ಬೆಂಡೇಕಾಯಿಯು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯ ವೃದ್ಧಿಗೂ ಅತ್ಯಂತ ಉಪಯುಕ್ತವಾಗಿದೆ. ಕೊರಿಯನ್ ಬ್ಯೂಟಿಷಿಯನ್ ತಿಳಿಸಿರುವಂತೆ, ಬೆಂಡೇಕಾಯಿ ಬೀಜದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ಇದು ರಕ್ತದ ಸಕ್ಕರೆ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.
ಬೆಂಡೇಕಾಯಿಯಿಂದ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳು ಇವೆ. ಇವು ಲೋಳೆ ಲೋಳೆ ಎನ್ನಿಸಿದರೂ, ಇವುಗಳಿಂದ ಮಾಡುವ ಖಾದ್ಯಗಳು ಹಲವರಿಗೆ ಪ್ರಿಯವಾಗಿವೆ. ಬೆಂಡೇಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ1, ಮ್ಯಾಗ್ನೀಸಿಯಮ್, ಫೋಲೇಟ್ ಮತ್ತು ನಾರಿನಾಂಶ ಸಾಕಷ್ಟು ಪ್ರಮಾಣದಲ್ಲಿದೆ.
26
ಹಲವಾರು ರೀತಿ ಪ್ರಯೋಜನ
ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
36
ಸೌಂದರ್ಯ ವೃದ್ಧಿ
ಆದರೆ ಬೆಂಡೇಕಾಯಿಯಿಂದ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಬಹುದು ಎನ್ನೋದು ನಿಮಗೆ ಗೊತ್ತಾ? ಕೋರಿಯನ್ ಯುವತಿಯರು ಫಳಫಳ ಹೊಳೆಯುವ ತ್ವಚೆಗೆ ಫೇಮಸ್ ಆದವರು. ಇದೇ ಕಾರಣಕ್ಕೆ ಕೋರಿಯನ್ ಬ್ಯೂಟಿ ಟಿಪ್ಸ್ಗೆ ಅದರದ್ದೇ ಆದ ಮಹತ್ವವಿದೆ.
ಇದೀಗ ಕೋರಿಯನ್ ಬ್ಯೂಟಿಷಿಯನ್ ಒಬ್ಬಾಕೆ ಬೆಂಡೇಕಾಯಿ ಬೀಜದಿಂದ ಬ್ಯೂಟಿ ಹೆಚ್ಚಿಸಿಕೊಳ್ಳುವ ಟಿಪ್ಸ್ ಕೊಟ್ಟಿದ್ದಾಳೆ. ಮೊದಲಿಗೆ ಬೆಂಡೇಕಾಯಿಯನ್ನು ಸ್ಟೀಮ್ನಲ್ಲಿ ಹಾಕಿ ಬೇಯಿಸಬೇಕು. ಬಳಿಕ ಅದರ ಎರಡೂ ತುದಿಗಳನ್ನು ಕತ್ತರಿಸಬೇಕು.
56
ಬೀಜವನ್ನು ತೆಗೆಯಬೇಕು
ಇಷ್ಟಾದ ಬಳಿಕ ಮಧ್ಯೆ ಸೀಳಿದರೆ ಬೀಜ ಕಾಣಿಸುತ್ತದೆ. ಆ ಬೀಜವನ್ನು ತೆಗೆದು ಚಮಚದ ಸಹಾಯದಿಂದ ಸ್ಮ್ಯಾಷ್ ಮಾಡಬೇಕು. ಕ್ವಾಲಿಟಿ ಹೆಚ್ಚಾಗಿದ್ದರೆ ಮಿಕ್ಸಿಯಲ್ಲಿ ಬೇಕಿದ್ದರೆ ರುಬ್ಬಿಕೊಳ್ಳಬಹುದು.
66
ಮುಖಕ್ಕೆ ಹಚ್ಚಿ
ಬಳಿಕ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಬೇಕು. ಅದನ್ನು ಮುಖದ ಮೇಲೆ 15 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ತೊಳೆಯಬೇಕು. ಹೀಗೆ ಪದೇ ಪದೇ ಮಾಡುತ್ತಿದ್ದರೆ ಮುಖದ ಕಾಂತಿ ಹೆಚ್ಚುತ್ತದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.