Snake Plant: ಸಾನ್ಸೆವೇರಿಯಾ ಟ್ರೈಫಾಸಿಯಾಟಾ ಎಂದೂ ಕರೆಯಲ್ಪಡುವ ಸ್ನೇಕ್ ಪ್ಲಾಂಟ್ ಅನ್ನು ಹೆಚ್ಚಾಗಿ ಲೀವಿಂಗ್ ರೂಂನಲ್ಲಿ ಇರಿಸಲಾಗುತ್ತದೆ. ನೀವಿದನ್ನು ಅನೇಕ ಮನೆಗಳಲ್ಲಿ ನೋಡಿರಬಹುದು. ಆದರೆ ಕೆಲವು ಜನರು ಮಾತ್ರ ಇದರ ಹೆಸರು ಕೇಳಿಯೇ ಭಯಬೀಳುತ್ತಾರೆ.
ಬಹುತೇಕರಿಗೆ ಒಳಾಂಗಣ ಸಸ್ಯಗಳ(Indoor plants)ಮೇಲೆ ಹೆಚ್ಚಿನ ಒಲವು. ಸಿಕ್ಕಾಪಟ್ಟೆ ಕ್ರೇಜ್ ಕೂಡ. ಈ ಹಿನ್ನೆಲೆಯಲ್ಲಿ ಒಳಾಂಗಣ ಬಳಕೆಗೆ ಯಾವ ಸಸ್ಯಗಳು ಸೂಕ್ತ ಮತ್ತು ಬಾಲ್ಕನಿಯ ಹೊರಗೆ ಯಾವುದಿಡಬೇಕು ಎಂದು ಯಾವಾಗ್ಲೂ ಕನ್‌ಫ್ಯೂಸ್ ಆಗಿರ್ತಾರೆ. ಮತ್ತೆ ಕೆಲವರಿಗೆ ಇನ್‌ಡೋರ್ ಪ್ಲಾಂಟ್ ಅಂದಾಗ ಮೊದಲು ನೆನಪಾಗುವುದೇ ಸ್ನೇಕ್ ಪ್ಲಾಂಟ್. ನಾವಿದನ್ನು ಹೆಚ್ಚಿನವರ ಮನೆಯಲ್ಲಿ ಕಾಣಬಹುದು.
25
ಸ್ನೇಕ್ ಪ್ಲಾಂಟ್ ಎಂದು ಏಕೆ ಕರೆಯುತ್ತಾರೆ?
ವಿಶೇಷವೆಂದರೆ ಸ್ನೇಕ್ ಪ್ಲಾಂಟ್ ಹೆಸರು ಕೇಳೇ ಕೆಲವರು ಹೆದರುತ್ತಾರೆ. ಸ್ನೇಕ್ ಹೆಸರಿನ ಈ ಸಸ್ಯದಲ್ಲಿ ಏನೋ ಇರಬೇಕು ಎಂದು ಭಾವಿಸುತ್ತಾರೆ. ಇದನ್ನು ಹಾವಿನೊಂದಿಗೆ ಕಂಪೇರ್ ಮಾಡುವವರು ಇದ್ದಾರೆ. ಅಷ್ಟಕ್ಕೂ ಈ ಪ್ಲಾಂಟ್‌ಗೆ ಸ್ನೇಕ್ ಪ್ಲಾಂಟ್ ಎಂದು ಏಕೆ ಕರೆಯುತ್ತಾರೆ ಮತ್ತು ಇದಕ್ಕೆ ಹಾವುಗಳೊಂದಿಗೆ ಯಾವುದೇ ಸಂಬಂಧವಿದೆಯೇ ಎಂದು ನೋಡುವುದಾದರೆ…
35
ಹಲವಾರು ಪ್ರಯೋಜನಗಳಿವೆ
ಸಾನ್ಸೆವೇರಿಯಾ ಟ್ರೈಫಾಸಿಯಾಟಾ ಎಂದೂ ಕರೆಯಲ್ಪಡುವ ಈ ಗಿಡವನ್ನು ಹೆಚ್ಚಾಗಿ ಲೀವಿಂಗ್ ರೂಂ ಮತ್ತು ಮಲಗುವ ಕೋಣೆಗಳಲ್ಲಿ ಇಡಲಾಗುತ್ತದೆ. ಈ ಸಸ್ಯಕ್ಕೆ ಹೆಚ್ಚಿನ ಆರೈಕೆ ಬೇಕಿಲ್ಲ. ಆದರೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಗಾಳಿ ಶುದ್ಧೀಕರಿಸುವ ಗುಣವನ್ನೂ ಹೊಂದಿರುವ ಅನೇಕ ಸಸ್ಯಗಳಲ್ಲಿ ಇದೂ ಒಂದಾಗಿದೆ. ಸ್ನೇಕ್ ಪ್ಲಾಂಟ್ ಗಾಳಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ ಮತ್ತು ಅದನ್ನು ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಮಾಲಿನ್ಯವು ಅಪಾಯಕಾರಿ ಮಟ್ಟವನ್ನು ತಲುಪಿದಾಗ ಇದು ಉಪಯುಕ್ತವಾಗಿರುತ್ತದೆ.
ಈಗ ಈ ಗಿಡಕ್ಕೆ ಸ್ನೇಕ್ ಪ್ಲಾಂಟ್ ಎಂದು ಹೆಸರು ಬರಲು ಕಾರಣವೇನು ಎಂದು ತಿಳಿದುಕೊಳ್ಳೋಣ. ಈ ಮೊದಲೇ ಹೇಳಿದಂತೆ ಇದರ ಮೂಲ ಹೆಸರು ಸ್ಯಾನ್ಸೆವೇರಿಯಾ ಟ್ರೈಫಾಸಿಯಾಟಾ. ಆದರೆ ಇದನ್ನು ಸಾಮಾನ್ಯವಾಗಿ ಸ್ನೇಕ್ ಪ್ಲಾಂಟ್ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರ ಆಕಾರದಿಂದಾಗಿ ಇದಕ್ಕೆ ಈ ಹೆಸರು ಬಂದಿದೆ. ಇದರ ಎಲೆಗಳ ಮೇಲಿನ ವಿನ್ಯಾಸವು ಹಾವಿನ ದೇಹವನ್ನು ಹೋಲುತ್ತದೆ, ಅದಕ್ಕಾಗಿಯೇ ಇದನ್ನು ಸ್ನೇಕ್ ಪ್ಲಾಂಟ್ ಎಂದು ಕರೆಯಲಾಗುತ್ತದೆ ಅಷ್ಟೇ.
55
ಯಾವುದೇ ಸಂಬಂಧವಿಲ್ಲ
ನೀವು ನೋಡುವ ಹಾಗೆ ಈ ಸಸ್ಯದ ಆಕಾರ ಕೂಡ ಸ್ವಲ್ಪಮಟ್ಟಿಗೆ ಹಾವನ್ನು ಹೋಲುತ್ತದೆ. ಆದರೆ ಈ ಸಸ್ಯಕ್ಕೂ ಹಾವಿಗೂ ಯಾವುದೇ ಸಂಬಂಧವಿಲ್ಲ ಅಥವಾ ಹಾವುಗಳು ಅದರತ್ತ ಆಕರ್ಷಿತವಾಗುವುದಿಲ್ಲ. ಸ್ನೇಕ್ ಪ್ಲಾಂಟ್ ಕೇವಲ ಗಾಳಿಯನ್ನು ಶುದ್ಧೀಕರಿಸುತ್ತದೆ . ಒಮ್ಮೆ ನೆಟ್ಟ ನಂತರ ಸ್ವಲ್ಪ ಶ್ರಮ ಬೇಕಾಗುತ್ತದೆಯಷ್ಟೇ. ಆದ್ದರಿಂದ ನೀವು ಅದನ್ನು ಆರಾಮಾಗಿ ಮನೆಗೆ ತರಬಹುದು.