತಿಯಲ್ಲಿ ಕಾಪಾಡಿಕೊಳ್ಳುವುದು ಮುಖ್ಯ.

45
ಇನ್ನೊಮ್ಮೆ ಕರಿಯುವ ಮುನ್ನ ಈ ಕೆಲಸ ಮಾಡಿ

ಒಂದು ಬಾರಿ ಪೂರಿ ಅಥವಾ ಪಕೋಡಾ ಕರಿದು, ಮತ್ತೊಮ್ಮೆ ಪೂರಿ ಹಾಕುವ ಮೊದಲು ಎಣ್ಣೆಯಲ್ಲಿ ತೇಲುತ್ತಿರುವ ಸುಟ್ಟ ತುಂಡುಗಳನ್ನು ಸೌಟು ಅಥವಾ ಜಾಲರಿ ಸೌಟಿನಿಂದ ತೆಗೆದುಹಾಕಿ. ಇದಕ್ಕೆ ಕೇವಲ ಕೆಲವು ಸೆಕೆಂಡ್ಗಳೇ ಸಾಕು. ಎಣ್ಣೆಯಲ್ಲಿ ತುಂಬಾ ನೊರೆ ಅಥವಾ ಫೋಮ್ ಕಾಣಿಸಿಕೊಂಡರೆ ತಕ್ಷಣ ಮುಂದಿನ ಪೂರಿ ಹಾಕದೆ ಸ್ವಲ್ಪ ಸಮಯ ಕಾಯುವುದು ಉತ್ತಮ.

55
ಉಳಿದ ಎಣ್ಣೆ ಮತ್ತೆ ಬಳಸುವ ಮುನ್ನ

ಪೂರಿ ಅಥವಾ ಪಕೋಡಾ ಸಂಖ್ಯೆ ಹೆಚ್ಚಿದ್ದು ನಿರಂತರವಾಗಿ ಅದೇ ಎಣ್ಣೆಯಲ್ಲಿ ಕರಿಯುತ್ತಿದ್ದರೆ ಎಣ್ಣೆಯನ್ನು ಗಮನಿಸಿ. ಎಣ್ಣೆಯಿಂದ ವಿಚಿತ್ರವಾದ ಅಥವಾ ತುಂಬಾ ತೀವ್ರವಾದ ವಾಸನೆ ಬರುತ್ತಿದ್ದರೆ, ಹೆಚ್ಚು ಹೊಗೆ ಬರುತ್ತಿದ್ದರೆ ಅಥವಾ ಎಣ್ಣೆ ತುಂಬಾ ಗಟ್ಟಿಯಾಗಿ, ಅಂಟಿಕೊಳ್ಳುವಂತೆ ಕಾಣುತ್ತಿದ್ದರೆ ಅದನ್ನು ಪದೇಪದೆ ಬಳಸಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories